ಕ್ರೇಜಿಸ್ಟಾರ್ ರವಿಚಂದ್ರನ್ ಅವರದ್ದು ಏನೇ ಇದ್ದರೂ ನೇರ ನುಡಿ. ಎದುರಿಗೆ ಅದೆಷ್ಟೇ ದೊಡ್ಡ ಮಂದಿ ಇದ್ದರೂ, ಕ್ರೇಜಿ ಸ್ಟಾರ್ ಯಾರಿಗೂ ಕ್ಯಾರೇ ಅನ್ನೋದಿಲ್ಲ. ತಮ್ಮ ಮನಸ್ಸಿಗೆ ಅನಿಸಿದ್ದನ್ನು ಹಾಗೇ ಹೇಳಿ ಬಿಡುತ್ತಾರೆ. ಇದು ಇತ್ತೀಚೆಗಷ್ಟೇ ಬಂದಿಲ್ಲ. ಮೊದಲಿನಿಂದಲೂ ಕ್ರೇಜಿಸ್ಟಾರ್ ಇದ್ದಿದ್ದೇ ಹೀಗೆ.
ಸ್ಯಾಂಡಲ್‌ವುಡ್‌ನಲ್ಲಿ ಇದ್ದಿದ್ದು ಇದ್ದಂಗೆ ಮಾತಾಡೋ ಕೆಲವೇ ಕೆಲವು ನಟರಲ್ಲಿ ರವಿಚಂದ್ರನ್ ಕೂಡ ಒಬ್ಬರು. ಇತ್ತೀಚೆಗೆ ಕ್ರೇಜಿಸ್ಟಾರ್ ತಿಲಲಕ್ಷದೀಪೋತ್ಸವ ಅನ್ನೋ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಭಾಗವಹಿಸಿದ್ದರು. ಈ ವೇಳೆ ರವಿಚಂದ್ರನ್ ತನಗೆ ಯಾರೂ ಸಹಾಯ ಮಾಡಿಲ್ಲ ಅಂತ ಹೇಳಿದ್ದಾರೆ. ಕ್ರೇಜಿಸ್ಟಾರ್ ಮಾತಿನ ಹೈಲೈಟ್ಸ್ ಇಲ್ಲಿದೆ.
ನನಗೆ ಆ ಪರಿಸ್ಥಿತಿ ಇನ್ನೂ ಬಂದಿಲ್ಲ
ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ತನಗೆ ಯಾರ ಸಹಾಯವೂ ಬೇಕಾಗಿಲ್ಲ ಎಂದು ಹೇಳಿದ್ದಾರೆ. ಟಿವಿಗಳಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಎಲ್ಲರೂ ಸಹಾಯ ಮಾಡುತ್ತಿದ್ದಾರೆ ಅಂತ ಹೇಳುತ್ತಿದ್ದಾರೆ. ಅದರ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. “ಎಲ್ಲರೂ ಟಿವಿಗಳಲ್ಲಿ ಹೇಳ್ಕೊಂಡು ಓಡಾಡುತ್ತಿದ್ದಾರೆ. ಅವರು ಬಂದು ಸಹಾಯ ಮಾಡಿದ್ರು. ಇವರು ಬಂದು ಸಹಾಯ ಮಾಡಿದ್ರು. ಎಲ್ಲಾ ಬರೀ ಸುಳ್ಳುರೀ. ಆ ಪರಿಸ್ಥಿತಿ ಇನ್ನೂ ನನಗೆ ಬಂದೂ ಇಲ್ಲ. ಬೇಕಾಗೂ ಇಲ್ಲ. ಸದ್ಯಕ್ಕೆ ಆ ಪರಿಸ್ಥಿತಿ ಇಲ್ಲ” ಎಂದು ಕ್ರೇಜಿಸ್ಟಾರ್ ರವಿಚಂದ್ರನ್ ಹೇಳಿದ್ದಾರೆ.
‘ಹಣಕ್ಕಿಂತ ಜನ ಸಂಪಾದನೆ ಮಾಡಿದ್ದೇನೆ’