Breaking News

ಖಾನಾಪುರ: ಕ್ರೀಡಾ ವಿಜೇತರಿಗೆ ನಗದು ಬಹುಮಾನ

Spread the love

ಖಾನಾಪುರ: ಪಟ್ಟಣದಲ್ಲಿ ಆಯೋಜಿಸಿದ್ದ ಲಿಂಗನಮಠ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ನಲ್ಲಿ ವಿಜೇತ ತಂಡಗಳಿಗೆ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್‌ ಭಾನುವಾರ ನಗದು ಬಹುಮಾನ ವಿತರಿಸಿದರು.

ಚಾಂಪಿಯನ್‌ ತಂಡಕ್ಕೆ ₹50 ಸಾವಿರ, ದ್ವಿತೀಯ ಸ್ನಾನ ಪಡೆದ ತಂಡಕ್ಕೆ ₹ 25 ಸಾವಿರ, ತೃತೀಯ ಸ್ಥಾನದ ಆಟಗಾರರಿಗೆ ₹ 10 ಸಾವಿರದ ಚೆಕ್‌ಗಳನ್ನು ಅವರು ನೀಡಿದರು.

 

ನಂತರ ಮಾತನಾಡಿ, ‘ಮುಂದಿನ ವರ್ಷದಿಂದ ಈ ನಗದು ಬಹುಮಾನ ಮೊತ್ತವನ್ನು ₹ 5 ಲಕ್ಷಕ್ಕೆ ಏರಿಸಲಾಗುವುದು. ಖಾನಾಪುರದಲ್ಲಿ ಗ್ರ್ಯಾಂಡ್‌ ಪ್ರೀಮಿಯರ್‌ ಲೀಗ್‌ ಆಯೋಜಿಸಲಾಗುವುದು. ಗ್ರಾಮೀಣ ಕ್ರೀಡಾಪಟುಗಳಿಗೆ ಆದ್ಯತೆ ನೀಡಲಾಗುವುದು’ ಎಂದರು.

‘ದೇಶದ ಏಕತೆ, ಸಮಗ್ರತೆ ಕಾಪಾಡಲು ಬಿಜೆಪಿ ಅನಿವಾರ್ಯ. ಬಿಜೆಪಿ ಬೆಂಬಲಿಸಲು ಯುವಜನರು 8000090009 ಸಂಖ್ಯೆ ಮಿಸ್‌ಕಾಲ್‌ ಕೊಡುವ ಮೂಲಕ ಬಿಜೆಪಿ ಸದಸ್ಯತ್ವ ಪಡೆಯಬೇಕು’ ಎಂದೂ ಕೋರಿದರು.

ವೇದಿಕೆಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತ ರಾಜು ರಾಪಾಟೆ, ಡಾ.ಕಲ್ಲಯ್ಯ ಹಿರೇಮಠ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಾನಂದ ಗೋಧೂಳಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಾರುತಿ ಹರಿಜನ, ತವನಪ್ಪ ರಾಪಾಟೆ, ಸರೋಜಾ ಬಾಗೇವಾಡಿ, ಭಾರತಿ ತಕಡಿ, ಅನುಸಯ ಅಗಸರ, ಅನಿತಾ ಕೋಲಮಸ್ಕರ್‌ ಇದ್ದರು.

ಇದೇ ವೇಳೆ ಲಿಂಗನಮಠ ಕ್ರೀಡಾ ಸಮಿತಿ ಸದಸ್ಯರು ಡಾ.ಸೋನಾಲಿ ಅವರನ್ನು ಸನ್ಮಾನಿಸಿದರು. ಕುಶ ಅಂಬೋಜಿ, ಬಾಳೇಶ ಚವಣ್ಣವರ, ದೀಪಕ ಮಾಟೊಳ್ಳಿ ಇತರರು ಇದ್ದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ