ಮೈಸೂರು: ‘ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್ ಗಾಂಧಿಗೆ ಕಳುಹಿಸುತ್ತೀರೇಕೆ?
ನಿಮಗೆ ಧಮ್ ಇದ್ದರೆ ಸಚಿವ ಸಂಪುಟದಲ್ಲಿಟ್ಟು ತನಿಖೆ ಮಾಡಿಸಿ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸವಾಲು ಹಾಕಿದರು.
ಮುಖ್ಯಮಂತ್ರಿಯು ಬೀದರ್ ಜಿಲ್ಲೆಯ ಔರಾದ್‌ನಲ್ಲಿ ನಡೆದ ಬಿಜೆಪಿಯ ಜನಸಂಕಲ್ಪ ಯಾತ್ರೆಯಲ್ಲಿ ನೀಡಿದ್ದ ಹೇಳಿಕೆಗೆ ಇಲ್ಲಿ ತಿರುಗೇಟು ಕೊಟ್ಟ ಅವರು, ‘ದಾಖಲೆಗಳನ್ನು ರಾಹುಲ್‌ಗೆ ಕಳುಹಿಸಿ ಏನು ಮಾಡುತ್ತೀರಿ? ನೀನು ಅತ್ತಂಗೆ ಮಾಡು, ನಾನು ಹೊಡೆದಂತೆ ಮಾಡುತ್ತೇನೆ ಎನ್ನುವ ಥರದ ಮಾತುಗಳನ್ನು ಬಿಡಿ’ ಎಂದು ಟೀಕಿಸಿದರು.
Laxmi News 24×7