Breaking News
Home / ರಾಜಕೀಯ / ವಿದ್ಯಾರ್ಥಿಗಳಿಗೆ ಸಂವಹನ ಕಲೆ ಮುಖ್ಯ: ಕತ್ತಿ

ವಿದ್ಯಾರ್ಥಿಗಳಿಗೆ ಸಂವಹನ ಕಲೆ ಮುಖ್ಯ: ಕತ್ತಿ

Spread the love

ಹುಕ್ಕೇರಿ: ಉತ್ತರ ಕರ್ನಾಟಕದ ವಿದ್ಯಾರ್ಥಿಗಳು ಜಾಣರಿದ್ದರೂ, ಆ ಜಾಣತನವನ್ನು ಬಿಂಬಿಸುವ ಸಂವಹನ ಕಲೆಯ ಕೊರತೆಯಿಂದ ಉದ್ಯೋಗಾವಕಾಶ ಕಳೆದುಕೊಳ್ಳುತ್ತಿದ್ದಾರೆಂದು ಮಾಜಿ ಸಂಸದರು ಹಾಗೂ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ರಮೇಶ ಕತ್ತಿ ಅಸಮಾಧಾನ ವ್ಯಕ್ತಪಡಿಸಿದರು.

 

ಅವರು ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ವಿವಿಧ ಸಂಘಗಳ ಕಾರ್ಯ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಕನ್ನಡದ ಜತೆ ಇಂಗ್ಲಿಷ್‌ ಕಲಿಯಬೇಕು. ಶಿಕ್ಷಣ ಪಡೆದು ಇನ್ನೊಬ್ಬರ ಕೈಯಲ್ಲಿ ನೌಕರಿ ಮಾಡುವ ಬದಲಿಗೆ ಉದ್ಯೋಗ ಪ್ರಾರಂಭಿಸಿ ಇತರರಿಗೆ ನೌಕರಿ ಕೊಟ್ಟು ಮಾಲೀಕರಾಗಲು ಪ್ರಯತ್ನಿಸಬೇಕೆಂದು ಎಂದು ಸಲಹೆ ನೀಡಿದರು.

ಬೆಲ್ಲದ ಬಾಗೇವಾಡಿ ಬ್ಯಾಂಕ್‌ ವತಿಯಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ 10 ಕಂಪ್ಯೂಟರ್‌ ಒದಗಿಸಲಾಗುವುದೆಂದು ಹೇಳಿದರು. ಈ ಇದೇ ಸಂದರ್ಭದಲ್ಲಿ ದಿ| ಉಮೇಶ್‌ ಕತ್ತಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ