ಬೆಳಗಾವಿ: ಚಾಲಕನ ನಿಯಂತ್ರಣ ಕೈ ತಪ್ಪಿ ಕಾರೊಂದು ಮರಕ್ಕೆ ಅಪ್ಪಳಿಸಿದ ಪರಿಣಾಮ ಮಹಿಳೋರ್ವಳು ಸ್ಥಳದಲ್ಲೇ ಅಸುನೀಗಿರುವ ಘಟನೆ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಗುಲಾಬಿ ಪಾಂಡುರಂಗ ಗವಸ್( 38) ಮೃತ ಮಹಿಳೆ. ಸಂಬಂಧಿಕರ ಮನೆಯಲ್ಲಿಕಾರ್ಯಕ್ರಮ ಮುಗಿಸಿಕೊಂಡು ಬೆಳಗಾವಿ ಆಗಮಿಸುವ ವೇಳೆಯಲ್ಲಿ ಕಣಕುಂಬಿ ಪ್ರವಾಸಿ ಮಂದಿರದ ಬಳಿಯ ಈ ಅವಘಡ ಸಂಭವಿಸಿದೆ. ಕಾರನ ಮುಂಭಾಗ ಜಖಂಗೊಂಡಿದೆ ಎನ್ನಲಾಗಿದೆ.
ವೇಗವಾಗಿ ಚಲಿಸುತ್ತಿದ್ದ ಕಾರು ಬೃಹತ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕೈ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಅವಘಡದಲ್ಲಿ ಕಾರ್ ಚಾಲಕ ಮಹಾದೇವ ಗವಸ್ ಹಾಗೂ ಇನ್ನೋರ್ವ ಮಹಿಳೆ ಗಂಭೀರ ಗಾಯಗಳಾಗಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಖಾನಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7