Breaking News

ಕ್ಷಣಕಾಲ ಆತಂಕ ಮೂಡಿಸಿದ ಸಿಎಂ ಬೊಮ್ಮಾಯಿ ಇದ್ದ ಹೆಲಿಕಾಪ್ಟರ್

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ.ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ( CM Basavaraj Bommai ) ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ( Helicopter )​ ಟೇಕ್ ಆಫ್​ ಆಗಿ ಮತ್ತೆ ಲ್ಯಾಂಡ್​​ ಆಗಿರುವ ಘಟನೆ ಚಿಕ್ಕಬಳ್ಳಾಪುರದ ಎಸ್​ಜೆಸಿಐಟಿ ಹೆಲಿಪ್ಯಾಡ್​ನಲ್ಲಿ ನಡೆದಿದೆ.

ಧೂಳಿನಿಂದ ಆಕಾಶ ಕಾಣಿಸದಂತಾದ ಹಿನ್ನಲೆ ಮತ್ತೆ ಲ್ಯಾಂಡಿಂಗ್ ಮಾಡಲಾಗಿದೆ. ಹೆಲಿಕಾಪ್ಟರ್ ಲ್ಯಾಂಡಿಂಗ್​ ನೋಡಿ ಆತಂಕಗೊಂಡ ಪೊಲೀಸರು ಕೂಡಲೆ ಸ್ಥಳಕ್ಕೆ ಧಾವಿಸಿದರು. ಆದರೆ, ಬಳಿಕ ಮತ್ತೊಮ್ಮೆ ಟೇಕ್ ಆಫ್​ ಆಗಿ ಹೆಲಿಕಾಪ್ಟರ್​ ಹಾರಾಟ ನಡೆಸಿದೆ. ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ. ಕೆ ಸುಧಾಕರ್​ ಚಿಕ್ಕಬಳ್ಳಾಪುರದಿಂದ ರಾಮನಗರಕ್ಕೆ ತೆರಳಲೆಂದು ಹೆಲಿಕಾಪ್ಟರ್​​ ಹತ್ತಿದ್ದರು. ಟೇಕ್​ ಆಫ್​ ಆಗುವ ವೇಳೆಗೆ, ಹೆಲಿಕಾಪಟ್ಟರ್​ ಪ್ಯಾನ್​​ ಗಾಳಿಯಿಂದ ದೂಳು ಎದ್ದಿದೆ. ಆಗ ಚಾಲಕನಿಗೆ ಆಕಾಶ ಕಾಣದ ಹಿನ್ನೆಲೆ ಮತ್ತೆ ಲ್ಯಾಂಡ್​ ಮಾಡಿದ್ದಾರೆ. ಇದನ್ನು ಕಂಡ ಪೊಲೀಸರು ಕೂಡಲೆ ಸ್ಥಳಕ್ಕೆ ತೆರಳುವಷ್ಟರಲ್ಲಿ, ಹೆಲಿಕಾಪ್ಟರ್​ ಮತ್ತೆ ಟೇಕ್​ ಆಫ್​​ ಆಗಿ ಪ್ರಯಾಣ ಬೆಳಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ​ ಮಾಡಿ


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ