Breaking News

86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ: ಲಾಂಛನದಲ್ಲಿ ಮಾರ್ಪಾಡು

Spread the love

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನದಲ್ಲಿದ್ದ ಕನಕದಾಸ, ಸರ್ವಜ್ಞ, ಶಿಶುನಾಳ ಷರೀಫ ಮುಂತಾದ ಮಹನೀಯರ ಭಾವಚಿತ್ರಗಳನ್ನು ಕೈಬಿಟ್ಟು, ಕೆಲ ಮಾರ್ಪಾಡುಗಳೊಂದಿಗೆ ಪರಿಷ್ಕೃತ ಲಾಂಛನವನ್ನು ಕಸಾಪ ಅಧ್ಯಕ್ಷ ಮಹೇಶ ಜೋಶಿ ಬುಧವಾರ ಬಿಡುಗಡೆ ಮಾಡಿದರು.

 

ಮಾಧ್ಯಮಗೋಷ್ಠಿಯಲ್ಲಿ ಮಾತ ನಾಡಿದ ಮಹೇಶ ಜೋಶಿ, ಅ.29ರಂದು ಹಾವೇರಿಯಲ್ಲಿ ಲಾಂಛನ ಬಿಡುಗಡೆ ಮಾಡಿದ ಬಳಿಕ, ಸಂತ-ಕವಿ-ಸ್ವಾತಂತ್ರ್ಯ ಹೋರಾಟಗಾರರ ಮತ್ತಷ್ಟು ಭಾವಚಿತ್ರ ಗಳನ್ನು ಸೇರ್ಪಡೆ ಮಾಡುವಂತೆ ಬೇಡಿಕೆಗಳು ಬಂದಿದ್ದವು. ಎಲ್ಲರನ್ನೂ ಲಾಂಛನದಲ್ಲಿ ಸೇರಿಸಲು ಸಾಧ್ಯವಾಗದ ಕಾರಣ, ಹಾವೇರಿ ಜಿಲ್ಲೆಯನ್ನು ಪ್ರತಿ ನಿಧಿಸುವ ಮಹನೀಯರ ಚಿತ್ರಗಳನ್ನು ಕೈಬಿಟ್ಟು, ಜಿಲ್ಲೆಯ ಐತಿಹಾಸಿಕ ಸ್ಥಳ, ಸಾಂಸ್ಕೃತಿಕ ಅಸ್ಮಿತೆ ಬಿಂಬಿಸಿ ಮಾರ್ಪಾಡು ಮಾಡಲಾಗಿದೆ. ನಗರದ ಹೊರವಲಯದ ಅಜ್ಜಯ್ಯನ ದೇವಸ್ಥಾನ ಹತ್ತಿರದ 80 ಎಕರೆಯಲ್ಲಿ ಸಮ್ಮೇಳನಕ್ಕೆ ಸ್ಥಳ ನಿಗದಿಪಡಿಸಲಾಗಿದೆ’ ಎಂದರು.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ