Breaking News

ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರು ಘೋಷಿಸಿ: ಶ್ರೀನಿವಾಸ್ ತಾಳೂಕರ್

Spread the love

ತಕ್ಷಣವೇ ಸಚಿವ ಸಂಪುಟ ಸಭೆ ಕರೆದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರನ್ನು ಇಡುವ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹಿರಿಯ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಆಗ್ರಹಿಸಿದ್ದಾರೆ.

ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚನ್ನಮ್ಮಾಜಿ ಹೆಸರು ಇಡಬೇಕು ಎಂದು 2007ರಿಂದ ಸುಮಾರು 17 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಆದರೆ ರಾಜ್ಯ ಸರ್ಕಾರ ಯಾಕೋ ಹಿಂದೇಟು ಹಾಕುತ್ತಿದೆ. ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರ ಹೆಸರನ್ನು ಇಡಬೇಕು ಎಂದು ಕ್ಯಾಬಿನೇಟ್ ಸಭೆ ಕರೆದು ನಿರ್ಣಯ ಕೈಗೊಂಡರು. ಒಬ್ಬ ಮಾಜಿ ಮುಖ್ಯಮಂತ್ರಿ ಹೆಸರು ಇಡಲು ವೇಗವಾಗಿ ನಿರ್ಣಯ ಕೈಗೊಂಡರು. ವಿಜಯಪುರ ವಿಮಾನ ನಿಲ್ದಾಣಕ್ಕೆ ಶ್ರೀ ಬಸವೇಶ್ವರರ ಹೆಸರನ್ನು ನಾಮಕರಣ ಮಾಡಿದ್ದಾರೆ. ಇದಕ್ಕೆ ಕನ್ನಡಪರ ಸಂಘಟನೆಗಳು ಸ್ವಾಗತಿಸುತ್ತವೆ. 17 ವರ್ಷಗಳಿಂದ ನಿರಂತರವಾಗಿ ನಾವು ಹೋರಾಟ ಮಾಡುತ್ತಿರುವಾಗ ಕಿತ್ತೂರು ಉತ್ಸವ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರು ಘೋಷಿಸಬೇಕಿತ್ತು. ಆದರೆ ಯಾಕೋ ಸರ್ಕಾರ ಹಿಂದೇಟು ಹಾಕುತ್ತಿದೆ. ಯಾಕೆ ಹಿಂದೇಟು ಹಾಕುತ್ತಿದ್ದಿರಿ ಎಂಬ ಬಗ್ಗೆ ಮುಖ್ಯಮಂತ್ರಿಗಳೇ ಸ್ಪಷ್ಟನೆ ನೀಡಬೇಕು. ನಾಳೆ ಕಿತ್ತೂರು ಉತ್ಸವದಲ್ಲಿ ಮುಖ್ಯಮಂತ್ರಿಗಳು ಏನು ಮಾತನಾಡುತ್ತಾರೆ ಎಂದು ನೋಡಬೇಕಿದೆ ಎಂದರು.


Spread the love

About Laxminews 24x7

Check Also

ಅಪ್ರಾಪ್ತೆ ತಂಗಿಗೆ ಮಗು ಕರುಣಿಸಿ ಜೈಲುಪಾಲಾದ ಭೂಪ!

Spread the loveಕೊಪ್ಪಳ, ನವೆಂಬರ್​ 06: ನಿನ್ನನ್ನು ಮದುವೆ ಆಗುತ್ತೇನೆ ಎಂದು ಪುಸಲಾಯಿಸಿ ಸ್ವಂತ ಅಣ್ಣನೇ ಅಪ್ರಾಪ್ತೆ ತಂಗಿ ಜೊತೆ ದೈಹಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ