ಕಲಬುರಗಿ: ನೇಣು ಬಿಗಿದ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನ ಶವ ಪತ್ತೆಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಸಲಗರ ಬಸಂತಪುರದಲ್ಲಿ ಘಟನೆ ನಡೆದಿದೆ.
ರಾಮು ರಾಠೋಡ್ (45) ಮೃತ. ಈತ ಬಿಜೆಪಿ ಕಾರ್ಯಕರ್ತನಾಗಿದ್ದ.
ರಾಮು ರಾಠೋಡ್ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ರಾಮು ಅವರು ಸಲಗರ ಬಸಂತಪುರ ತಾಂಡಾ ನಿನಾಸಿಯಾಗಿದ್ದಾರೆ. ನಿನ್ನೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪೋಲಿಂಗ್ ಬೂತ್ ಏಜೆಂಟ್ ಆಗಿದ್ದರು. ನಿನ್ನೆ ಸಂಜೆವರಗೆ ಪೋಲಿಂಗ್ ಬೂತ್ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದರು.
ಕಳೆದ ರಾತ್ರಿ ಮನೆಗೆ ಬಂದಿರಲಿಲ್ಲಾ. ಇಂದು ಮುಂಜಾನೆ ತಾಂಡಾದ ಹೊರವಲಯದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೊಲೆ ಮಾಡಿ ನೇಣು ಹಾಕಿರೋ ಆರೋಪವನ್ನು ಕುಟುಂಬಸ್ಥರು ಮಾಡುತ್ತಿದ್ದಾರೆ. ಚಿಂಚೋಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಪೂರ್ಣ ಸಂಗಾತಿ ಹುಡುಕಿಕೊಳ್ಳಿ – ನೋಂದಣಿ ಉಚಿತ!
ಕನ್ನಡ ಮ್ಯಾಟ್ರಿಮೊನಿಯಲ್ಲಿ ಪರಿಪೂರ್ಣ ಸಂಗಾತಿ ಹುಡುಕಿಕೊಳ್ಳಿ – ನೋಂದಣಿ ಉಚಿತ!
Laxmi News 24×7