Breaking News

ಅಗ್ನಿಪಥ್ ಯೋಜನೆಗೆ ವಿರೋಧ; ರೈಲಿಗೆ ಬೆಂಕಿ ಹಚ್ಚಿ ಯುವಕರ ಆಕ್ರೋಶ

Spread the love

ಪಾಟ್ನಾ: ಇತ್ತೀಚೆಗೆ ಕೇಂದ್ರ ಸರ್ಕಾರ ಘೋಷಿಸಿದ್ದ ಅಗ್ನಿಪಥ್ ಯೋಜನೆಗೆ ದೇಶದ ಹಲವು ರಾಜ್ಯಗಳಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಯೋಜನೆ ವಿರುದ್ಧ ಪ್ರತಿಭಟನೆಗಿಳಿದಿರುವ ಯುವಕರು ರೈಲಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಸೇನೆಗೆ ಸೇರುವ ಉದ್ದೇಶದಿಂದ ಪರೀಕ್ಷೆ ಬರೆದು ನೇಮಕವಾಗಿದ್ದ ಹಾಗೂ ತರಬೇತಿ ಪಡೆದು ನೇಮಕಾತಿಗಾಗಿ ಕಾಯುತ್ತಿದ್ದ ಯುವಕರಿಗೆ ಕೇಂದ್ರ ಸರ್ಕಾರದ ಅಗ್ನಿಪಥ್ ಯೋಜನೆ ಶಾಕ್ ನೀಡಿದ್ದು, ವಯೋಮಿತಿ ಸಡಿಲಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಬಿಹಾರ ಮುಜಾಫರ್ ನಗರ, ಬಕ್ಸರ್ ನಗರ, ಬಿರಾನಿ, ರಾಜಸ್ಥಾನ, ಉತ್ತರ ಪ್ರದೇಶದ ಲಖ್ನೌಗಳಲ್ಲಿಯೂ ಪ್ರತಿಭಟನೆ ತೀವ್ರಗೊಳಿಸಿರುವ ಯುವಕರು ನಮಗೆ ಕೆಲಸ ಕೊಡಿ ಇಲ್ಲವೇ ಸಾಯಿಸಿ ಎಂದು ಘೋಷಣೆಗಳನ್ನು ಕೂಗಿದ್ದಾರೆ. ರಸ್ತೆಯಲ್ಲಿ ಟೈಯರ್ ಗೆ ಬೆಂಕಿ ಹಚ್ಚಿದ್ದಾರೆ.

ಬಿಹಾರದ ಚಾಪ್ರಾ ನಗರದಲ್ಲಿ ರೈಲು ತಡೆ ನಡೆಸಿರುವ ಪ್ರತಿಭಟನಾಕಾರರು ರೈಲಿಗೆ ಬೆಂಕಿ ಹಚ್ಚಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ ನಿಂದ ಅಗ್ನಿಪಥ್ ಯೋಜನೆಯಡಿ ಸೇನಾ ನೇಮಕಾತಿ ಆರಂಭವಾಗಲಿದ್ದು, 46 ಸಾವಿರ ಯುವಕರಿಗೆ ಸೇನೆಯಲ್ಲಿ ಸೇರಿಸಿಕೊಳ್ಳುವ ಮೂಲಕ ಅಗ್ನಿವೀರ್ ಹೆಸರು ನೀಡಲಾಗುತ್ತದೆ. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಸೇನಾ ನೇಮಕಾತಿ ನಿಲ್ಲಿಸಲಾಗಿತ್ತು. ಇದೀಗ ನೇಮಕಾತಿ ಆರಂಭಿಸಲಾಗುತ್ತಿದೆ. ಆದರೆ ಕಳೆದ ಎರಡು ವರ್ಷಗಳಿಂದ ತರಬೇತಿ ಪಡೆದು ಸಾಮಾನ್ಯ ಸೇನಾ ನೇಮಕಾತಿಗಾಗಿ ಕಾಯುತ್ತಿರುವ ಯುವಕರಿಗೆ ವಯೋಮಿತಿಯನ್ನು ಸಡಿಸಿಲ್ಲ. ಅಗ್ನಿಪಥ್ ಯೋಜನೆಯಡಿ 17.5 ವರ್ಷದಿಂದ 21 ವರ್ಷಕ್ಕೆ ವಯೋಮಿತಿ ನಿಗದಿ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ತರಬೇತಿ ಪಡೆದ ಯುವಕರ ಗತಿಯೇನು? ಯೋಜನೆಯಿಂದ ಹಲವರಿಗೆ ಅನ್ಯಾಯವಾಗುತ್ತಿದೆ ನಮಗೆ ನ್ಯಾಯಕೊಡಿ ಎಂಬುದು ಪ್ರತಿಭಟನಾ ನಿರತ ಯುವಕರ ಬೇಡಿಕೆ.


Spread the love

About Laxminews 24x7

Check Also

ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ ತನ್ನ 50ನೇ ಮಾಸಿಕ ಸಭೆಯನ್ನು ಅದ್ಧೂರಿಯಾಗಿ ಆಚರಿಸಿತು..

Spread the love ಲಿಂಗಾಯತ ಬಿಸಿನೆಸ್ ಫೋರಮ್‌ (ಎಲ್‌ಬಿಎಫ್‌) ಉದ್ಯಮಿಗಳು, ವೃತ್ತಿಪರರು ಮತ್ತು ವ್ಯಾಪಾರ ನಾಯಕರ ಸಕ್ರಿಯ ವೇದಿಕೆ ಇತ್ತೀಚೆಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ