ಶಿವಮೊಗ್ಗ: ರಾಷ್ಟ್ರಕವಿ ಕುವೆಂಪು ಅವರು ಹೇಳಿದ ವಿಶ್ವಮಾನ ತತ್ವಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಉದಾಹರಣೆ. ಪ್ರಧಾನಿ ಮೋದಿ ಅವರು ಇಂದಿನ ವಿಶ್ವಮಾನವ. ವಸುದೈವ ಕುಟುಂಬಿಕಂ ಆಶಯವನ್ನು ಈಡೇರಿಸುತ್ತಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಣ್ಣಸಿದರು.
ಶಿವಮೊಗ್ಗದ ಸೋಗಾನೆಯಲ್ಲಿ ನೂತನ ವಿಮಾನ ನಿಲ್ದಾಣದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, “ನಿಮ್ಮ ಹುಟ್ಟುಹಬ್ಬದ ದಿನವೇ ವಿಮಾ ನಿಲ್ದಾಣ ಉದ್ಘಾಟನೆ ಮಾಡಬೇಕು. ಅಂದು ನಾನು ಬಂದೇ ಬರುತ್ತೇನೆ ಎಂದು ಮೋದಿ ಹೇಳಿದ್ದರು. ಅದಕ್ಕಾಗಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ” ಎಂದರು.
ನನ್ನ ರಾಜಕೀಯದಲ್ಲಿ ಈ ದಿನ ಬಹಳ ವೈಶಿಷ್ಟಯಪೂರ್ಣ ದಿನ. ಇಂದು ಜಿಲ್ಲೆಗೆ ಸಾರ್ಥಕ ದಿನ. ಇದು ಕೇವಲ ವಿಮಾನ ನಿಲ್ದಾಣವಲ್ಲ. ಮಲೆನಾಡಿನ ಹಲವಾರು ಕನಸುಗಳು ನನಸಾಗುವ ಶುಭ ಸಂಕೇತ ಎಂದು ಹೇಳಿದರು.
ಸಂಸದ ರಾಘವೇಂದ್ರನ ವಿಶೇಷ ಪ್ರಯತ್ನದಿಂದ ವಿಮಾನ ನಿಲ್ದಾಣ ಕಾರ್ಯ ಬೇಗ ಮುಗಿದಿದೆ ಎನ್ನಲು ನನಗೆ ಹೆಮ್ಮೆಯಿದೆ ಎಂದ ಬಿಎಸ್ ಯಡಿಯೂರಪ್ಪ, ನನ್ನ 60ನೇ ಹುಟ್ಟುಹಬ್ಬಕ್ಕೆ ಅಟಲ್ ಬಿಹಾರಿ ವಾಜಪೇಯಿ ಬಂದಿದ್ದರು. ಆ ನೆನಪು ಸದಾ ಹಸಿರಾಗಿದೆ. ಇಂದು 80ನೇ ಹುಟ್ಟುಹಬ್ಬಕ್ಕೆ ನೀವು ಬಂದಿದ್ದು ಸಂತಸ ನೀಡಿದೆ ಎಂದು ಭಾವುಕವಾಗಿ ಹೇಳಿದರು.
Laxmi News 24×7