ಅಥಣಿ ತಾಲ್ಲೂಕಿನಾದ್ಯಂತ ಸತತವಾಗಿ ಮೂರು ದಿನದಿಂದ ಸುರಿದ ಮಳೆಯಿಂದ ಹಲವು ಕಡೆ ರೈತರು ಬೆಳೆದ ಕಬ್ಬು ,ಮೆಕ್ಕೆಜೋಳ, ಈರುಳ್ಳಿ ನೀರಿನಲ್ಲಿ ನಿಂತು ರೈತರಿಗೆ ತುಂಬಾ ನಷ್ಟವಾಗಿದೆ , ತಾಲ್ಲೂಕಿನ ರಡ್ಡೇರಹಟ್ಟಿ ಗ್ರಾಮದಲ್ಲಿ ಹನುಮಂತ ಚಿತ್ರಟಿ ಇವರು ತಮ್ಮ ಜಮೀನಿನಲ್ಲಿ ಬೆಳೆದಂಥ ಈರುಳ್ಳಿ ಬೆಳೆದು ನೀರು ಪಾಲಾಗಿ ತುಂಬಾ ನಷ್ಟ ಅನುಭವಿಸಿದ್ದಾರೆ
ಇದೇ ಸಂದರ್ಭದಲ್ಲಿ ಅವರು ಮಾತನಾಡಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಗೆ ಒಳ್ಳೆಯ ಬೆಲೆ ಇದೆ ಅಂತ ತಾವು ತಮ್ಮ ಎರಡು ಎಕರೆ ಇಪ್ಪತ್ತು ನಾಲ್ಕು ಗುಂಟೆ ಜಮೀನಿನಲ್ಲಿ ಈರುಳ್ಳಿ ಬೆಳೆಯನ್ನು ಬೆಳೆಯದೆ ಈ ಬೆಳೆ ಬೆಳೆಯಲು ಒಂದು ಲಕ್ಷ ಐವತ್ತು ಸಾವಿರ ಖರ್ಚು ಮಾಡಿದ್ದೆ ಆದರೆ ಮೂರು ದಿನದಿಂದ ಅಕಾಲಿಕವಾಗಿ ಮಳೆ ಸುರಿದರಿಂದ ನಮ್ಮ ಜಮೀನಿನಲ್ಲಿ ನೀರು ನಿಂತು ಸಂಪೂರ್ಣ ಈರುಳ್ಳಿ ಬೆಳೆ ನಾಶವಾಗಿ ನಾನು ತುಂಬಾ ಸಂಕಷ್ಟಕ್ಕೆ ಸಿಲುಕಿದ್ದ ಅಂತ ಹೇಳಿದರು ನಾನು ನನ್ನ ಬೆಳೆ ಹಾನಿಯ ಬಗ್ಗೆ ಗ್ರಾಮದ ಅಧಿಕಾರಿಗಾಗಿ ವಿಷಯ ತಿಳಿಸಿದರೂ ಯಾವುದೇ ಅಧಿಕಾರಿಗಳು ನನ್ನ ಜಮೀನಿಗೆ ಭೇಟಿ ಕೊಟ್ಟು ಬೆಳೆ ನಷ್ಟ ಸಮೀಕ್ಷೆಯನ್ನೂ ಮಾಡಿಲ್ಲ ಮತ್ತು ನನ್ನ ಸಮಸ್ಯೆಗೆ ಯಾರೂ ಕೂಡ ಇನ್ನೂ ಸ್ಪಂದನೆ ಕೊಟ್ಟಿಲ್ಲ ,ಎಲ್ಲರೂ ಹೇಳುತ್ತಾರೆ ರೈತ ದೇಶದ ಬೆನ್ನೆಲಬು ಅಂತ ಆದರೆ ಅದೇ ರೈತ ಸಂಕಷ್ಟದಲ್ಲಿ ಇರುವಾಗ ಯಾವುದೇ ಅಧಿಕಾರಿ ಜನಪ್ರತಿನಿಧಿಗಳು ನಮಗೆ ಸಹಾಯ ಹಸ್ತ ಮಾಡಲ್ಲ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ದೇಶದ ಜನರಿಗೆ ಅನ್ನ ಕೊಡುವ ರೈತ ತನ್ನ ಹಾಗೂ ತನ್ನ ಕುಟುಂಬಕ್ಕೆ ಅನ್ನ ಹಾಕಲು ಕೂಡ ಸಾಧ್ಯವಾಗದೇ ಹೀನಾಯ ಸ್ಥಿತಿ ತಲುಪುತ್ತಾನೆ ಆದ್ದರಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಅಧಿಕಾರಿಗಳು ಹೀಗೆ ಎಚ್ಚೆತ್ತುಕೊಂಡು ನಮ್ಮಂಥ ಸಂಕಷ್ಟದಲ್ಲಿ ಸಿಲುಕುವ ರೈತರಿಗೆ ನಾವು ಬೆಳೆಗೆ ಸರಿಯಾದ ಬೆಂಬಲ ಬೆಲೆ ಹಾಗೂ ಬೆಳೆ ನಷ್ಟಕ್ಕೆ ಸರಿಯಾದ ರೀತಿಯಲ್ಲಿ ಪರಿಹಾರ ಕೊಟ್ಟು ನಮ್ಮಂಥ ರೈತರನ್ನು ಕಷ್ಟದಿಂದ ಪಾರು ಮಾಡಬೇಕು ಅಂತ ಹೇಳಿದರು
ಬೈತ :ಹನುಮಂತ್ ಚಿತ್ರಟಿ
ವರದಿ : ಮಲ್ಲೇಶ್ ಪಟ್ಟಣ ಅಥಣಿ