ಬಸ್ತವಾಡ ಗ್ರಾಮದ ಶ್ರೀಅರಣ್ಯ ಸಿದ್ದೇಶ್ವರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರಗಿತು
ರಾಯಬಾಗ ತಾಲೂಕೀನ ಬಸ್ತವಾಡ ಗ್ರಾಮಸಲ್ಲಿ ಶ್ರೀ ಅರಣ್ಯ ಸಿದ್ದೇಶ್ವರ ಜಾತ್ರೆಯು ವಿಜೃಂಭಣೆಯಿಂದ ನಡೆಯಿತು ಈ ಜಾತ್ರೆಯ ಅಂಗವಾಗಿ ಬೇರೆ ಬೇರೆ ಗ್ರಾಮಗಳಿಂದ ಪಲ್ಲಕ್ಕಿ ಗಳು ದೇವಸ್ಥಾನದ ಆವರಣಕ್ಕೆ ಆಗಮಿಸಿದವು ಭಕ್ತರು ಭಂಡಾರದ ಒಡೆಯನಿಗೆ ಭಂಡಾರ ಹಾರಿಸಿ ಭಕ್ತಿಸೇವೆ ಅರ್ಪಿಸಿದರು
ಹರಕೆ ಹೊತ್ತ ಭಕ್ತರು ದೇವರ ಆಶೀರ್ವಾದದಿಂದ ಹರಕೆ ಫಲ ಈಡೇರಿದ ನಂತರ ಹತ್ತು ಜನ ಭಕ್ತರು ಸಿದ್ದಪ್ಪ ಪೂಜೇರಿಯವರಿಗೆ ತುಲಭಾರ ನೆರವೇರಿಸಿದರು.
ಜಾತ್ರಾ ಅಂಗವಾಗಿ ಸ್ತ್ರೀ ಪುರುಷರೆನ್ನದೆ ಭಕ್ತಿಭಾವದಿಂದ ದಿಡ ನಮಸ್ಕಾರ ಹಾಗೂ ದಂಡವತ್ತ ಹಾಕುವ ದೃಶ್ಯ ಕಂಡುಬಂತು.
ಈ ಜಾತ್ರೆಯ ಸಮಯದಲ್ಲಿ ಡೋಳ್ಳು ಬಾರಿಸಿ ನಾಣ್ಯ ಸರಿಸುವ ,ಜಿದ್ದಾಜಿದ್ದಿನ ಡೊಳ್ಳಿನ ಹಾಡುಗಳು,ಕಣ್ಣುಕಟ್ಟಿ ಮಸರು ಗಡಿಗೆ ಒಡೆಯುವದು,ಜೋಡು ಕುದರೆ,ಒಂದು ಕುದರೆ ಗಾಡಿ,ಹಾಗೂ ಒಂದು ನಿಮಿಷದ ಜೋಡೆತ್ತಿನ ಗಾಡಿ ಒಡಿಸುವ ಸ್ಪರ್ದೆಗಳು ಜರುಗಿದವು,
ಈ ಸಂದರ್ಭದಲ್ಲಿ ದೇವಸ್ಥಾನದ ಅದ್ಯಕ್ಷರು ಪರಸಪ್ಪ ಕಬ್ಬುರೆ ,ದೇವಸ್ಥಾನದ ಪೂಜಾರಿ ಸಿದ್ದಪ್ಪ ಪೂಜಾರಿ,ಪಾಂಡು ಹೋಸಟ್ಟಿ ಉಪಾದ್ಯಕ್ಷ, ಬಸು ಕಬ್ಬುರೆ,ಪರಸು ಕುಳಲಿ,ಪ್ರದಿಪ್ ಲಟ್ಟೆ,ಮಾರುತಿ ಹುಕ್ಜೆರಿ,ಮುತ್ತಪ್ಪಾ ಬೆಕ್ಜೇರಿ, ತಮ್ಮಾಣಿ ಕೀಡದಾಳ,ವಿಠ್ಠಲ ಮಸರ ಗುಪ್ಪಿ, ಪುಂಡಲಿಕ್ ಪೂಜಾರಿ,ಕೃಷ್ಣಾ
,ರವಿ ಹುಕ್ಕೆರಿ, ಹಾಗೂ ದೇವಸ್ಥಾನ ದ ಭಕ್ತರು ಉಪಸ್ಥಿತರಿದ್ದರು