ಮಳೆಯ ನಡುವೆ ಹಾವುಗಳ ಕಾಟಕ್ಕೆ ಜನತೆ ಬೆಚ್ಚಿಬಿದ್ದಿದ್ದಾರೆ. ಜಮೀನು, ತೋಟಗಳನ್ನ ಬಿಟ್ಟು ಮನೆಗಳ ನುಗ್ತಿರೋ ಹಾವಿನ ಭಯದಿಂದ ಮನೆಗೆ ಬೆಂಕಿ ಇಟ್ಟು, ಜೆಸಿಬಿ ಬಳಸಿ ಮನೆಗಳನ್ನೆ ಧ್ವಂಸ ಮಾಡ್ತಿರುವ ವಿಜಯಪುರ ಜಿಲ್ಲೆಯ ಚಡಚಣ ಹಾಗೂ ಇಂಡಿ ತಾಲೂಕಿನಲ್ಲಿ ನಡೆದಿದೆ. ಜನರಿಗೆ ಹಾವುಗಳದ್ದೆ ಭಯ, ಉರಗ ಭಯಕ್ಕೆ ತೋಟದ ವಸತಿಗಳ ರೈತರು ಕಂಗಾಲಾಗಿದ್ದಾರೆ.
ನಿರಂತರ ಮಳೆಯಿಂದ ಮನೆಗಳಿಗೆ ನುಗ್ತಿವೆ. ಮನೆ ಹೊಕ್ಕ ಹಾವಿಗೆ ಹೆದರಿ ಮನೆಗಳಿಗೆ ಬೆಂಕಿ ಇಡ್ತಿದ್ದಾರೆ. ಸಾವಳಸಂಗ ಹಾಗೂ ಹಾಲಳ್ಳಿ ಗ್ರಾಮಗಳಲ್ಲಿ ಮನೆಗಳಿಗೆ ಬೆಂಕಿ ಇಟ್ಟಿದ್ದು ಇಂಚಗೇರಿ ಗ್ರಾಮದಲ್ಲಿ ಹಾವು ಹೊಕ್ಕ ಮನೆಯನ್ನೆ ಕೆಡವುತ್ತಿದ್ದಾರೆ. ಹಾವು ಕಚ್ಚಿ ಬಾಲಕಿ ಸಾವು ಹಿನ್ನೆಲೆ ಇಂಚಗೇರಿ ಗ್ರಾಮದಲ್ಲಿ ಮನೆಯೇ ಧ್ವಂಸ ಮಾಡಿರುವ ಘಟನೆಯೂ ನಡೆದಿದೆ. ಚಡಚಣ ತಾಲೂಕಿನ ಹಾಲಳ್ಳಿ ಗ್ರಾಮದ ಇಟ್ನು ಇಂಗಳೆ ಮನೆಗೆ ಬೆಂಕಿ ಹಚ್ಚಲಾಗಿದೆ.
ಮನೆಗೆ ನಾಗರಹಾವು ಹೊಕ್ಕಿದ್ದರಿಂದ ಹೆದರಿ ಮನೆಗಳಿಗೆ ಬೆಂಕಿ ಇಡಲಾಗಿದೆ. ಮನೆಗೆ ಇಟ್ಟ ನಾಗರ ಹಾವುಗಳು ಬೆಂಕಿಯಲ್ಲಿ ಸುಟ್ಟು ಕರಕಲಾಗಿವೆ. ಇತ್ತ ಉರಗ ಪ್ರೇಮಿಗಳಿಂದ ನಿತ್ಯ ಹಾವುಗಳ ರಕ್ಷಣೆ ನಡೆಯುತ್ತಿದೆ. ಮನೆಗೆ ಹೊಕ್ಕ ಹಾವುಗಳನ್ನ ಹಿಡಿಯುವ ಕಾರ್ಯ ಮಾಡ್ತಿರೋ ಉರಗ ಪ್ರೇಮಿ ಸಿದ್ದು ಪೂಜಾರಿಗೆ ಶ್ಲಾಘನೆ ವ್ಯಕ್ತವಾಗಿದೆ. ಚಡಚಣ, ಇಂಡಿ ತಾಲೂಕಿನಾದ್ಯಂತ ಹಾವುಗಳ ಕಾಟಕ್ಕೆ ಬೆಚ್ಚಿ ಬಿದ್ದಿದ್ದಾರೆ. ಎಷ್ಟೇ ಹಾವು ಹಿಡಿದು ರಕ್ಷಿಸಿ ಬಿಟ್ಟರು ಮತ್ತೆ ಮತ್ತೆ ಕಾಣಿಸಿಕೊಳ್ತಿವೆ. ಸರ್ಪಗಳ ಭಯದಿಂದ ಆತಂಕದಲ್ಲೆ ಕಾಲ ತಳ್ತಿದ್ದಾರೆ. ತಾಲೂಕಾಡಳಿತ ನೆರವಿಗೆ ಬರುವಂತೆ ಆಗ್ರಹಿಸಿದ್ದಾರೆ.