Breaking News

ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ 44 ಜೀವರಕ್ಷಕ ಔಷಧಗಳ ಕೊರತೆ!

Spread the love

ಬೆಂಗಳೂರು: ರಾಜ್ಯದ ಸರ ಕಾರಿ ಆಸ್ಪತ್ರೆಗಳಲ್ಲಿ ಬರೊಬ್ಬರಿ 44 ಜೀವ ರಕ್ಷಕ ಔಷಧಗಳ ಕೊರತೆ ಉಂಟಾಗಿದೆ.
ಆರೋಗ್ಯ ಇಲಾಖೆ ಅಧೀನದ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮದ(ಕೆ.ಎಸ್‌.ಎಂ.ಎಸ್‌.ಸಿ.ಎಲ್) ನಿರ್ಲಕ್ಷ್ಯದಿಂದ 2020-21ನೇ ಸಾಲಿನ ಟೆಂಡರ್‌ಗಳ ಅಂತಿಮ ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಸಮಸ್ಯೆ ಉದ್ಭವಿಸಿದೆ.

 

ರಾಜ್ಯದಲ್ಲಿರುವ ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳಲ್ಲಿ ಗಂಭೀರ ಕಾಯಿಲೆ ನಿವಾರಣೆಗಿರುವ ಜೀವ ರಕ್ಷಕ ಔಷಧಗಳ ಕೊರತೆ ಪ್ರತಿ ವರ್ಷವೂ ಮರುಕಳಿಸುತ್ತಲೇ ಇದೆ. ಇದೀಗ 44 ಜೀವ ರಕ್ಷಕ ಔಷಧಿಗಳ ಅಭಾವದಿಂದ ರೋಗಿಗಳು ಪರದಾಡುವಂತಾಗಿದೆ.

2020-21ನೇ ಸಾಲಿನ ರಾಜ್ಯದ ಆರೋಗ್ಯ ಕೇಂದ್ರಗಳ ಬೇಡಿಕೆಗೆ ಅನುಗುಣವಾಗಿ 445 ಔಷಧಗಳ ಪೈಕಿ 210 ಔಷಧಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಅರ್ಹ ಬಿಡ್‌ದಾರರ ಕೈಗೆ ಖರೀದಿ ಆದೇಶ ಪತ್ರವೂ ಸಿಕ್ಕಿದೆ. ಉಳಿದ 235 ಔಷಧಗಳಲ್ಲಿ 98 ಔಷಧಗಳ ಖರೀದಿ ಮತ್ತು ಸರಬರಾಜಿಗೆ 3ನೇ ಬಾರಿ ಆಹ್ವಾನಿಸಿದ ಟೆಂಡರ್‌ ಪ್ರಕ್ರಿಯೆ ಇನ್ನೂ ಚಾಲ್ತಿಯಲ್ಲಿದೆ.

83 ಔಷಧಗಳಿಗೆ ಆಹ್ವಾನಿಸಿದ ಟೆಂಡರ್‌ ಅಂಗೀಕಾರ ಪ್ರಾಧಿಕಾರದ ಹಂತದಲ್ಲಿದೆ. ಆದರೆ, ಇನ್ನುಳಿದ ಅತ್ಯವಶ್ಯಕ 44 ಜೀವ ರಕ್ಷಕ ಔಷಧಗಳ ಟೆಂಡರ್‌ ಪ್ರಕ್ರಿಯೆ ಮುಕ್ತಾಯ ಹಂತಕ್ಕೆ ಬಂದರೂ, ಸರಬರಾಜಿಗೆ 60 ದಿನ ಬೇಕಾಗುವ ಹಿನ್ನೆಲೆಯಲ್ಲಿ ಸ್ಥಳೀಯವಾಗಿ ಖರೀದಿಸಲು ಆರೋಗ್ಯ ಕೇಂದ್ರಗಳಿಗೆ ಅನುಮತಿ ನೀಡುವಂತೆ ಕೆಎಸ್‌ಎಂಎಸ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದರ ಬೆನ್ನಲ್ಲೇ ತಾತ್ಕಾಲಿಕವಾಗಿ ಎಬಿ-ಎಆರ್‌ಕೆ ಹಾಗೂ ಎನ್‌ಎಫ್ಡಿಎಸ್‌ ಅನುದಾನದಲ್ಲಿ ಈ ಔಷಧ ಖರೀದಿಸುವಂತೆ ಇಲಾಖೆಯ ಆಯುಕ್ತ ಡಿ. ರಂದೀಪ್‌ ಸುತ್ತೋಲೆ ಹೊರಡಿಸಿದ್ದಾರೆ.


Spread the love

About Laxminews 24x7

Check Also

ಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿ ನಿ ನೇಣು ಬಿಗಿದುಕೊಂಡ ಘಟನೆ ನಡೆದಿದೆ.

Spread the loveಕಂಗ್ರಾಗಳಗಲ್ಲಿಯ ಪಿಜಿಯಲ್ಲಿ ವಿದ್ಯಾರ್ಥಿಯೋರ್ವವಳು ಆತ್ಮಹ ಮಾಡಿಕೊಂಡ ಘಟನೆ ಶುಕ್ರವಾರ ನಡೆದಿದೆ. ಸವದತ್ತಿ ಮೂಲದ ಪವಿತ್ರಾ ಎಂಬ ವಿಧ್ಯಾರ್ಥಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ