Breaking News

ಬೆಂಗಳೂರಿನಿಂದ ಇಂದು ಮೂರು ರಾಜ್ಯಗಳಿಗೆ ಶ್ರಮಿಕ್​​​ ವಿಶೇಷ ರೈಲು; ಹತ್ತು ಸಾವಿರ ವಲಸಿಗರು ಪ್ರಯಾಣ

Spread the love

ಪ್ರತೀನಿತ್ಯ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರು ಭಾನುವಾರ ಒಂದೇ ದಿನ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಿಂದ ಪ್ರಯಾಣ ಮಾಡಿದವರ ಹತ್ತಾರು ಸಾವಿರಗಟ್ಟಲೇ ಇದೆ.

ಬೆಂಗಳೂರು(ಮೇ.13): ಕೊರೋನಾ ಲಾಕ್​​ಡೌನ್​​ನಿಂದ ರಾಜ್ಯದಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ವಲಸೆ ಕಾರ್ಮಿಕರು ತವರಿಗೆ ವಾಪಸ್ಸಾಗುತ್ತಿದ್ದಾರೆ. ಇಂದು ಕೂಡ ಬೆಂಗಳೂರಿನಿಂದ ಉತ್ತರ ರಾಜ್ಯಗಳಿಗೆ ಕೇಂದ್ರ ರೈಲ್ವೆ ಇಲಾಖೆಯ ಮೂರು ವಿಶೇಷ ಶ್ರಮಿಕ್​​​​​ ಟ್ರೈನ್​​ಗಳು ಹೊರಟಿವೆ. ಚಿಕ್ಕಬಾಣವಾರದಿಂದ ಗೋರಖ್‌ಪುರ 2 ಮತ್ತು ಗ್ವಾಲಿಯರ್‌ಗೆ ಒಂದು ಶ್ರಮಿಕ್ ರೈಲು ಹೋಗುತ್ತಿದೆ. ಈ ರೈಲುಗಳಲ್ಲಿ ವಲಸಿಗರು ತಮ್ಮ ಊರಿಗಳಿಗೆ ತೆರಳಿದ್ಧಾರೆ.

ಇನ್ನು, ನಾಳೆ ಚಿಕ್ಕಬಾಣಾವರದಿಂದ 4480  ವಲಸಿಗರು ಪ್ರಯಾಣ ಬೆಳೆಸಲಿದ್ದಾರೆ. ಜತೆಗೆ ಇಂದು ಮಧ್ಯಾಹ್ನ ಮಧ್ಯಪ್ರದೇಶದ ಗ್ವಾಲಿಯರ್‌ಗೆ 1440 ಜನ ಹೋಗುತ್ತಿದ್ಧಾರೆ. ಅಂತೆಯೇ ಮಧ್ಯಪ್ರದೇಶದ ಗೊರಖ್‌ಪುರಗೆ ಸಂಜೆ 4ಕ್ಕೆ 1520 ಜನ ಮತ್ತು ಸಂಜೆ 6ಕ್ಕೆ 1520 ಜನ ಪ್ರಯಾಣ ಮಾಡಲಿದ್ದಾರೆ.

ಪ್ರತೀನಿತ್ಯ ಜಮ್ಮು ಮತ್ತು ಕಾಶ್ಮೀರ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಗೆ ವಲಸೆ ಕಾರ್ಮಿಕರು ಭಾನುವಾರ ಒಂದೇ ದಿನ ಸಂಚಾರ ನಡೆಸುತ್ತಿದ್ದಾರೆ. ರಾಜ್ಯದಿಂದ ಪ್ರಯಾಣ ಮಾಡಿದವರ ಹತ್ತಾರು ಸಾವಿರಗಟ್ಟಲೇ ಇದೆ.ಸೇವಾ ಸಿಂಧು ಪೋರ್ಟಲ್ ಮೂಲಕ ಮೊದಲು ವಲಸಿಗರು ಹೆಸರು ನೋಂದಣಿ ಮಾಡಬೇಕು. ಅವರ ತವರು ರಾಜ್ಯದ ಅನುಮತಿ ಸಿಕ್ಕ ಬಳಿಕ ವಿಶೇಷ ರೈಲಿಗಾಗಿ ಸರ್ಕಾರ ಬೇಡಿಕೆ ಇಡುತ್ತದೆ. ವಲಸಿಗರಿಗೆ ಯಾವುದೇ ಟಿಕೆಟ್ ಇಲ್ಲ. ಸರ್ಕಾರ ಕೊಟ್ಟ ಪಟ್ಟಿಯಲ್ಲಿ ಹೆಸರು ಇರುವವರು ಮಾತ್ರ ತವರಿಗೆ ವಾಪಸ್ ಆಗಬಹುದಾಗಿದೆ.


Spread the love

About Laxminews 24x7

Check Also

ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ! 6 ಬಾರಿ ತಲಾಖ್, ಅಬಾರ್ಷನ್

Spread the loveಬೆಂಗಳೂರು, ಜುಲೈ 1: ಗಂಡನಾದವನೇ ಹೆಂಡತಿಯನ್ನು ಬೇರೆಯವರ ಜತೆ ಮಲಗುವಂತೆ ಪೀಡಿಸಿದರೆ, ಅದಕ್ಕಾಗಿ ಹಿಂಸಿಸಿದರೆ ಮಹಿಳೆಯ ಸ್ಥಿತಿ ಹೇಗಾಗಬಹುದು! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ