Breaking News

‘ಗೊಂಬೆ ಹೇಳುತೈತೆ’ ಹಾಡು ಕೇಳುತ್ತಾ ದುಃಖ ಉಮ್ಮಳಿಸಿ ಕೈ ಮುಗಿದು ಅಳುತ್ತಾ ಹೊರಟ ಅಶ್ವಿನಿ ಪುನೀತ್ ರಾಜ್‌ಕುಮಾರ್!

Spread the love

ರಮನೆ ಮೈದಾನದಲ್ಲಿ ನಡೆದ ‘ಪುನೀತ ಪರ್ವ’ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕಾರ್ಯಕ್ರಮದ ಕೊನೆಗೆ ಡಾ. ರಾಜ್‌ಕುಮಾರ್ ಕುಟುಂಬ ಸದಸ್ಯರೆಲ್ಲಾ ಸೇರಿ ‘ಗೊಂಬೆ ಹೇಳುತೈತೆ’ ಹಾಡು ಹಾಡಿದರು. ಗಾಯಕ ವಿಜಯ ಪ್ರಕಾಶ್ ಜೊತೆ ಹಾಡು ಹಾಡುತ್ತಾ ಎಲ್ಲರೂ ಭಾವುಕರಾದರು.

ಹಾಡಿನುದ್ದಕ್ಕೂ ಭಾವುಕರಾಗಿ ನಿಂತಿದ್ದ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೊನೆಗೆ ದುಃಖ ತಾಳಲಾರದೇ ಎಲ್ಲರಿಗೂ ಕೈ ಮುಗಿದು ಅಳುತ್ತಾ ವೇದಿಕೆಯಿಂದ ಹೊರಟುಬಿಟ್ಟರು.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಕಾರ್ಯಕ್ರಮದಲ್ಲಿ ಮಾತನಾಡುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಅಪ್ಪು ಅಗಲಿಕೆಯ ದಿನದಿಂದಲೂ ಅಶ್ವಿನಿ ವೇದಿಕೆಗಳಲ್ಲಿ ಮಾತನಾಡಿರಲಿಲ್ಲ. ಒಂದೊಮ್ಮೆ ಮಾತನಾಡಿದರು ಧನ್ಯವಾದ ತಿಳಿಸಿ ಸುಮ್ಮನಾಗಿಬಿಡುತ್ತಿದ್ದರು. ಆದರೆ ತಾವೇ ಮುಂದೆ ನಿಂತು ‘ಪುನೀತ ಪರ್ವ’ ಕಾರ್ಯಕ್ರಮದ ತಯಾರಿಯನ್ನು ನೋಡಿಕೊಂಡಿದ್ದರು. ಬೆಳಗ್ಗೆ ಅರಮನೆ ಮೈದಾನದಲ್ಲಿ ಸಿದ್ಧತೆಗಳನ್ನೆಲ್ಲಾ ಪರಿಶೀಲಿಸಿದ ನಂತರ ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪಕ್ಕದಲ್ಲಿದ್ದ ಮಾವ, ಅತ್ತೆ ಸಮಾಧಿಗೂ ಪೂಜೆ ಸಲ್ಲಿಸಿ ಬಂದಿದ್ದರು. ಕಾರ್ಯಕ್ರಮದುದ್ದಕ್ಕೂ ಲವಲವಿಕೆಯಿಂದ ಇದ್ದರು. ‘ಗಂಧದಗುಡಿ’ ಚಿತ್ರಕ್ಕಾಗಿ ಕೆಲಸ ಮಾಡಿದ್ದ ತಂಡದ ಎಲ್ಲರನ್ನು ವೇದಿಕೆಗೆ ಸ್ವಾಗತಿಸಿ ಧನ್ಯವಾದ ತಿಳಿಸಿದ್ದರು. ಆದರೆ ಕೊನೆಗೆ ‘ಗೊಂಬೆ ಹೇಳುತೈತೆ’ ಹಾಡು ಕೇಳುತ್ತಾ ಕಣ್ಣೀರಾದರು


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ