ಮಹಾರಾಷ್ಟ್ರ: ತನ್ನ ಎರಡೂವರೆ ತಿಂಗಳು ಹಸುಗೂಸಿನೊಂದಿಗೆ ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ನಾಗಪುರದಲ್ಲಿ ವಿಧಾನಮಂಡಳದ ಅಧಿವೇಶನಕ್ಕೆ ಹಾಜರಾದ ಪ್ರಸಂಗ ನಡೆಯಿತು.
ಎನ್‌ಸಿಪಿ ಶಾಸಕಿ ಸರೋಜ್ ಬಾಬುಲಾಲ್ ಅಹಿರ್ ಅವರು ಸೆ.30ರಂದು ಮಗುವಿಗೆ ಜನ್ಮ ನೀಡಿದ್ದರು.
ಇಂದಿನಿಂದ(ಸೋಮವಾರ) ಅಧಿವೇಶನ ಶುರುವಾಗಿದ್ದು, ಪುಟ್ಟ ಮಗುವಿನ ಜತೆ ಆಗಮಿಸುವ ಮೂಲಕ ಗಮನ ಸೆಳದರು.
ಈ ಕುರಿತು ಪ್ರತಿಕ್ರಿಯಿಸಿದ ಶಾಸಕಿ, ‘ಕರೊನಾ ಹಿನ್ನೆಲೆ ಕಳೆದ ಎರಡೂವರೆ ವರ್ಷಗಳಿಂದ ನಾಗ್ಪುರದಲ್ಲಿ ಯಾವುದೇ ಅಧಿವೇಶನ ನಡೆದಿರಲಿಲ್ಲ. ನಾನೀಗ ತಾಯಿಯಾಗಿದ್ದೇನೆ. ಆದರೆ ನನ್ನ ಮತದಾರರಿಗೆ ಉತ್ತರ ಕೊಡಲು ಬಂದಿದ್ದೇನೆ’ ಎಂದಿದ್ದಾರೆ.
Laxmi News 24×7