Breaking News

Laxminews 24x7

ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇಲ್ಲ; ಕೃಷಿ ಪಂಪ್‌ ಸೆಟ್‌ಗಳಿಗೆ ಏಳು ಗಂಟೆ ವಿದ್ಯುತ್‌ ಪೂರೈಕೆ – ಸಚಿವ ಜಾರ್ಜ್

ಬೆಂಗಳೂರು : ರಾಜ್ಯದಲ್ಲಿ ವಿದ್ಯುತ್‌ ಕೊರತೆ ಇಲ್ಲ, ಸಮಸ್ಯೆಯೂ ಇಲ್ಲ. ಕೃಷಿ ಪಂಪ್‌ ಸೆಟ್‌ಗಳಿಗೆ 7 ಗಂಟೆ ವಿದ್ಯುತ್‌ ಪೂರೈಸಲಾಗುವುದು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ. ಶೂನ್ಯವೇಳೆಯಲ್ಲಿ ಇಂದು ಬಿಜೆಪಿಯ ಶಾಸಕ ಸಿದ್ದು ಸವದಿ, ವಿದ್ಯುತ್‌ ಕಡಿತದ ಬಗ್ಗೆ ಪ್ರಸ್ತಾಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪಂಪ್‌ ಸೆಟ್‌ಗಳಿಗೆ ಇಡೀ ರಾಜ್ಯದಲ್ಲಿ ಪವರ್‌ ಕಟ್‌ ಇಲ್ಲ. 7 ಗಂಟೆ ವಿದ್ಯುತ್‌ ನೀಡುತ್ತಿದ್ದೇವೆ. ದುರಸ್ತಿ ಸಂದರ್ಭದಲ್ಲಿ ವಿದ್ಯುತ್‌ ಕಡಿತವಾಗಬಹುದು. ಇತ್ತೀಚೆಗೆ ಎಸ್ಕಾಂಗಳ …

Read More »

ಖಾಸಗಿ ಬಡಾವಣೆಗಳ ಅನುಮೋದನೆಗೆ ಸರ್ಕಾರದ ಸಹಮತಿ ಅಗತ್ಯ: ಸಚಿವ ಬೈರತಿ ಸುರೇಶ್

ಬೆಂಗಳೂರು: ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳ ಮತ್ತು ನಗರ ಯೋಜನಾ ಪ್ರಾಧಿಕಾರಗಳ ವ್ಯಾಪ್ತಿಯಲ್ಲಿ ಬರುವ ಖಾಸಗಿ ಬಡಾವಣೆಗಳ ಅನುಮೋದನೆಗೆ ಇನ್ನು ಮುಂದೆ ಸರ್ಕಾರದ ಸಹಮತಿ ಪಡೆಯಬೇಕು ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ ಸೂಚಿಸಿದ್ದಾರೆ. “ರಾಜ್ಯದ ಎಲ್ಲಾ ನಗರಾಭಿವೃದ್ಧಿ ಪ್ರಾಧಿಕಾರಗಳು/ಯೋಜನಾ ಪ್ರಾಧಿಕಾರಗಳು ಸಾಧಿಸಿರುವ ಪ್ರಗತಿ ಕುರಿತಂತೆ ವಿಕಾಸಸೌಧದಲ್ಲಿ ಸೋಮವಾರ ಪರಿಶೀಲನಾ ಸಭೆ ನಡೆಸಿದ ಸಚಿವರು, ಖಾಸಗಿಯವರು ಭೂಮಿಯನ್ನು ಹೊಂದಿಸಿ/ಖರೀದಿಸಿ ಬಡಾವಣೆಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರುವಾಗ ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಅದು …

Read More »

ಕೃಷಿ ಭೂಮಿ ಕೈಗಾರಿಕೆಗೆ ಉದ್ದೇಶಕ್ಕೆ ಬಳಕೆ: ಯೋಜನೆ ಕೈ ಬಿಡಲು ರೈತರ ಪ್ರತಿಭಟನೆ

ಕೃಷಿ ಭೂಮಿ ಕೈಗಾರಿಕೆಗೆ ಉದ್ದೇಶಕ್ಕೆ ಬಳಕೆ: ಯೋಜನೆ ಕೈ ಬಿಡಲು ರೈತರ ಪ್ರತಿಭಟನೆ ವಿಜಯಪುರ ಜಿಲ್ಲೆಯ ತಿಡಗುಂದಿ ಸಮೀಪ 1203 ಎಕರೆ ರೈತರ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕಾಗಿ ಬಳಸುವುದನ್ನು ವಿರೋಧಿಸಿ, ಯೋಜನೆಯನ್ನು ಕೈಬೀಡಬೇಕೆಂದು ಆಗ್ರಹಿಸಿ ವಿಜಯಪುರದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ರೈತರೊಂದಿಗೆ ಬೃಹತ್ ಪ್ರತಿಭಟನೆ ಮಾಡಿದರು. ವಿಜಯಪುರ ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ಮಾಡಿದ ರೈತರು ಸರ್ಕಾರದ …

Read More »

ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು “ವುಮೆನ್‌ ವಾಕಥಾನ್‌” ಆಯೋಜನೆ

ಬೆಂಗಳೂರು: ಮಹಿಳೆಯರು ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಆಲ್ಟಿಯಸ್‌ ಆಸ್ಪತ್ರೆಯ ನೇತೃತ್ವದಲ್ಲಿ “ಮಹಿಳಾ ದಿನಾಚರಣೆ” ಪ್ರಯುಕ್ತವಾಗಿ 3ನೇ ಆವೃತ್ತಿಯ “ಮಹಿಳಾ ವಾಕಥಾನ್‌”ನನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಕಲ್ಯಾಣ ನಗರದ ಕೆಬಿಸಿ ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ನಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಂಡ ವಾಕಥಾನ್‌ನನ್ನು ಆಲ್ಟಿಯಸ್‌ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಎಸ್‌. ಪಿ. ಪಾಟೀಲ್‌ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ …

Read More »

ರಾಜ್ಯಪಾಲರ ಭಾಷಣ ಯಶಸ್ವೀ ಸರ್ಕಾರದ ಯಶೋಗಾಥೆ: ಈಶ್ವರ ಖಂಡ್ರೆ

ರಾಜ್ಯಪಾಲರ ಭಾಷಣ ಯಶಸ್ವೀ ಸರ್ಕಾರದ ಯಶೋಗಾಥೆ: ಈಶ್ವರ ಖಂಡ್ರೆ ಬೆಂಗಳೂರು : ರಾಜ್ಯಪಾಲರು ಉಭಯ ಸದನ ಉದ್ದೇಶಿಸಿ ಇಂದು ಮಾಡಿದ ಭಾಷಣ ಯಶಸ್ವೀ ಸರ್ಕಾರದ ಯಶೋಗಾಥೆಯಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ. ರಾಜ್ಯಪಾಲರ ಭಾಷಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಇದು ಸರ್ಕಾರದ ಸಾಧನೆಗಳನ್ನು ಸಮರ್ಥವಾಗಿ ತೆರೆದಿಟ್ಟಿರುವುದಲ್ಲದೇ, ಹೊಸ ಯೋಜನೆಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ದಿಕ್ಸೂಚಿಯಾಗಿದೆ ಎಂಬುದನ್ನು ಭಾಷಣ ಸ್ಪಷ್ಟವಾಗಿ ಸಾರಿದೆ ಎಂದು ಹೇಳಿದ್ದಾರೆ. …

Read More »

ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್ * ಪಕ್ಷಾತೀತವಾಗಿ ಗೃಹಲಕ್ಷ್ಮೀ ಯೋಜನೆಯ ಹಣ ಸಂದಾಯ

* ಬೆಂಗಳೂರು: ಗ್ಯಾರಂಟಿ ಯೋಜನೆಗಳು ಇರುವುದೇ ಬಡವರಿಗಾಗಿ, ಪಕ್ಷಾತೀತವಾಗಿ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಯಜಮಾನಿಯರ ಖಾತೆಗೆ ಹಾಕಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು. ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಮಾತ್ರ ಗೃಹಲಕ್ಷ್ಮೀ ಹಣ ಹಾಕಲಾಗುತ್ತದೆ ಎಂಬುದು ಶುದ್ಧ ಸುಳ್ಳು. ಇದು ಆಧಾರ‌ರಹಿತ ಆರೋಪ‌ ಎಂದರು. ಜಿಎಸ್ಟಿ, ಜಿಎಸ್ಟಿಯೇತರ, ಆದಾಯ ತೆರಿಗೆ… ಹೀಗೆ ಫಲಾನುಭವಿಗಳನ್ನು ವಿಂಗಡಿಸಲಾಗಿದೆ. ಈಗಾಗಲೇ ನವೆಂಬರ್, …

Read More »

ಸಾವಿರಾರು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನ ತರಬೇತಿ

ಸಾವಿರಾರು ಮಹಿಳೆಯರಿಗೆ ಉಚಿತವಾಗಿ ಆಟೋ ಚಾಲನ ತರಬೇತಿ ನೀಡುವ ಉಪಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು. ಬಿ. ಪ್ಯಾಕ್, ಶ್ರೀ ಕೃಷ್ಣ ವೆಲ್ ನೆಸ್ ಸೆಂಟರ್ ಹಾಗೂ ಆದರ್ಶ ಆಟೋ ಯೂನಿಯನ್ ಸಹಭಾಗಿತ್ವದಲ್ಲಿ ಈ ತರಬೇತಿ ನೀಡಲಾಗುತ್ತಿದ್ದು, ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶ ಇದಾಗಿದೆ. ಶ್ರೀ ಕೃಷ್ಣ ವೆಲ್ನೇಸ್ ಸೆಂಟರ್ ನ ಮುಖ್ಯಸ್ಥೆ ಮಿಮಿ ಪಾರ್ಥಸಾರಥಿ, ಬಿ. ಪ್ಯಾಕ್ ಸಂಸ್ಥೆಯ ಡಾ.ಸಿ. ಸಂಪತ್, ರಾಘವೇಂದ್ರ ಪೂಜಾರಿ , ಹರ್ಷಿತ ವಿ …

Read More »

ಸರಕಾರಿ ನೌಕರರ ಸಂಘದ ಮೂಡಲಗಿ ಘಟಕದ ದಿನಾದರ್ಶಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಸರಕಾರಿ ನೌಕರರ ಸಂಘದ ಮೂಡಲಗಿ ಘಟಕದ ದಿನಾದರ್ಶಿಕೆಯನ್ನು ಬಿಡುಗಡೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ – ಸರ್ಕಾರಿ ನೌಕರರು ತಮ್ಮ ಇಲಾಖೆಯ ಕರ್ತವ್ಯದ ಜೊತೆಗೆ ನೌಕರರ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು. ಇತ್ತೀಚೆಗೆ ತಾಲೂಕಿನ ದುರದುಂಡಿ ಗ್ರಾಮದಲ್ಲಿ ಸರಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕದಿಂದ ಹೊರತಂದ ಪ್ರಸ್ತುತ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಮೊದಲು ನಿಮ್ಮ …

Read More »

ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಗಳಗಳನೇ ಅತ್ತ

ದಾವಣಗೆರೆ, (ಮಾರ್ಚ್​ 03): ಈಗಾಗಲೇ ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದು, ಇಂದು (ಮಾರ್ಚ್ 03) ಸೈನ್ಸ್​ ವಿಭಾಗದ ಮ್ಯಾಥ್ಸ್​(ಗಣಿತ) ಪರೀಕ್ಷೆ ಇತ್ತು. ಪರೀಕ್ಷೆಯಲ್ಲಿ ಮೇಲ್ವಿಚಾರಕ ವಿದ್ಯಾರ್ಥಿನಿಗೆ ಹೆಚ್ಚುವರಿ ಉತ್ತರ ಪತ್ರಿಕೆ ನೀಡದ ಆರೋಪ ಕೇಳಿಬಂದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಮಾಲತಿ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಜಗಳೂರಿನ ನಳಂದ ಕಾಲೇಜಿನ ಪಿಯು ವಿದ್ಯಾರ್ಥಿನಿ ಸೌಜನ್ಯ, ಹೆಚ್ಚುವರಿ ಉತ್ತರ ಪತ್ರಿಕೆ(ಎಡಿಷನಲ್​ ಶೀಟ್​) ನೀಡುವಂತೆ ಮೇಲ್ವಿಕಾರಕನಿಗೆ ಕೇಳಿದ್ದಾಳೆ. ಆದ್ರೆ, ಮೇಲ್ವಿಚಾರಕ ಎಡಿಷನಲ್​ …

Read More »

ಕಲಾವಿದರ ಸಂಘಕ್ಕೆ ನಾಯಕತ್ವದ ಕೊರತೆ ಇದೆ, ಜಗ್ಗೇಶ್ ಸಾರ್ ಹೇಳಿದ್ರಲ್ಲಿ ತಪ್ಪಿಲ್ಲ: ಸಾಧು ಕೋಕಿಲ

ಬೆಂಗಳೂರು, ಮಾರ್ಚ್​ 03 : ರಾಜ್ಯ ಕಲಾವಿದರ ಸಂಘಕ್ಕೆ ನಾಯಕತ್ವದ ಕೊರತೆ ಇದೆ, ಹಿರಿಯ ನಟ ಜಗ್ಗೇಶ್ (Jaggesh) ಅವರನ್ನು ಹೇಳಿದ್ದು ಸರಿ ಎಂದು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲ ಹೇಳಿದರು. ನಮ್ಮ ಪ್ರತಿನಿಧಿಯೊಂದಿಗೆ ಮಾತಾಡಿದ ಅವರು, ಚಿತ್ರರಂಗವಾಗಲೀ, ಕಲಾವಿದರ ಸಂಘವನ್ನಾಗಲೀ ಮುನ್ನಡೆಸುವವರು ಯಾರಾದರೂ ಇದ್ದಾರೆಯೇ? ಅದೊಂದು ಕಾಲವಿತ್ತು, ಡಾ ರಾಜ್ ಕುಮಾರ್ ಅವರು ಕರೆ ನೀಡಿದರೆ ಲಕ್ಷಾಂತರ ಜನ ಸೇರುತ್ತಿದ್ದರು, ಅಂಬರೀಶ್, ವಿಷ್ಣುವರ್ಧನ ಈಗ ನಮ್ಮೊಂದಿಗಿಲ್ಲ, ಅವರಂಥ ನಾಯಕತ್ವ ಯಾರು ನೀಡುತ್ತಾರೆ? …

Read More »