ಬೆಳಗಾವಿ: ಬೆಳಗಾವಿ ಗ್ರಾಮೀಣದಲ್ಲಿ ಏರ್ಪಡಿಸಲಾಗಿದ್ದ ನಟ ಕಿಚ್ಚ ಸುದೀಪ್ ಅವರ ರೋಡ್ ಶೋ ದಿಢೀರ್ ರದ್ದಾಗಿದೆ.
ನಟ ಕಿಚ್ಚ ಸುದೀಪ್ ಇಂದು ಬೆಳಗಾವಿಯ 5 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಚುನಾವಣಾ ಪ್ರಚಾರ ನಡೆಸುತ್ತಿದ್ದು, ಬೆಳಗಾವಿ ಗ್ರಾಮೀಣದ ರೋಡ್ ಶೋ ಕೊನೇ ಕ್ಷಣದಲ್ಲಿ ರದ್ದಾಗಿದೆ.
ತಾರಿಹಾಳ ಗ್ರಾಮದಲ್ಲಿ ಯುವಕನ ಕೊಲೆ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ ತಾರಿಹಾಳ ಗ್ರಾಮದಲ್ಲಿ ನಿಗದಿಯಾಗಿದ್ದ ಕಿಚ್ಚ ಸುದೀಪ್ ರೋಡ್ ಶೋ ರದ್ದು ಮಾಡಲಾಗಿದೆ. ಬಿಜೆಪಿ ಅಭ್ಯರ್ಥಿ ಪರ ಕಿಚ್ಚ ಸುದೀಪ್ ತಾರಿಹಾಳದಲ್ಲಿ ಪ್ರಚಾರ ನಡೆಸಲಿದ್ದರು.
Laxmi News 24×7