Breaking News

ರಾಜ್ಯಕ್ಕೆ ಪ್ರಿಯಾಂಕಾ ಗಾಂಧಿ ಆಗಮನ; ಕಾಂಗ್ರೆಸ್​ನಿಂದ ಭರ್ಜರಿ ಘೋಷಣೆ ಸಾಧ್ಯತೆ

Spread the love

ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಕಾಂಗ್ರೆಸ್​ ಈಗ ಯೋಜನೆಗಳ ಮಹಾಪೂರವನ್ನೇ ಹರಿಸಲು ಮುಂದಾಗಿದೆ ಎನ್ನಲಾಗುತ್ತಿದೆ. ಈಗಾಗಲೇ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತೀ ಮನೆಗೂ 200 ಯೂನಿಟ್​ ವಿದ್ಯುತ್​ಅನ್ನು ಉಚಿತವಾಗಿ ನೀಡುವ ಬಗ್ಗೆ ಘೋಷಣೆ ಮಾಡಿದೆ.

ಇದೀಗ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಭೇಟಿ ನೀಡಲಿದ್ದು ಈ ಹಿನ್ನೆಲೆಯಲ್ಲಿ ಭರ್ಜರಿ ಘೋಷಣೆಗಳನ್ನು ಮಾಡಲು ಕಾಂಗ್ರೆಸ್​ ಸಿದ್ಧವಾಗಿದೆ.

ವಿಶೇಷವಾಗಿ ಮಹಿಳೆಯರಿಗೆ ಹಲವು ಯೋಜನೆ ಘೋಷಣೆ ಮಾಡಲು ಸಿದ್ಧವಾಗಿರುವ ಕಾಂಗ್ರೆಸ್​ ಪ್ರಿಯಾಂಕಾ ಗಾಂಧಿ ರಾಜ್ಯಕ್ಕೆ ಬಂದ ಕೂಡಲೆ ಸಭೆ ನಡೆಸಲಿದೆ. ವಿಮಾನನಿಲ್ದಾಣದಲ್ಲೇ ಹೊಸ ಯೋಜನೆಗಳ ಬಗ್ಗೆ ಕೈ ನಾಯಕರು ಸಭೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ.

ಕಾಂಗ್ರೆಸ್ ಸರ್ಕಾರ ಬಂದ್ರೆ ಯೋಜನೆ ಜಾರಿ ಮಾಡುವ ಗ್ಯಾರಂಟಿ ನೀಡುವ ಬಗ್ಗೆ ಈ ಸಭೆ ಇರಲಿದ್ದು ಇವತ್ತು ಮಹಿಳೆಯರಿಗೆ ಕಾಂಗ್ರೆಸ್ ಹಲವು ಗ್ಯಾರಂಟಿಗಳನ್ನು ನೀಡುವ ನಿರೀಕ್ಷೆ ಇದೆ. ನಿರುದ್ಯೋಗಿ ಯುವತಿಯರಿಗೆ ಮಾಸಿಕ ಭತ್ಯೆ ಘೋಷಣೆ ಮಾಡುವ ಸಾಧ್ಯತೆ ಇದ್ದು ಹಳೆ ಪೆನ್ಸೆನ್ ಯೋಜನೆ ಮರು ಜಾರಿಗೆ ಭರವಸೆ ನೀಡಬಹುದು ಎನ್ನಲಾಗುತ್ತಿದೆ.

ಈ ಸಂದರ್ಭ ಬೆಲೆ ಏರಿಕೆ ವಿರುದ್ಧವಾಗಿ ಮಹಿಳೆಯರಿಗೆ ಕಾಂಗ್ರೆಸ್​ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಬಿಗ್ ರಿಲೀಫ್ ನೀಡುವ ಬಗ್ಗೆ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅದರಲ್ಲಿ ಎಲ್​ಪಿಜಿ ದರ ಕಡಿತ ಮಾಡುವ ಬಗ್ಗೆ ಭರವಸೆ ನೀಡುವ ಸಾಧ್ಯತೆ ಕೂಡ ಇದೆ. ಮಹಿಳೆಯರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ಘೋಷಣೆಗಳನ್ನು ಕಾಂಗ್ರೆಸ್​ ಮಾಡುವ ಸಾಧ್ಯತೆ ಬಬಹಿತೇಕ ಹೆಚ್ಚೇ ಇದೆ.


Spread the love

About Laxminews 24x7

Check Also

ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು….

Spread the love ಗಣೇಶೋತ್ಸವದ ಹಿನ್ನಲ್ಲೆಯಲ್ಲಿ ಬೆಳಗಾವಿಯಲ್ಲಿ ಭಾರಿ ವಾಗನಗಳ ಮಾರ್ಗ ಬದಲಾವಣೆ ಮಾಡಿದ ನಗರ ಪೊಲೀಸರು…. ಅದ್ದೂರಿ ಗಣೇಶೋತ್ಸವಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ