Breaking News

Laxminews 24x7

ಸರ್ಕಾರಿ ಮಳಿಗೆ ಗಳ ದುರುಪಯೋಗ ಮಾಡುತ್ತಿರುವ ಶಿಂದಿ ಕುರಬೆಟ್ ಗ್ರಾಮ ಪಂಚಾಯತಿ ಮೇಲೆ ಕರವೇ ಆರೋಪ

ಗೋಕಾಕ; ತಾಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಇತ್ತಿಚ್ಚಿಗೆ ತುಂಬಾ ಅಕ್ರಮ ಹಾಗೂ ಅವ್ಯವಹಾರ ಗಳು ಕಂಡು ಬರುತ್ತಿವೆ. ಇಂದು ಗೋಕಾಕ ತಾಲೂಕಿನ ಶಿಂಧಿ ಕುರ್ ಬೇಟ ಗ್ರಾಮದಲ್ಲಿ ಅಕ್ರಮ ನಡೆದಿರುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಆರೋಪ ವ್ಯಕ್ತ ಪಡಿಸಿದರು.   ತಾವು ಕೇಳಿದ ಮಾಹಿತಿ ಕೊಡುತ್ತಿಲ್ಲ ಹಾಗೂ ಗ್ರಾಮ ಪಂಚಾಯತಿ ಅಡಿಯಲ್ಲಿ ನೀಡಿರುವ ಕಟ್ಟಡ ಹಾಗೂ, ಮಳಿಗೆ ಗಳು ಯಾವ ಇಸ್ವಿಯಲ್ಲಾಗಿವೆ ಹಾಗೂ ಇನ್ನಿತರ …

Read More »

ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ

ವಿಜಯಪುರ – ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೀಶ್ವರ ವಿಜಯಪುರಕ್ಕೆ ಭೇಟಿ ನೀಡಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ. ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿಜಯಪುರಕ್ಕೆ ಬಂದಿರುವ ಅವರು, ಯತ್ನಾಳ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲಿದ್ದಾರೆ. ಆದರೆ ಭೇಟಿಯಲ್ಲಿ ಯಾವುದೇ ರಾಜಕೀಯ ಉದ್ದೇಶವಿಲ್ಲ, ರಾಜಕೀಯ ಮಾತುಕತೆ ಇಲ್ಲ ಎಂದಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಯತ್ನಾಳ ಬಹು ಹಿಂದಿನಿಂದಲೇ ಪ್ರಯತ್ನ ನಡೆಸುತ್ತಿದ್ದರೆ ಯೋಗೀಶ್ವರ ಈಚೆಗೆ ಆರಂಭಿಸಿದ್ದಾರೆ. ಇದೇ …

Read More »

ಕೆಂಪೇಗೌಡರು ಒಂದು ಜಾತಿಗೆ ಸೀಮಿತವಲ್ಲ

ವಿಜಯಪುರ: ನಾಡಪ್ರಭು ಕೆಂಪೇ ಗೌಡರು ಒಂದು ಜಾತಿಗೆ ಸೀಮಿತರಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂಟಿಬಿ ನಾಗರಾಜ್‌ ಹೇಳಿದರು. ಹೊಸಕೋಟೆ ನಗರದ ಮಿನಿವಿಧಾನಸೌಧ ಮುಂಭಾಗದಲ್ಲಿಒಕ್ಕಲಿಗರ ಸಂಘದಿಂದ ನಡೆದ ನಾಡ ಪ್ರಭುಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಾಡಪ್ರಭು ಕೆಂಪೇಗೌಡ ಜಯಂತಿ ಯನ್ನು ರಾಜ್ಯದಲ್ಲಿ ಸರಳವಾಗಿ ಸಂಭ್ರಮದಿಂದ ಆಚರಣೆ ಮಾಡಲಾ ಗುತ್ತಿದೆ. 39 ವರ್ಷಗಳ ಕಾಲ ಬೆಂಗ ಳೂರುನಗರವನ್ನುಕಟ್ಟಿ ರಾಜಕೀಯ, ಆರ್ಥಿಕ, ಸ್ವಾವಲಂಬಿ ಶಕ್ತಿಯನ್ನು ತುಂಬಿ ಬೆಂಗಳೂರು ನಗರವನ್ನು ವಿಶ್ವ ವಿಖ್ಯಾತಿಗೊಳಿಸಿದ ಕೀರ್ತಿ …

Read More »

ಪರೀಕ್ಷೆ ನಡೆಸಿ ರಾಜ್ಯ ಸರ್ಕಾರ ಜೀವ ,ಜೀವನ ಎರಡನ್ನೂ ತೆಗೆಯಲು ಹೊರಟಿದೆ: ವಿಶ್ವನಾಥ್

ದಾವಣಗೆರೆ: ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಖಂಡಿತವಾಗಿಯೂ ಸಚಿವರಾಗುತ್ತಾರೆ ಎಂದು ಬಾಂಬೆ ದೋಸ್ತ್‌ಗಳಲ್ಲಿ ಒಬ್ಬರಾದ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುನಿರತ್ನಂ ಅವರು ಸಚಿವರಾಗುವುದು ಖಂಡಿತ. ಅವರನ್ನು ಮಂತ್ರಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಒಪ್ಪಿಕೊಂಡಿದ್ದಾರೆ. ಮುನಿರತ್ನ ನಿರಾಶರಾಗುವ ಅವಶ್ಯಕತೆಯೇ ಇಲ್ಲ. ಸಚಿವ ಸ್ಥಾನ ಖಂಡಿತವಾಗಿಯೂ ಸಿಗುತ್ತದೆ ಎಂದರು. ಕಾಂಗ್ರೆಸ್‌ನಿಂದ ಬಿಜೆಪಿಗೆ ಹೋದ 17 ಶಾಸಕರು ನೆಮ್ಮದಿಯಿಂದ ಇಲ್ಲ ಎಂಬ …

Read More »

ತುಮಕೂರು: ಪುಕ್ಕಟೆ ಕೊತ್ತಂಬರಿ ಸೊಪ್ಪಿಗೆ ಮುಗಿಬಿದ್ದ ಜನರು

ತುಮಕೂರು : ಉಚಿತವಾಗಿ ನೀಡುತಿದ್ದ ಕೊತ್ತಂಬರಿ ಸೊಪ್ಪಿಗಾಗಿ ಜನರು ಮುಗಿ ಬಿದ್ದಿರುವ ಘಟನೆ ತುಮಕೂರಿನ ಎನ್.ಆರ್ ಕಾಲೋನಿಯಲ್ಲಿ ನಡೆದಿದೆ. ಪಾಲಿಕೆ ಸದಸ್ಯ ಶ್ರೀನಿವಾಸ್ ಉಚಿತವಾಗಿ ಕೊತ್ತಂಬರಿ ಸೊಪ್ಪು ಹಂಚುತ್ತಿದ್ದರು. ಈ ವೇಳೆ ಜನರು ನಾಮುಂದು ತಾಮುಂದು ಎಂಬಂತೆ ಮುಗಿ ಬಿದ್ದು ಕೊತ್ತಂಬರಿ ಸೊಪ್ಪು ಪಡೆದಿದ್ದಾರೆ. ಜನರು ಮುಗಿ ಬಿದ್ದ ಹಿನ್ನೆಲೆಯಲ್ಲಿ ಸೊಪ್ಪು ಹಂಚುತ್ತಿದ್ದ ಯುವಕ ಆಟೋದಿಂದ ಜನರತ್ತ ಸೊಪ್ಪನ್ನು ಎಸೆದು ಹೋಗಿದ್ದಾನೆ. ಉಚಿವಾಗಿ ಸಿಗುವ ಕೊತ್ತಂಬಿಗಾಗಿ ಜನರು ಮುಗಿಬಿದ್ದಿರುವ ವೀಡಿಯೋ …

Read More »

ಅಕ್ರಮ ರೇವು ಪಾರ್ಟಿ: ಬಿಗ್ ಬಾಸ್ ಸ್ಪರ್ಧಿ, ನಟಿಯರು ವಶಕ್ಕೆ

ಮಹಾರಾಷ್ಟ್ರ:ನಾಸಿಕ್ ಜಿಲ್ಲೆಯಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ರೇವು ಪಾರ್ಟಿ ಅಡ್ಡೆ ಮೇಲೆ ಭಾನುವಾರ ಪೊಲೀಸರು ದಾಳಿ ಮಾಡಿದ್ದು, ಸುಮಾರು 22 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಡ್ರಗ್ಸ್ ಪತ್ತೆಯಾಗಿದ್ದು, ತನಿಖೆ ಚುರುಕುಗೊಳಿಸಲಾಗಿದೆ. ಮುಂಬೈನಿಂದ 120 ಕಿ.ಮೀ ದೂರದಲ್ಲಿರುವ ಇಗತ್ಪುರಿಯಲ್ಲಿರುವ ಎರಡು ಖಾಸಗಿ ವಿಲ್ಲಾಗಳಲ್ಲಿ ರೇವು ಪಾರ್ಟಿ ನಡೆಯುವ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದರು. ಈ ದಾಳಿಯಲ್ಲಿ ಬಿಗ್ ಬಾಸ್ ಮಾಜಿ ಸ್ಪರ್ಧಿ ಸೇರಿದಂತೆ ಹಿಂದಿ ಸಿನಿಮಾ …

Read More »

ಇನ್ಸ್​​ಟಂಟ್ ಸಿಕ್ಸ್​ ಪ್ಯಾಕ್​ ಕನಸು ಕಂಡ ಇಂಜಿನಿಯರ್​​​ಗೆ ₹7 ಲಕ್ಷ ಪಡೆದು ಜಿಮ್​​ ಟ್ರೈನರ್ ಮಾಡಿದ್ದೇನು?

ಬೆಂಗಳೂರು: ಸಿಕ್ಸ್ ಪ್ಯಾಕ್ ಮಾಡಿಸ್ತೀನಿ ಅಂತ ಇಂಜಿನಿಯರ್ ಯುವಕನಿಗೆ ಜಿಮ್​ ಟ್ರೈನರ್​ವೊಬ್ಬ ದೋಖಾ ಮಾಡಿರುವ ಆರೋಪ ಕೇಳಿಬಂದಿದೆ. ಗಿರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ಹೊಸಕೆರೆಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಹೊಸಕೆರೆಹಳ್ಳಿಯ ನಿವಾಸಿ, ಇಂಜಿನಿಯರ್ ಕೌಶಿಕ್ ಎಂಬವರು ಸಿಕ್ಸ್ ಪ್ಯಾಕ್ ಮಾಡಲು ಇಚ್ಚಿಸಿದ್ದರು. ಇದಕ್ಕಾಗಿ ಬನಶಂಕರಿ ಮೂರನೇ ಹಂತದ ಮೋಹನ್ ಎಂಬ ಜಿಮ್ ಟ್ರೈನರನ್ನು ಸಂಪರ್ಕಿಸಿದ್ದರು. ಬನಶಂಕರಿಯಲ್ಲಿ ಎಂಪವರ್ ಹೆಸರಿನಲ್ಲಿ ಜಿಮ್ ನಡೆಸುತ್ತಿರುವ ಮೋಹನ್, ಸಿಕ್ಸ್ ಪ್ಯಾಕ್ ಮಾಡಿರೋ ಫೋಟೋಗಳನ್ನು ಕೌಶಿಕ್ಗೆ …

Read More »

ಸದ್ಯಕ್ಕೆ ಶಾಲೆ ಆರಂಭ ಇಲ್ಲ : ಸಚಿವ ಸುರೇಶ್‍ಕುಮಾರ್

ಬೆಂಗಳೂರು, ಜೂ.28- ಕೋವಿಡ್-19 ನಿಂದಾಗಿ ತೂಗುಯ್ಯಾಲೆಯಲ್ಲಿದ್ದ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎನಿಸಿದ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 ಮತ್ತು 22ರಂದು ಎರಡು ದಿನಗಳು ಮಾತ್ರ ನಡೆಯಲಿದೆ. ರಾಜ್ಯದ ಸುಮಾರು 8,76,581 ವಿದ್ಯಾರ್ಥಿಗಳು 73,666 ಕೇಂದ್ರಗಳಲ್ಲಿ ಈ ಬಾರಿಯ ಎಸ್‍ಎಸ್‍ಎಲ್‍ಸಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಜುಲೈ 19 (ಸೋಮವಾರ) ಎಸ್‍ಎಸ್‍ಎಲ್‍ಸಿ ಪರೀಕ್ಷೆ ಜುಲೈ 19 (ಸೋಮವಾರ)ರಂದು ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.30ರ ವರೆಗೆ ಮೊದಲ ಪತ್ರಿಕೆ (ಗಣಿತ, ಸಮಾಜ ವಿಜ್ಞಾನ …

Read More »

ಗಡಿ ಜಿಲ್ಲೆಗಳಿಗೆ ಮಲಯಾಳಿ ಹೆಸರು: ಸಿಎಂ ಬಿಎಸ್ ವೈ ಭೇಟಿ ಮಾಡಿದ ಡಾ. ಸಿ.ಸೋಮಶೇಖರ್; ಕೇರಳ ಸಿಎಂಗೆ ಸರ್ಕಾರ ಪತ್ರ

ಬೆಂಗಳೂರು: ಕರ್ನಾಟಕ-ಕೇರಳ ಗಡಿ ಜಿಲ್ಲೆಗಳಲ್ಲಿನ ಊರುಗಳ ಕನ್ನಡ ಹೆಸರನ್ನು ಬದಲಾಯಿಸಿರುವ ವಿಚಾರವಾಗಿ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಅವರು ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದರು. ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ.ಸೋಮಶೇಖರ್ ಸೋಮವಾರ ಯಡಿಯೂರಪ್ಪ ಅವರನ್ನು ಗೃಹ ಕಛೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಕಾಸರಗೋಡು ಮತ್ತು ಮಂಜೇಶ್ವರದಲ್ಲಿನ ಕನ್ನಡ ಹೆಸರುಗಳನ್ನು ಹೊಂದಿದ …

Read More »

ವಿಧಾನಸೌಧದ ಮುಂದೆ ಬಸವಣ್ಣನವರ ಪ್ರತಿಮೆ ಬೇಡ : ವಾಟಾಳ್

ಬೆಂಗಳೂರು, ಜೂ.28- ವಿಧಾನಸೌಧದ ಆವರಣದಲ್ಲಿ ಬಸವೇಶ್ವರ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿರುವ ಕ್ರಮ ವಿರೋಧಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ಚಾಲುಕ್ಯ ವೃತ್ತದ ಬಳಿ ಇರುವ ಬಸವೇಶ್ವರ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ಮತ್ತೊಂದು ಬಸವಣ್ಣನವರ ಪ್ರತಿಮೆ ಪ್ರತಿಷ್ಠಾಪಿಸುವುದು ಯಾವುದೇ ಕಾರಣಕ್ಕೂ ಬೇಡ. ವಿಧಾನಸೌಧದ ಬಳಿಯೇ ಈಗಾಗಲೇ ವಿಶ್ವ ಪ್ರಸಿದ್ಧ ಅಶ್ವಾರೂಢ ಕಂಚಿನ ಪ್ರತಿಮೆ ಇದೆ. …

Read More »