Breaking News
Home / ರಾಜಕೀಯ / ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು; ಸಾಂಕೇತಿಕ ಧರಣಿ 21ರಿಂದ

ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು; ಸಾಂಕೇತಿಕ ಧರಣಿ 21ರಿಂದ

Spread the love

ಮೀಸಲಾತಿಗೆ ಒತ್ತಾಯ; ಸಾಂಕೇತಿಕ ಧರಣಿ 21ರಿಂದ

ಮೂಡಲಗಿ: ಉಪ್ಪಾರ ಸಮಾಜವನ್ನು ಪರಿಶಿಷ್ಟ ಜಾತಿ, ಪಂಗಡಕ್ಕೆ ಸೇರಿಸಬೇಕು ಎಂದು ಒತ್ತಾಯಿಸಿ ಮೂಡಲಗಿ ತಾಲ್ಲೂಕು ವ್ಯಾಪ್ತಿಯ 10 ಸಾವಿರಕ್ಕೂ ಅಧಿಕ ಸಂಖ್ಯೆಯ ಉಪ್ಪಾರ ಸಮಾಜ ಜನರಿಂದ ಅ. 21ರಂದು ಕಲ್ಮೇಶ್ವರ ವೃತ್ತದಲ್ಲಿ ಪ್ರತಿಭಟನೆ ಮಾಡಿ ತಹಶೀಲ್ದಾರ್‌ ಮೂಲಕ ಸರ್ಕಾರಕ್ಕೆ ಮನವಿ ನೀಡಲಾಗುವುದು ಎಂದು ಉಪ್ಪಾರ ಸಮಾಜದ ಮುಖಂಡ ಬಿ.ಬಿ.

ಹಂದಿಗುಂದ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಈರಣ್ಣ ದೇವಸ್ಥಾನದಿಂದ ಪಾದಯಾತ್ರೆಯ ನಂತರ ಸಾಂಕೇತಿಕವಾಗಿ ಪ್ರತಿಭಟನೆ ಮಾಡಲಾಗುವುದು ಎಂದರು.

ಭಗೀರಥ ಉಪ್ಪಾರ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಬಸು ಹಂದಿಗುಂದ, ಮುಖಂಡ ಬಸವರಾಜ ಖಾನಪ್ಪನ್ನವರ ಮಾತನಾಡಿದರು.

ಮೂಡಲಗಿ ತಾಲ್ಲೂಕು ಉಪ್ಪಾರ ಸಮಾಜ ಅಧ್ಯಕ್ಷ ರಾಮಣ್ಣ ಹಂದಿಗುಂದ, ಸಮಾಜ ಮುಂಖಡರಾದ ಕುಶಾಲ ಗೋಡೆನ್ನವರ, ಶಿವಪ್ಪ ಮರ್ದಿ, ಸುಭಾಷ ಪೂಜೇರಿ, ಬಿ.ಎಸ್.ತಿಗಡಿ, ಲಕ್ಷ್ಮಣ ಬಂಡ್ರೋಳಿ, ಶಿವಪ್ಪ ಅಟಮಟ್ಟಿ, ಸಾಬಪ್ಪ ಬಂಡ್ರೋಳಿ, ಶಂಭುಲಿಂಗ ಮುಕ್ಕನ್ನವರ, ಬಾಳಪ್ಪ ಹುದ್ದಾರ, ಹಣಮಂತ ಕಂಕಣವಾಡಿ,ಪರಸಪ್ಪ ಉಪ್ಪಾರ ಹಾಗೂ ಉಪ್ಪಾರ ಸಮಾಜದ ಪ್ರಮುಖರು ಇದ್ದರು.


Spread the love

About Laxminews 24x7

Check Also

ಬಂಗಾರ ದರ ಮತ್ತೆ ಇಳಿಕೆ

Spread the love 26: ಬಂಗಾರ ದರ ನಿನ್ನೆಗೆ ಅಂದರೆ ಜೂನ್‌ 25ಕ್ಕೆ ಹೋಲಿಕೆ ಮಾಡಿದರೆ ಇಂದು (ಜೂನ್‌ 24) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ