Breaking News

ಆಟೋ ಚಾಲಕನ ಮಾಹಿತಿ ಮೇರೆಗೆ ಮೂರು ವಿಶೇಷ ತಂಡ ಟೋಪಿವಾಲನಿಗಾಗಿ ಮಂಗಳೂರು ಪೊಲೀಸರು ವ್ಯಾಪಕ ಶೋಧ

Spread the love

ಬೆಂಗಳೂರು,ಜ.21-ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಪರಾರಿಯಾಗಿರುವ ಟೋಪಿವಾಲನಿಗಾಗಿ ಮಂಗಳೂರು ಪೊಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ.

ಮಂಗಳೂರು ಪೊಲೀಸ್ ಕಮಿಷನರ್ ಡಾ.ಹರ್ಷ ಅವರು ಆರೋಪಿಯ ಬಂಧನಕ್ಕೆ ಮೂರು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಈ ತಂಡಗಳು ನಿನ್ನೆಯಿಂದಲೇ ಆರೋಪಿಗಾಗಿ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿವೆ.

ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ನಂತರ ಮಂಗಳೂರು ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ಬಿಳಿ ಶರ್ಟ್ , ಕಪ್ಪು ಬಣ್ಣದ ಪ್ಯಾಂಟ್ ತೊಟ್ಟು ಮುಖ ಕಾಣದ ಹಾಗೆ ಟೋಪಿಯನ್ನು ಧರಿಸಿ ಲ್ಯಾಪ್‍ಟಾಪ್‍ಗೆ ಬಳಸುವ ಬ್ಯಾಗ್‍ನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಕಂಡುಬಂದಿದೆ.  ತಕ್ಷಣ ತೀವ್ರವಾಗಿ ಪರಿಶೀಲಿಸಿದ ಪೊಲೀಸರಿಗೆ ಆತ ಆಟೋದಲ್ಲಿ ಬಂದು ವಿಮಾನ ನಿಲ್ದಾಣಕ್ಕೆ ಹೋಗಿ ಟಿಕೆಟ್ ಕೌಂಟರ್ ಬಳಿಯ ಸಾರ್ವಜನಿಕರು ಕುಳಿತುಕೊಳ್ಳುವ ಕಬ್ಬಿಣದ ಚೇರ್ ಮೇಲಿಟ್ಟು ಪರಾರಿಯಾಗಿರುವುದು ಗೊತ್ತಾಗಿದೆ.

 


Spread the love

About Laxminews 24x7

Check Also

ಭವಿಷ್ಯ ಹೇಳುತ್ತಿರುವ ಆರ್. ಅಶೋಕ ಬಳಿ ನಾನು ಕೂಡ ಭವಿಷ್ಯ ಕೇಳಲು ಹೋಗಿ ಬರ್ತೇನೆ: ಡಿ.ಕೆ. ಶಿವಕುಮಾರ್

Spread the loveಬೆಂಗಳೂರು: ನನಗೂ ಜ್ಯೋತಿಷ್ಯ ಶಾಸ್ತ್ರದ ಚಟವಿದೆ. ಆರ್. ಅಶೋಕ ಬೋರ್ಡ ಹಾಕಿಕೊಂಡಿದ್ದಾರೆ. ಸ್ವಲ್ಪ ಸಮಯ ತೆಗೆದುಕೊಂಡು ತಾವೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ