Breaking News

ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಆರೋಪ

Spread the love

ರಾಮನಗರ: ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು (Puneeth Kerehalli, Hindu Activist) ಸಾತನೂರು ಪೊಲೀಸರು (Satanuru Police) ಬಂಧಿಸಿರುವ ಮಾಹಿತಿ  ಲಭ್ಯವಾಗಿದೆ. ಸಾತನೂರು ಸಮೀಪ ಜಾನುವಾರುಗಳನ್ನು ರಕ್ಷಣೆ ಮಾಡುವ ವೇಳೆ ಇರ್ದಿಷ್ ಪಾಷಾ ಎಂಬಾತ ಸಾವನ್ನಪ್ಪಿದ್ದನು.
ಇರ್ಗಿಷ್ ಮೇಲೆ ಹಲ್ಲೆಗೈದು ಕೊಲೆ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದರು. ಈ ಸಂಬಂಧ ಇರ್ದಿಷ್ ಕುಟುಂಬಸ್ಥರು ಸಾತನೂರು ಪೊಲೀಸ್ ಠಾಣೆಯಲ್ಲಿ ದೂರು (Complaint) ದಾಖಲಿಸಿದ್ದರು.
ದೂರು ದಾಖಲಿಸಿಕೊಂಡಿರುವ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ. ಸದ್ಯ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ರಹಸ್ಯ ಸ್ಥಳದಲ್ಲಿರಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಆರೋಪ ಹಿನ್ನೆಲೆ ಮೃತನ ಸಂಬಂಧಿಕರು ಸಾತನೂರು ಠಾಣೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ನಿನ್ನೆ ಸಾತನೂರು ಬಳಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಡ್ಡಗಟ್ಟಿ 16 ಜಾನುವಾರುಗಳನ್ನ ರಕ್ಷಿಸಲಾಗಿದೆ.

ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ

ಈ ವೇಳೆ ಕ್ಯಾಂಟರ್ ವಾಹನದಲ್ಲಿದ್ದ ಇರ್ದಿಷ್ ಪಾಷ ಎಂಬಾತ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಜಾನುವಾರುಗಳನ್ನು ರಕ್ಷಿಸಿದ ಅನತಿ ದೂರದಲ್ಲಿಯೇ ಇರ್ದಿಷ್ ಶವ ಪತ್ತೆಯಾಗಿತ್ತು.

ಪುನೀತ್ ಕೆರೆಹಳ್ಳಿ ವಿರುದ್ಧ ಕೊಲೆ ಆರೋಪ

ಈ ಸಂಬಂಧ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ತಂಡದಿಂದ ದಾಳಿ ನಡೆದಿದೆ ಎಂದು ಮೃತನ ಕುಟುಂಬಸ್ಥರು ಪುನೀತ್ ಕೆರೆಹಳ್ಳಿ ವಿರುದ್ಧ ಆರೋಪಿಸಿದ್ದಾರೆ. ಶನಿವಾರ ಸಾತನೂರು ಪೊಲೀಸರು ಠಾಣೆ ಮುಂದೆ ಇರ್ದಿಷ್ ಕುಟುಂಬಸ್ಥರು ಪ್ರತಿಭಟನೆ ಸಹ ನಡೆಸಿದ್ದರು.


Spread the love

About Laxminews 24x7

Check Also

ಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ*

Spread the loveಕಬ್ಬಿಗೆ ₹3300 ದರ – ವಿಜಯಪುರದಲ್ಲಿ ಗೊಂದಲ: ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ* ರಾಜ್ಯ ಸರ್ಕಾರ ಕಬ್ಬಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ