ಬೆಳಗಾವಿ : ಮೈಸೂರಿಗೆ ಹೇಗೆ ದಸರಾ ಪ್ರಾಮುಖ್ಯವೋ ಹಾಗೆ ರಾಜ್ಯೋತ್ಸವ ಬೆಳಗಾವಿಗೆ ಪ್ರಾಮುಖ್ಯ.
ಇಲ್ಲಿ ನಡೆಯುವ ರಾಜ್ಯೋತ್ಸವ ಸಂಭ್ರಮ ಕಣ್ತುಂಬಿಕೊಳ್ಳೋದೇ ಸಂಭ್ರಮ.ಕೊರೋನಾ ಹಾಗೂ ಪುನೀತ್ ರಾಜ್‌ಕುಮಾರ್ ಅಕಾಲಿಕ ನಿಧನದಿಂದಾಗಿ ಎರಡು ವರ್ಷಗಳಿಂದ ಕಳೆಗುಂದಿದ್ದ ರಾಜ್ಯೋತ್ಸವ ಈ ಬಾರಿ ಅದ್ದೂರಿಯಾಗಿ ನೆರವೇರಲಿದೆ. ಈ ಮಧ್ಯೆಯೇ ರಾಜ್ಯೋತ್ಸವದಂದೇ ಕರಾಳ ದಿನಾಚರಣೆಗೆ MES ಮುಂದಾಗಿದೆ.ಇದು ಕನ್ನಡಿಗರನ್ನು ಕೆರಳಿಸಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕರಾಳ ದಿನಕ್ಕೆ ಕರೆ ನೀಡುತ್ತಿರುವ ಎಂಇಎಸ್ ಪುಂಡರಿಗೆ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವಸೇನೆ ಬೆಂಬಲಕ್ಕೆ ನಿಂತಿದೆ. ಶತಾಯ ಗತಾಯ ರಾಜ್ಯೋತ್ಸವದಂದೇ ಕರಾಳ ದಿನಾಚರಣೆ ಮಾಡೇ ಮಾಡ್ತೀವಿ ಅಂತಾ MES ತಿಳಿಸಿದೆ.
MESನ ಈ ಗೊಡ್ಡು ಬೆದರಿಕೆಗೆ ಬಗ್ಗದ ಬೆಳಗಾವಿ ಜಿಲ್ಲಾಡಳಿತ ಅದ್ದೂರಿಯಾಗಿ ರಾಜ್ಯೋತ್ಸವ ಆಚರಿಸಲು ಸಕಲ ಸಿದ್ದತೆ ಮಾಡಿಕೊಂಡಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭದ್ರತೆ ಮಾಡಿಕೊಂಡಿದೆ.
Laxmi News 24×7