ಬೆಳಗಾವಿ: ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ವಿನಯ್ ಕುಲಕರ್ಣಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಿಗ್ಗಾಂವಿಯಿಂದ ಸ್ಪರ್ಧೆ ವಿಚಾರ ನನ್ನದಲ್ಲ, ಹೈಕಮಾಂಡ್ ನಾಯಕರು ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ನಮ್ಮ ನಾಯಕರು ಈ ವಿಚಾರ ಹೇಳಿದ್ದಾರೆ. ನನಗೆ ಧಾರವಾಡ ಪ್ರವೇಶಕ್ಕೆ ಕುತಂತ್ರದಿಂದ ಅವಕಾಶ ನೀಡುತ್ತಿಲ್ಲ. ಸ್ಪರ್ಧೆ ನನ್ನ ಅಪೇಕ್ಷೆಯಲ್ಲ, ಅದು ಹೈಕಮಾಂಡ್ ನಿರ್ಧಾರ ಎಂದು ಹೇಳಿದರು.
ʼ
ಶಿಗ್ಗಾಂವಿಯಲ್ಲೂ ಹಲವು ಆಕಾಂಕ್ಷಿಗಳಿದ್ದಾರೆ ಅವರಿಗೆ ನೋವು ಮಾಡಿ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ. ಪಕ್ಷದ ವರಿಷ್ಠರ ತೀರ್ಮಾನ ಏನು ಅಗಿರತ್ತದೋ ಅದರಂತೆ ನಡೆಯುತ್ತೇನೆ. ಸ್ಪರ್ಧೆ ಮಾಡದಂತೆ ಹೇಳಿದರೂ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ಧ. ಧಾರವಾಡದಿಂದ ಸ್ಪರ್ಧೆ ಮಾಡಬೇಡಿ ಅಂದ್ರೂ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
Laxmi News 24×7