Breaking News

ಬೆಳಗಾವಿಯಲ್ಲಿ ಇಂದು ಮುಂಜಾನೆ ಸುರಿದ ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.

Spread the love

ಬೆಳಗಾವಿ: ಇಂದು ಬೆಳಗಿನ ಜಾವ ಸುರಿದ ಧಾರಾಕಾರ ಮಳೆಯಿಂದಾಗಿ ನಾಲ್ಕು ವಿದ್ಯುತ್ ಕಂಬಗಳು ನೆಲಕ್ಕುರುಳಿ, ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಘಟನೆ ತಾಲೂಕಿನ ಕುರಿಹಾಳ ಗ್ರಾಮದಲ್ಲಿ ನಡೆದಿದೆ.

ವೀರಭದ್ರೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೆರಳಿನ‌ ವ್ಯವಸ್ಥೆ ಕಲ್ಪಿಸಲು ನಿರ್ಮಿಸಿದ್ದ ತಗಡಿನ ಶೆಡ್ ಕೂಡ ಮುರಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಳಗಾವಿ ನಗರ ಸೇರಿ ಜಿಲ್ಲೆ ವಿವಿಧೆಡೆ ಬೆಳಗ್ಗೆಯಿಂದ ತುಂತುರು ಮಳೆ ಸುರಿಯುತ್ತಿದೆ. ಬಹುತೇಕ ಕಡೆ ಮೋಡ ಕವಿದ ವಾತಾವರಣವಿದೆ.

 ಮುರಿದು ಬಿದ್ದಿರುವ ತಗಡಿನ ಶೆಡ್ಹುಬ್ಬಳ್ಳಿಯಲ್ಲಿ ಅವಾಂತರ ಸೃಷ್ಟಿಸಿರುವ ಮಳೆ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಮೊನ್ನೆಯಿಂದ ಅಕಾಲಿಕ ಧಾರಾಕಾರ ಮಳೆ ಬಿಡದೇ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಸುರಿದ ಮೊದಲ ಮಳೆಯ ಅಬ್ಬರಕ್ಕೆ ಅವಳಿ ನಗರ ತತ್ತರಿಸಿ ಹೋಗಿದೆ. ನಿನ್ನೆ ಕೂಡ ಮಳೆರಾಯ ನಗರದಲ್ಲಿ ಅಬ್ಬರಿಸಿದ್ದು, ದಾಜೀಬಾನಪೇಟೆ ತುಳಜಾಭವಾನಿ ದೇವಸ್ಥಾನ ರಸ್ತೆ ನದಿಯಂತೆ ಮಾರ್ಪಾಡಾಗಿತ್ತು. ಕೊಳಚೆ ನೀರು ರಸ್ತೆ ಮಧ್ಯೆ ಮೊಣಕಾಲುದ್ದ ಹರಿಯುವ ದೃಶ್ಯ ಕಂಡು ಬಂದಿದೆ. ಜೊತೆಗೆ ಪಾರ್ಕಿಂಗ್​​ನಲ್ಲಿ​ ನಿಲ್ಲಿಸಿದ್ದ ಬೈಕ್​ಗಳು ನೀರಿನ ರಭಸಕ್ಕೆ ತೇಲಿ ಹೋಗಿವೆ.

 ಮಳೆಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿರುವುದು.ಕೇಶ್ವಾಪೂರದಲ್ಲಿ ವರುಣನ ಅಬ್ಬರಕ್ಕೆ ರಸ್ತೆಗೆ ಮರವೊಂದು ಬಿದ್ದು ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಸುರಿದ ಭಾರಿ ಮಳೆಗೆ ಕಾಟನ್ ಮಾರ್ಕೆಟ್ ಕರ್ನಾಟಕ ಬ್ಯಾಂಕ್ ಹತ್ತಿರ ಚರಂಡಿ ನೀರು ಹಲವಾರು ಮಳಿಗೆಗಳಿಗೆ ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವ ದೃಶ್ಯ ‌ಸಾಮಾನ್ಯವಾಗಿತ್ತು. ನವನಗರದ ಭಾಗದಲ್ಲಿ ಮಳೆಯಿಂದ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದು, ಈ ಅಕಾಲಿಕ ಮಳೆಯಿಂದ ಜನಜೀವನ ಹಾಗೂ ಸಂಚಾರದಲ್ಲಿ ಭಾರಿ ಸಮಸ್ಯೆ ಉಂಟಾಗಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ