Breaking News

Laxminews 24x7

ಕಾವೇರಿ ವಿಚಾರ ಬಂದ್ರೆ ನಮ್ಮ ರಾಜ್ಯದಲ್ಲಿ ಒಗ್ಗಟ್ಟಿಲ್ಲ – ಹೆಚ್ ಡಿ ದೇವೇಗೌಡ ಬೇಸರ

ಹಾಸನ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡದಂತೆ ರಾಜ್ಯದಲ್ಲಿ ಇಂದು ಬಂದ್​​ಗೆ ಕರೆ ನೀಡಿದ್ದರೂ, ನಮ್ಮಲ್ಲಿ ಒಗ್ಗಟ್ಟಿಲ್ಲ. ಇದು ನಮ್ಮ ರಾಜ್ಯದಲ್ಲಿರುವ ಸ್ಥಿತಿ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಬೇಸರ ವ್ಯಕ್ತಪಡಿಸಿದರು. ಕಾವೇರಿ ನೀರು ಬಿಡದಂತೆ ಬೆಂಗಳೂರು ಬಂದ್​ಗೆ ಸಂಬಂಧಿಸಿದಂತೆ ನಗರದ ಸಂಸದರ ನಿವಾಸದಲ್ಲಿ ಕರ್ನಾಟಕ ಬಂದ್ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾತನಾಡಿದ ಅವರು, ಕೆಲವರು ಇಂದು ಬಂದ್ ಮಾಡಿದ್ದಾರೆ. ಇನ್ನೂ ಕೆಲವರು ಶುಕ್ರವಾರ ಮಾಡ್ತಾರಂತೆ ಮತ್ತೆ ಕೆಲವರು …

Read More »

ಬೆಂಗಳೂರು ಬಂದ್ : ವ್ಯಾಪಾರ ವಹಿವಾಟು ಸ್ಥಗಿತದಿಂದ ಅಂದಾಜು 200 ಕೋಟಿ ನಷ್ಟ: ಎಫ್‌ಕೆಸಿಸಿಐ

ಬೆಂಗಳೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ನಡೆದ ಬೆಂಗಳೂರು ಬಂದ್​ಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಆದರೆ, ಬೆಂಗಳೂರು ಬಂದ್​​ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟ ಸಂಭವಿಸಿದೆ. ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ, ಸಂಸ್ಥೆಗಳು ಬೆಂಗಳೂರು ಬಂದ್​ಗೆ ಕರೆ ನೀಡಿದ್ದವು. ಬಹುತೇಕ ಕಡೆ ಅಂಗಡಿ ಮುಂಗಟ್ಟು, ವ್ಯಾಪಾರ ವಹಿವಾಟು, ಹೋಟೆಲ್​ಗಳನ್ನು ಮುಚ್ಚಿ ಪ್ರತಿಭಟನೆಯಲ್ಲಿ ಭಾಗಿಯಾದರು. ಬಂದ್ ಹಿನ್ನೆಲೆ ನಗರದಲ್ಲಿ …

Read More »

ಸೆಪ್ಟೆಂಬರ್​ 28ರಂದು 4 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ

ಸೆಪ್ಟೆಂಬರ್​ 28ರಂದು 4 ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಸ್ಯಾಂಡಲ್​ವುಡ್​ನಲ್ಲಿ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮ ಸಿನಿಮಾಗಳೇ ತೆರೆ ಕಾಣುತ್ತಿವೆ. ಕಾಂತಾರ, ಕೆಜಿಎಫ್​, ಚಾರ್ಲಿ ಹೀಗೆ ಸಾಕಷ್ಟು ಚಿತ್ರಗಳು ಪ್ರೇಕ್ಷಕರನ್ನು ಮನರಂಜಿಸುವಲ್ಲಿ ಯಶಸ್ವಿಯಾಗಿದೆ. ಕೋಟ್ಯಾಂತರ ರೂಪಾಯಿ ಸಂಪಾದಿಸಿ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆಯುವಲ್ಲಿಯೂ ಸಫಲವಾಗಿದೆ. ವಿಶ್ವದಾದ್ಯಂತ ಅನೇಕ ಕನ್ನಡದ ಸಿನಿಮಾಗಳು ಉತ್ತಮ ಪ್ರದರ್ಶನ ಕಂಡಿವೆ. ಈ ನಡುವೆ ಇದೇ ತಿಂಗಳು ಮತ್ತೆ ನಾಲ್ಕು ಸಿನಿಮಾಗಳು ಒಂದೇ ದಿನ ಸಿಲ್ವರ್​ ಸ್ಕ್ರೀನ್​ಗೆ …

Read More »

ಜನತಾ ದರ್ಶನಕ್ಕೆ ಜನಸಾಗರ: ಸಮಸ್ಯೆ ಆಲಿಸಿದ ಅಧಿಕಾರಿಗಳು, ಶಾಸಕರು

ಬೆಳಗಾವಿ : ಜಿಲ್ಲಾ ಉಸ್ತುವಾರಿ ಸಚಿವ ಸತೀಶ್​ ಜಾರಕಿಹೊಳಿ ಅವರ ಅನುಪಸ್ಥಿತಿಯಲ್ಲಿ ನಡೆದ ಜನತಾ ದರ್ಶನದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಮಹಿಳೆಯರು, ವೃದ್ಧರು, ಅಂಗವಿಕಲರು ಸೇರಿ ನೂರಾರು ಜನರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ತೋಡಿಕೊಂಡರು. ಜಿಲ್ಲಾಧಿಕಾರಿ, ಜಿಲ್ಲೆಯ ಶಾಸಕರು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಿದರು. ವಿಠಲ ದೇಸಾಯಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಲು ಜಿಲ್ಲಾಡಳಿತದಿಂದ 8 ಕೇಂದ್ರಗಳನ್ನು ತೆರೆಯಲಾಗಿತ್ತು. ಅರ್ಜಿ ಸಲ್ಲಿಸಿದ ಬಳಿಕ ವೇದಿಕೆಗೆ ಆಗಮಿಸಿದ ಜನರು, …

Read More »

ಕಿತ್ತೂರು ಉತ್ಸವಕ್ಕೆ 5 ಕೋಟಿ ರೂ. ಅನುದಾನಕ್ಕೆ ಪ್ರಸ್ತಾವನೆ ಕಳಿಸಲು ನಿರ್ಧಾರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ

ಬೆಳಗಾವಿ : “ಕಳೆದ ವರ್ಷ ಸರ್ಕಾರವು ಕಿತ್ತೂರು ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಘೋಷಿಸಿ ಎರಡು ಕೋಟಿ ರೂಪಾಯಿ ಅನುದಾನ ನೀಡಿತ್ತು. ಅದೇ ರೀತಿ ಈ ಬಾರಿ ಐದು ಕೋಟಿ ರೂಪಾಯಿ ಅನುದಾನ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಲಾಗುವುದು” ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು. ಕಿತ್ತೂರು ಉತ್ಸವದ ಪೂರ್ವಭಾವಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಾರಿ ಐದು ಕೋಟಿ ರೂಪಾಯಿ ಅನುದಾನ …

Read More »

ಬೆಳಗಾವಿ: ಲಾರಿ-ಕ್ರೂಸರ್ ನಡುವೆ ಡಿಕ್ಕಿ; ಸಾವಿನ ಸಂಖ್ಯೆ ಏಳಕ್ಕೆ ಏರಿಕೆ

ಬೆಳಗಾವಿ : ಸೆಪ್ಟೆಂಬರ್ 15ರಂದು ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದವರಿದ್ದ ಕ್ರೂಸರ್ ವಾಹನಕ್ಕೆ ಲಾರಿ ಡಿಕ್ಕಿ ಸಂಭವಿಸಿ ಸ್ಥಳದಲ್ಲಿ ಐದು ಜನ ಮೃತಪಟ್ಟಿದ್ದರು. ಇವತ್ತು ಮತ್ತೆ ಬಸವರಾಜ್ ಗಿರಿಮಲ್ಲ ಆಜೂರ (32) ಎಂಬುವವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬಡಚಿ ಗ್ರಾಮದ ಆಜೂರ್ ಕುಟುಂಬಸ್ಥರು ತಿರುಪತಿ ತಿಮ್ಮಪ್ಪನ ದರ್ಶನ ಪಡೆದುಕೊಂಡು ಸ್ವ ಗ್ರಾಮಕ್ಕೆ ಆಗಮಿಸುವ ವೇಳೆ ತೆಲಂಗಾಣದ ಸೂರ್ಯಪೇಟ ಜಿಲ್ಲೆಯ ಮಟ್ಟಮ್ ಪಲ್ಲಿಯ ಕಡಪ-ಚಿತ್ತೂರು …

Read More »

ಶಾಲಾ ಬಾಲಕರಿದ್ದ ಬಸ್ಸನ್ನು ಪ್ರವಾಹದ ನೀರಿನಲ್ಲಿ ನುಗ್ಗಿಸಿದ ಚಾಲಕ

ಬೆಳಗಾವಿ : ಮಳೆಯ ಆರ್ಭಟಕ್ಕೆ ಹಳ್ಳದಲ್ಲಿ ಉಂಟಾಗಿದ್ದ ಪ್ರವಾಹದ ನೀರಿನಲ್ಲಿ ಶಾಲಾ ಬಾಲಕರಿದ್ದ ಬಸ್ಸನ್ನು ಎಗ್ಗಿಲ್ಲದೆ ನುಗ್ಗಿಸಿ ಚಾಲಕ ಚಲಾಯಿಸಿದ್ದು, ಇನ್ನೇನು ಬಸ್ ನೀರಲ್ಲಿ ಕೊಚ್ವಿ ಹೋಗುವ ಮಟ್ಟಕ್ಕೆ ಬಂದಾಗ ಎಚ್ಚರಗೊಂಡ ಗ್ರಾಮಸ್ಥರು ಶಾಲಾ ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ ಎಲಿಮುನ್ನೋಳಿ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.   ಹುಕ್ಕೇರಿ ತಾಲೂಕಿನಲ್ಲಿ ಮಂಗಳವಾರ ಸಂಜೆಯಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನದಿ, ಹಳ್ಳಗಳು …

Read More »

ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್

ಗೋಕಾಕ : ಓರ್ವ ಯೋಧನಿಂದ ಮತ್ತೊಬ್ಬ ಯೋಧನ ಮೇಲೆ ಪೈರಿಂಗ್ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ರಾಜನಕಟ್ಟಿಯಲ್ಲಿ ನಡೆದಿದೆ. ರಾಜನಕಟ್ಟೆ ಗ್ರಾಮದ ಇಬ್ಬರು ವ್ಯಕ್ತಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಸಂಜೆ ಇಬ್ಬರು ಯೋಧರ ನಡುವೆ ಹಣಕಾಸಿನ ವಿಚಾರಕ್ಕೆ ಜಗಳ ನಡೆದಿತ್ತು ಎನ್ನಲಾಗಿದೆ. ಅವರಿಬ್ಬರ ಜಗಳ ವಿಕೋಪಕ್ಕೆ ತಿರುಗಿ ಯೋಧರೊಬ್ಬರು ಮತ್ತೊಬ್ಬ ಯೋಧನ ಮೇಲೆ ಡಬಲ್ ರಿವಾಲ್ವಾರ ಗನ್ ನಿಂದ ಪೈರ್ ಮಾಡಿದ್ದಾರೆ. ಪೈರಿಂಗ್ ಮಾಡಿದ …

Read More »

ಹಿರಿಯ ನಟಿ ವಹೀದಾ ರೆಹಮಾನ್​ಗೆ ‘ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ’ ಘೋಷಣೆ

ಭಾರತೀಯ ಚಿತ್ರರಂಗದ ಹಿರಿಯ ನಟಿ ವಹೀದಾ ರೆಹಮಾನ್​ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಚಿತ್ರರಂಗದ ಹಿರಿಯ ನಟಿ ವಹೀದಾ ರೆಹಮಾನ್​ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್​ ಫಾಲ್ಕೆ ಪ್ರಶಸ್ತಿ ಘೋಷಿಸಲಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಶೀಘ್ರದಲ್ಲೇ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಚಿತ್ರರಂಗದಲ್ಲಿ ಜೀವಮಾನ ಶ್ರೇಷ್ಠ ಸಾಧನೆಗೆ ಈ ಗೌರವ ನೀಡಲಾಗುತ್ತದೆ. ಅನುರಾಗ್ ಸಿಂಗ್ ಠಾಕೂರ್ ಟ್ವೀಟ್​: ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಸಿಂಗ್ ಠಾಕೂರ್ …

Read More »

ಜಿಲ್ಲಾ ಮಟ್ಟದ ಜನತಾ ದರ್ಶನಕ್ಕೆ ಅಭೂತ ಪೂರ್ವ ಸ್ಪಂದನೆ

ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಬೆಂಗಳೂರಿಗೆ ಅಲೆದಾಡುವುದನ್ನು ತಪ್ಪಿಸಲು ಸ್ಥಳೀಯ ಮಟ್ಟದಲ್ಲಿ ಜನತಾ ದರ್ಶನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪ್ರಕಾಶ್ ಹುಕ್ಕೇರಿ ಹೇಳಿದರು. ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ನಡೆದ ಜನತಾ ದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಸಾರ್ವಜನಿಕರು ವೇದಿಕೆಗೆ ಆಗಮಿಸಿ ಅಹವಾಲುಗಳನ್ನು ಸಲ್ಲಿಸಿದರು. ಇದಲ್ಲದೇ ಸಭಾಭವನದಲ್ಲಿ ಸ್ಥಾಪಿಸಲಾಗಿದ್ದು ಎಂಟು ಕೌಂಟರ್ ಗಳಲ್ಲಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು. ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾಡಳಿತವು …

Read More »