Breaking News

ಮನೆಗೆ ನುಗ್ಗಿ ₹ 23.60 ಲಕ್ಷ ದರೋಡೆ

Spread the love

ರಾಮದುರ್ಗ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಬನ್ನೂರು ತಾಂಡಾದಲ್ಲಿ ಮಂಗಳವಾರ ನಸುಕಿನಲ್ಲಿ ಮನೆಗೆ ನುಗ್ಗಿದ ಎಂಟು ಮಂದಿಯ ಗುಂಪು, ಕುಟುಂಬದ ಮೇಲೆ ಹಲ್ಲೆ ಮಾಡಿ, ನಗ- ನಾಣ್ಯ ದರೋಡೆ ಮಾಡಿದೆ.

ಬನ್ನೂರು ಗ್ರಾಮ ಪಂಚಾಯಿತಿ ಸದಸ್ಯ ಚಂದ್ರು ಶಂಕರ ರಜಪೂತ ಅವರ ಮನೆಗೆ ನುಗ್ಗಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ದಾಳಿ ಮಾಡಿದ್ದಾರೆ.

ಟ್ರಜರಿಯಲ್ಲಿದ್ದ ಚಿನ್ನಾಭರಣ, ಹಣ ಸೇರಿ ₹ 23.60 ಲಕ್ಷದ ವಸ್ತುಗಳನ್ನು ಕದ್ದಿದ್ದಾರೆ ಎಂದು ಮನೆಯವರು ದೂರು ನೀಡಿದ್ದಾರೆ.

ಗ್ರಾಮದ ಹೊರವಲಯದ ತಾಂಡಾದಲ್ಲಿರುವ ಚಂದ್ರು ಅವರ ಮನೆಗೆ ನಸುಕಿನ 3ಕ್ಕೆ ಬಂದ ಅಪರಿಚಿತರು ಕದ ತಟ್ಟಿದರು. ಅಪಾಯ ಅರಿಯದೇ ಚಂದ್ರು ಅವರ ಪತ್ನಿ ಬಾಗಿಲು ತೆರೆದರು. ತಕ್ಷಣ ಅವರನ್ನು ಹೊಡೆದು ಬೀಳಿಸಿದ ದುಷ್ಕರ್ಮಿಗಳು ಬಾಯಿಗೆ ಬಟ್ಟೆ ಕಟ್ಟಿದರು. ಸದ್ದು ಕೇಳಿ ಎದ್ದು ಬಂದ ಚಂದ್ರು ಅವರಿಗೂ ಚೂರಿ ತೋರಿಸಿ ಹೆದರಿಸಿದರು. ಅವರ ಹಿಂದೆ ಬಂದ ಸೊಸೆಯ ಬಾಯಿ, ಕೈ, ಕಾಲು ಕಟ್ಟಿದರು.

ಟ್ರಜರಿ ಕೀಲಿಕೈ ನೀಡುವಂತೆ ಮನೆಯವರ ಮೇಲೆ ಹಲ್ಲೆ ಮಾಡಿದರು. ಅವರು ನೀಡದಿದ್ದಾಗ ಟ್ರಜರಿ ಬಾಗಿಲು ಮುರಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರ ತಂಡ ಸ್ಥಳ ಪರಿಶೀಲನೆ ನಡೆಸಿತು. ಹೆಚ್ಚುವರಿ ಎಸ್ಪಿ ಮಹಾಲಿಂಗ ನಂದಗಾವಿ, ಸಿಪಿಐ ಈರಣ್ಣ ಪಟ್ಟಣಶೆಟ್ಟಿ, ಪಿಎಸ್‌ಐ ಸಿದ್ದರಾಮಪ್ಪ ಉನ್ನದ ಪರಿಶೀಲನೆ ನಡೆಸಿದರು. ಕಟಕೋಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 


Spread the love

About Laxminews 24x7

Check Also

ಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ

Spread the loveಘೋಡಗೇರಿ ಜಿ.ಪಂ ವ್ಯಾಪ್ತಿಯ ಹುಕ್ಕೇರಿ ವಿದ್ಯುತ್ ಸಹಕಾರ ಸಂಘದ ಪ್ರಚಾರ ಸಭೆ ವಿರೋಧಿಗಳ ಸುಳ್ಳು ವದಂತಿಗಳಿಗೆ ಕಿವಿಗೋಡಬೇಡಿ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ