Breaking News

ಬಾಗಲಕೋಟೆ : ಪ್ರೇಮಿಗಳನ್ನು ಒಂದು ಮಾಡುವುದಾಗಿ ನಂಬಿಸಿ ಕರೆದೊಯ್ದು ಮರ್ಯಾದಾ ಹತ್ಯೆ

Spread the love

ಬಾಗಲಕೋಟೆ: ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿಸಿದ ಘಟನೆ ತಾಲೂಕಿನ ಬೇವಿನಮಟ್ಟಿ ಗ್ರಾಮದಲ್ಲಿ ನಡೆದಿದ್ದು, ಘಟನಾ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಕೊಲೆಯಾದ ಯುವ ಜೋಡಿಗಳನ್ನು ವಿಶ್ವನಾಥ ನೆಲಗಿ( 21) ಹಾಗೂ 17 ವರ್ಷದ ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದೆ.

ಈ ಘಟನೆಗೆ ಅಪ್ರಾಪ್ತ ಬಾಲಕಿಯ ತಂದೆ ಬೇವಿನಮಟ್ಟಿಯ ಪರಸಪ್ಪ ಕರಡಿ ಈ ಮರ್ಯಾದಿ ಹತ್ಯಯ ಮೂಲ ರೂವಾರಿ ಎನ್ನವುದು ಅಚ್ಚರಿಗೆ ಕಾರಣವಾಗಿದೆ. ಘಟನೆಯಲ್ಲಿ ಭಾಗಿಯಾದ ಆರೋಪಿಗಳಾದ ಅಪ್ರಾಪ್ತ ಬಾಲಕಿ ತಂದೆ ಪರಸಪ್ಪ ಕರಡಿ, ಸಂಬಂಧಿಕರಾದ ರವಿ ದುಂಡಪ್ಪ ಹುಲ್ಲನ್ನವರ, ಹನುಮಂತ ಸಿದ್ದಪ್ಪ ಮಲ್ಲಾಡದ, ಬೀರಪ್ಪ ಯಲ್ಲಪ್ಪ ದಳವಾಯಿ ಬಂಧಿತರು.

ಅನ್ಯ ಜಾತಿಯುವಕನ ಪ್ರೀತಿಯಿಂದ ದೂರ ಉಳಿಯುವಂತೆ ಕುಟುಂಬಸ್ಥರು ಬಾಲಕಿಗೆ ಅನೇಕ ಸಾರಿ ಬುದ್ದಿವಾದ ಹೇಳಿದ್ದರು‌. ಅಲ್ಲದೆ ಪ್ರೇಮಿ ವಿಶ್ವನಾಥ ಅಶೋಕ ನೆಲಗಿಗೂ ಎಚ್ಚರಿಕೆ ಕೊಟ್ಟು ಒಂದು ಸಾರಿ ಹಲ್ಲೆ ಮಾಡಿದ್ದರು. ಈ ವಿಷಯ ಗೊತ್ತಾಗಿ ವಿಶ್ವನಾಥ ಅವನ್ನನು ಕಾಸರಗೋಡಿಗೆ ಕೆಲಸಕ್ಕಾಗಿ ಕಳುಹಿಸಿದ್ದರು. ಆದರು ಸಹ ಇಬ್ಬರು ಪ್ರೀತಿ ಮೊಬೈಲ್ ಮೂಲಕ ಮುಂದುವರೆದಿತ್ತು. ಇದು ಕರಡಿ ಕುಟುಂಬಕ್ಕೆ ತೀವ್ರ ಬೇಸರ ಹಾಗೂ ಆಕ್ರೋಶಕ್ಕೆ ಕಾರಣವಾಗಿತ್ತು.

ಅನ್ಯ ಜಾತಿಯ ಹುಡುಗನ ಜೊತೆ ಪ್ರೀತಿಯಿಂದ ಹೊರಬಾರದ ಹಿನ್ನೆಲೆಯಲ್ಲಿ ಹುಡುಗಿಯ ಕುಟುಂಬದವರು ಹಾಗೂ ಸಂಬಂಧಿಕರು ಸೇರಿ ಪ್ರೇಮಿಗಳಿಬ್ಬರನ್ನು ಕೊಲೆ ಮಾಡಿ
ನದಿಗೆ ಎಸೆದಿದ್ದಾರೆ. ಇದು ವರೆಗೆ ಶವಗಳು ಪತ್ತೆಯಾಗಿಲ್ಲ.

ಪ್ರೀತಿಯ ಬಲೆಯಿಂದ ಮಗಳು ಹೊರಬರಲ್ಲ ಎಂದು ಗೊತ್ತಾಗಿ, ಕೊಲೆ ಮಾಡುವ ಉದ್ದೇಶದಿಂದಲೇ ಪ್ರೇಮಿಯ ಜೊತೆಗೆ ಮದುವೆ ಮಾಡುವುದಾಗಿ ನಂಬಿಸಿ, ಅಪ್ರಾಪ್ತೆಯ ಮೂಲಕ ಯುವಕನನ್ನು ಕರೆಯಿಸಿ, ಎರಡು ಪ್ರತ್ಯೇಕ ವಾಹನದಲ್ಲಿ ಕರೆದುಕೊಂಡು ದಾರಿ ಮಧ್ಯ ವಾಹನದಲ್ಲಿ ಇಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ.

 

ಘಟನೆ ನಡೆದಿದ್ದು ಹೇಗೆ..? :
ಬೇವಿನಮಟ್ಟಿ ಗ್ರಾಮದ ಒಂದು ಜಾತಿಯ ಅಪ್ರಾಪ್ತ ಹುಡುಗಿ ಅದೇ ಗ್ರಾಮದ ವಿಶ್ವನಾಥ ನೆಲಗಿ(24) ಯುವಕ ಕಳೆದ ಎರಡ್ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದಾರು. ಈ ವಿಷಯ ಬಾಲಕಿ ಕುಟುಂಬಸ್ಥರು ಒಪ್ಪಲಿಲ್ಲ. ಬುದ್ದಿಮಾತು ಹೇಳಿದ್ದರು ಬಾಲಕಿ ಕೇಳಿರಲಿಲ್ಲ. ಅಲ್ಲದೆ ವಿಶ್ವನಾಥ ಮೇಲೆ ಹಲ್ಲೆ ನಡೆಸಿದ್ದರಿಂದ ಅವರು ಕುಟುಂಬಸ್ಥರು ಅವನನ್ನು ಬೇರೆಡೆ ಕೆಲಸಕ್ಕೆ ಕಳುಹಿಸಿದ್ದರು.


Spread the love

About Laxminews 24x7

Check Also

ಮುಳುಗಿದ ಲೋಳಸೂರ ಸೇತುವೆ: ಡಿಸಿ ಮೊಹಮ್ಮದ್ ರೋಷನ್ ಪರಿಶೀಲನೆ

Spread the loveಬೆಳಗಾವಿ: ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳಿಂದ‌ ಮುಳುಗಡೆ ಆಗುವ ನಾಲ್ಕು ಸೇತುವೆಗಳನ್ನು ಹೊಸದಾಗಿ ನಿರ್ಮಿಸುವ ಯೋಜನೆ ಇದೆ. ಇದಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ