Breaking News

Laxminews 24x7

ಮಹಿಳಾ ಮೀಸಲಾತಿ ಬಿಲ್ ಅನುಷ್ಠಾನ ಆಗುವುದೇ ಅನುಮಾನ: ಸಿದ್ದರಾಮಯ್ಯ

ಬೆಂಗಳೂರು: ಕ್ಷೇತ್ರ ಪುನರ್ ವಿಂಗಡಣೆ, ಜನಗಣತಿಯೆಂಬ ಕೊಕ್ಕೆಯನ್ನಿಟ್ಟು ಪ್ರಕಟಿಸಿರುವ ಮಹಿಳಾ ಮೀಸಲು ಸಂಪೂರ್ಣ ಅನುಷ್ಠಾನ ಸಂಶಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಡಾ.ರಾಮ ಮನೋಹರ ಲೋಹಿಯಾ ಸಮತಾ ವಿದ್ಯಾಲಯ, ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಮಹಿಳಾ ಮೀಸಲಾತಿ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ಕೇಂದ್ರ ಜಾರಿ ಮಾಡಿರುವ ಮಹಿಳಾ ಮೀಸಲಾತಿಗೆ ಕ್ಷೇತ್ರ ಪುನರ್ ವಿಂಗಡಣೆ, …

Read More »

ಗುಜರಾತ್: ಗೌತಮ್ ಅದಾನಿ ಸಮ್ಮುಖದಲ್ಲಿ ಲ್ಯಾಕ್ಟೋಫೆರಿನ್ ಘಟಕ ಉದ್ಘಾಟಿಸಿದ ಶರದ್ ಪವಾರ್

ವಾಸ್ನಾ (ಗುಜರಾತ್): ಗುಜರಾತ್​ನಲ್ಲಿ ದೇಶದ ಮೊದಲ ಲ್ಯಾಕ್ಟೋಫೆರಿನ್ ಪ್ಲಾಂಟ್ ಎಕ್ಸ್‌ಮ್‌ಪವರ್​ಅನ್ನು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ)ದ ಮುಖ್ಯಸ್ಥ ಶರದ್ ಪವಾರ್ ಶನಿವಾರ ಕೈಗಾರಿಕೋದ್ಯಮಿ ಮತ್ತು ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಸಮ್ಮುಖದಲ್ಲಿ ಉದ್ಘಾಟಿಸಿದರು.   82 ವರ್ಷ ವಯಸ್ಸಿನ ಹಿರಿಯ ರಾಜಕಾರಣಿ, ಕೇಂದ್ರದ ಮಾಜಿ ಸಚಿವ ಶರದ್ ಪವಾರ್ ಈ ಕುರಿತು ಸಾಮಾಜಿಕ ಜಾಲತಾಣವಾದ ‘ಎಕ್ಸ್‌’ (ಟ್ವಿಟರ್)ನಲ್ಲಿ ಕಾರ್ಯಕ್ರಮದ ಫೋಟೋಗಳ ಸಮೇತ ಪೋಸ್ಟ್​ ಮಾಡಿದ್ದಾರೆ. “ಗುಜರಾತ್‌ನ ವಾಸ್ನಾಯ ಚಚಾರ್ವಾಡಿಯಲ್ಲಿ ಭಾರತದ …

Read More »

ಬೆಳಗಾವಿಯಲ್ಲಿ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವ ಗಣೇಶ

ಬೆಳಗಾವಿ: ಅದೆಷ್ಟೋ ಮಕ್ಕಳು ಮನೆಯಲ್ಲಿ ಬಡತನ ಸೇರಿದಂತೆ ಮತ್ತಿತರ ಕಾರಣಗಳಿಂದ ಕಲಿಕೆಯಿಂದ ದೂರ ಉಳಿಯುತ್ತಿದ್ದಾರೆ. ಇಂತ‌ಹ ಮಕ್ಕಳು ಅಡ್ಡದಾರಿ‌ ಹಿಡಿದು ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಬಾರದು ಎಂದು ಬೆಳಗಾವಿಯಲ್ಲಿ ಗಣೇಶ ಮೂರ್ತಿಯ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವುದು ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಇಡೀ ರಾಜ್ಯದಲ್ಲೇ ವಿಶೇಷವಾಗಿ ಬೆಳಗಾವಿಯಲ್ಲಿ ಗಣೇಶೋತ್ಸವ ಆಚರಿಸಲಾಗುತ್ತದೆ. ಇಲ್ಲಿನ ಗಣೇಶ ಮಂಡಳಿಗಳು ಸಾಮಾಜಿಕ, ಆಧ್ಯಾತ್ಮಿಕ, ಆರೋಗ್ಯ ಸೇವೆ ಸಲ್ಲಿಸುವ ಜೊತೆಗೆ ಶಿಕ್ಷಣದ ಮಹತ್ವವನ್ನು ಸಾರುತ್ತಿವೆ. ಕುಲಕರ್ಣಿ …

Read More »

ಬೆಳಗಾವಿ ಜಿಲ್ಲಾ ಮಟ್ಟದ ಸೈಕಲಿಂಗ್ ಸ್ಪರ್ಧೆ

ಬೆಳಗಾವಿ ಜಿಲ್ಲಾ ಪದವಿಪೂರ್ವ ಇಲಾಖೆ ಹಾಗೂ ಎಕ್ಸ್ಪರ್ಟ್ ಪಿ ಯು ಸಿ ಕಾಲೇಜ್ ಇವರ ಸಂಯುಕ್ತ ಆಶ್ರಯದಲ್ಲಿ PUC ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಸೈಕಲಿಂಗ್ ( cycling) ಮತ್ತು Cross Country ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತಾನಾಡಿದ ಶ್ರೀ ಸುರೇಶ ಪೌoಡೆಶನ್ ಅಧ್ಯಕ್ಷರಾದ ಶ್ರೀ ಸುರೇಶ ಯಾದವ ಅವರು ಈಗಿನ ವಿದ್ಯಾರ್ಥಿಗಳಲ್ಲಿ ಸ್ಪೋರ್ಟ್ಸ್ ದ ಬಗ್ಗೆ ಕಾಳಜಿ ಕಡಿಮೆಯಾಗಿ ಕೇವಲ ಮೊಬೈಲ್ ಉಪಯೋಗ ಹೆಚ್ಚಾಗಿದೆ. ಇಂತ ಸಮಯದಲ್ಲಿ ಇಲಾಖೆ ಮತ್ತು ಕಾಲೇಜದವರು …

Read More »

ಭಾರತೀಯ ಕರಾಟೆ ಸಂಸ್ಥೆಯ ವತಿಯಿಂದ ಇಂದು ಲೇಡಿಸ್ ಕ್ಲಬ್ ನಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆ

ಬೆಳಗಾವಿಯ ಖ್ಯಾತ ಕರಾಟೆ ಪಟು ಮಧು ಪಾಟೀಲ ಆಯೋಜಿಸಿದ್ದ ಭಾರತೀಯ ಕರಾಟೆ ಸಂಸ್ಥೆಯ ವತಿಯಿಂದ ಇಂದು ಲೇಡಿಸ್ ಕ್ಲಬ್ ನಲ್ಲಿ ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆ ನಡೆಯಿತು. ಕರಾಟೆ ಬ್ಲಾಕ್ ಬೆಲ್ಟ್ ಸ್ಪರ್ಧೆಯಲ್ಲಿ 40 ಕರಾಟೆ ಪಟುಗಳು ಭಾಗವಹಿಸಿದ್ದರು. ಅವರಲ್ಲಿ 10 ವಿದ್ಯಾರ್ಥಿಗಳು ಕಿತ್ತಳೆ ಬೆಲ್ಟ್ ಪಡೆದರು. ರಿಯಾ ಅಶ್ವ ಶಾ, ಶ್ರೀಧರ್, ಇಂದ್ರಜ ಕಾಳೆ, ನೇಹಾ ಪೋಟೆ, ಬ್ಲೂ ಬೆಲ್ಟ್ ಪಡೆದರು. ವಂದನಾ ಕುರುಪ್, ರಿಯಾ ವರ್ನೇಕರ್, ಸಾಯಿರಾಜ್ …

Read More »

ರಸ್ತೆ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದ ಸರ್ಕಾರಿ ಬಸ್: ಕಂಡಕ್ಟರ್​ ಸೇರಿ 15ಕ್ಕೂ ಹೆಚ್ಚು ಜನರಿಗೆ ಗಾಯ

ರಾಯಚೂರು: ರಸ್ತೆಯ ಬದಿಯಲ್ಲಿ ನಿಲುಗಡೆ ಮಾಡಿದ ಲಾರಿಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ‌ಬಸ್ ಕಂಡಕ್ಟರ್​ ಸೇರಿದಂತೆ 15ಕ್ಕೂ ಪ್ರಯಾಣಿಕರು ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮಲ್ಲದಗುಡ್ಡ ಗ್ರಾಮದಲ್ಲಿ ಶನಿವಾರ ನಡೆದಿದೆ.   ಬಸ್ ಸಿಂಧನೂರಿನಿಂದ ಅಂಕಲಿಮಠಕ್ಕೆ ಕಡೆಗೆ ಹೋಗುವಾಗ ಮಾರ್ಗದ ಮಧ್ಯದಲ್ಲಿ ಈ ದುರ್ಘಟನೆ ನಡೆದಿದೆ. ಲಾರಿಯೊಂದು ಪಂಚರ್ ಆಗಿ ರಸ್ತೆ ಪಕ್ಕದಲ್ಲಿ ನಿಂತಿತ್ತು. ಆದರೆ, ರಾತ್ರಿ ವೇಳೆಯಲ್ಲಿ ಲಾರಿ ನಿಲುಗಡೆ ಮಾಡಿರುವುದನ್ನು ಸೂಚಿಸಲು ಇಂಡಿಕೇಟರ್ …

Read More »

ಭಾನುವಾರದ ರಾಶಿ ಭವಿಷ್ಯ

ಇಂದಿನ ರಾಶಿ ಭವಿಷ್ಯ ಮತ್ತು ಪಂಚಾಂಗ ಹೀಗಿದೆ… ಇಂದಿನ ಪಂಚಾಂಗ: ದಿನಾಂಕ : 24-09-2023, ಭಾನುವಾರ ಸಂವತ್ಸರ: ಶುಭಕೃತ್ ಆಯನ : ದಕ್ಷಿಣಾಯಣ ಋತು : ಶರದ್​ ಮಾಸ : ಭಾದ್ರಪದ ಪಕ್ಷ : ಶುಕ್ಲ ತಿಥಿ : ನವಮಿ ನಕ್ಷತ್ರ : ಪೂರ್ವಾಷಾಢ ಸೂರ್ಯೋದಯ: ಮುಂಜಾನೆ 06:07 ಗಂಟೆಗೆ ಅಮೃತಕಾಲ: ಮಧ್ಯಾಹ್ನ 03:11ರಿಂದ 04:42 ಗಂಟೆವರೆಗೆ ವರ್ಜ್ಯಂ : ಸಂಜೆ 04:31ರಿಂದ 05:19 ಗಂಟೆ ತನಕ ದುರ್ಮೂಹುರ್ತ: ಬೆಳಗ್ಗೆ 11:42 ರಿಂದ 12:30 ಗಂಟೆವರೆಗೆ ರಾಹುಕಾಲ: ಮಧ್ಯಾಹ್ನ 04:42ರಿಂದ 06:13ಗಂಟೆ ತನಕ ಸೂರ್ಯಾಸ್ತ: ಸಂಜೆ 06:13 ಗಂಟೆಗೆ ಇಂದಿನ …

Read More »

ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಇಲ್ಲದೆ ಜನರು ಹೈರಾಣು.

ರಾಮದುರ್ಗ : ನಗರದ ಯುನಿಯನ್ ಬ್ಯಾಂಕಿನಲ್ಲಿ ಸಿಬ್ಬಂದಿ ಕೊರತೆಯಿಂದ ಗ್ರಾಹಕರು ಹೈರಾಣು ಆಗಿ ತರಾಟೆಗೆ ತಗೆದುಕೊಂಡ ಘಟನೆ ಜರುಗಿದೆ, ಸರ್ಕಾರದ ಗೃಹಲಕ್ಷ್ಮಿ , ವಿಧವಾ ವೇತನ, ಅಂಗವಿಕಲರ ವೇತನ ಹಾಗೂ ಅನ್ನಭಾಗ್ಯ ಹಣ ಇತರ ಯೋಜನೆಗಳನ್ನು ಬ್ಯಾಂಕ ಮೂಲಕ ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತದೆ ಈ ಕುರಿತು ರಾಮದುರ್ಗದ ತಾಲೂಕಿನ ಮಹಿಳೆಯರು ತಮ್ಮ ಖಾತೆಗೆ ಹಣ ಜಮಾವಣೆ ಕುರಿತು ಖಾತರಿ ಪಡಿಸಲು, ಎನ್ ಸಿ ಪಿ ನಂಬರ ಚೇಕ್ ಮಾಡಲು ಮತ್ತು …

Read More »

ಮುತಾಲಿಕ್ ವಿರುದ್ಧ ದೂರು ದಾಖಲು; ಶ್ರೀರಾಮಸೇನೆ ಯಿಂದ ಪ್ರತಿಭಟನೆ

ಹುಬ್ಬಳ್ಳಿ : ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆಂದು ಪಾಲಿಕೆಯ ವಲಯ ಆಯುಕ್ತ ಉಪನಗರ ಪೊಲೀಸ್ ಭಾಷೆಯಲ್ಲಿ ದೂರು ನೀಡಿದ್ದನ್ನು ವಿರೋಧಿಸಿ, ಇಂದು ಶ್ರೀರಾಮ ಸೇನಾ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ ಮುತಾಲಿಕ್ ಅವರು, ಹಿಂದೂಪರ ಹೋರಾಟಗಾರರು, ಹಿಂದೂತ್ವಕ್ಕೆ ಸಾಕಷ್ಟು ದುಡಿದವರು ಅಂತವರ ಮೇಲೆ ಇವರು ದೂರು ನೀಡ್ತಾರೆ. ಇದಕ್ಕೆ ರಾಜ್ಯ ಸರ್ಕಾರ ಕುಮ್ಮತ್ತು ನೀಡುತ್ತಿದೆಂದು ಸರ್ಕಾರದ ವಿರುದ್ಧ ಘೋಷಣೆ …

Read More »

ಕೃಷ್ಣ ಜನ್ಮಭೂಮಿ – ಈದ್ಗಾ ಆವರಣದ ಸಮೀಕ್ಷೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ನವದೆಹಲಿ: ಉತ್ತರ ಪ್ರದೇಶದ ಮಥುರಾದಲ್ಲಿರುವ ಕೃಷ್ಣ ಜನ್ಮಭೂಮಿ – ಈದ್ಗಾ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಗೆ ನಿರ್ದೇಶನ ನೀಡುವಂತೆ ಕೋರಿ ಶ್ರೀ ಕೃಷ್ಣ ಜನ್ಮಭೂಮಿ ಮುಕ್ತಿ ನಿರ್ಮಾಣ್ ಟ್ರಸ್ಟ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾದ ಮನವಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.   ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಧಾಂಶು ಧುಲಿಯಾ ಅವರನ್ನೊಳಗೊಂಡ ನ್ಯಾಯಪೀಠ, ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಸಿವಿಲ್ ಪ್ರೊಸೀಜರ್ ಕೋಡ್​ನ …

Read More »