ಬೆಂಗಳೂರು: ನಗರದ ಮಹಾಲಕ್ಷ್ಮೀ ಲೇಔಟ್ ನಲ್ಲಿರುವಂತ ಆರ್ಕಿಡ್ ಶಾಲೆಯ ಅವಾಂತರ ಮುಂದುವರೆದಿದೆ. ಇಂದು ಪೋಷಕರ ಸಭೆ ನಡೆಸುವುದಾಗಿ ಕರೆಸಿ, ಸಿಬ್ಬಂದಿಗಳಿಂದ ಹಲ್ಲೆ ನಡೆಸಿರೋದಾಗಿ ಹೇಳಲಾಗುತ್ತಿದೆ.
ಇಂದು ಸಂಜೆ ಮಹಾಲಕ್ಷ್ಮೀ ಲೇಔಟ್ ನಲ್ಲಿರುವಂತ ಆರ್ಕಿಡ್ ಶಾಲೆಯಲ್ಲಿ ಸಿಬಿಎಸ್ಸಿ ಸಿಲಬಸ್ ಮಾನ್ಯತೆಯ ಬಗ್ಗೆ ಚರ್ಚಿಸೋದಕ್ಕಾಗಿ ಪೋಷಕರ ಸಭೆಯನ್ನು ಆಡಳಿತ ಮಂಡಳಿ ಕರೆಯಲಾಗಿತ್ತು.
ಸಭೆಗೆ ಆಗಮಿಸಿದಂತ ಪೋಷಕರನ್ನು ಶಾಲೆಯ ಒಳಗಡೆ ಬಿಡದೇ, ಹೊರಗಡೆ ಶಾಲೆಯು ಸಿಬಿಎಸ್ಸಿ ಮಾನ್ಯತೆ ಪಡೆದಿದೆ ಎಂಬುದಾಗಿ ಗೇಟ್ ಮುಂದೆ ಬೋರ್ಡ್ ನೇತು ಹಾಕಿದೆ.
ಇನ್ನೂ ಶಾಲೆಯ ಒಳಗಡೆ ಪೋಷಕರನ್ನು ಸಭೆಗೆ ಕರೆದು ಬಿಡದೇ ಇದ್ದಿದ್ದಕ್ಕಾಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಆಡಳಿತ ಮಂಡಳಿ ಹಾಗೂ ಪೋಷಕರು, ಶಾಲಾ ಸಿಬ್ಬಂದಿಯ ನಡುವೆ ತಳ್ಳಾಟ, ನೂಕಾಟ ಉಂಟಾಗಿದೆ.