ವಿಜಯಪುರದಲ್ಲೊಂದು ಬಸ್ ನಲ್ಲಿ ಶುರುವಾದ ಪ್ರೇಮ ಪ್ರಕರಣ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಜರುಗಿದೆ. ಯುವ ಪ್ರೇಮಿಗಳಿಬ್ಬರು ಪ್ರೀತಿಗಾಗಿ ಬಲಿಯಾಗಿದ್ದಾರೆ. ಪ್ರಿಯತಮನಿಗೋಸ್ಕರ ಪ್ರಿಯತಮೆ ವಿಷ ಕುಡಿದರೆ ಇತ್ತ ತನ್ನ ಮಗಳ ಸಾವಿಗೆ ಕಾರಣನಾದ ಎಂದು ಯುವತಿಯ ಪ್ರೇಮಿಯನ್ನು ತಂದೆ ಕೊಲೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆ ತಿಕೋಟ ತಾಲೂಕಿನ ಕಳ್ಳಕವಟಗಿಯಲ್ಲಿ ನಡೆದಿದೆ.
ಸೆಪ್ಟೆಂಬರ್ 22ರಂದು ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. ತಿಕೋಟ ತಾಲೂಕಿನ ಕಳ್ಳಕವಟಗಿಯ ಅಪ್ರಾಪ್ತ ಯುವತಿ ಹಾಗೂ ಘೊಣಸಗಿಯ ಮಲ್ಲು ಜಮಖಂಡಿ ಮದ್ಯೆ ಪ್ರೇಮಾಂಕುರವಾಗಿತ್ತು. ಕಳೆದ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮಲ್ಲು ಜಮಖಂಡಿ ಹಾಗೂ ಅಪ್ರಾಪ್ತೆ ಇಬ್ಬರೂ ಒಂದೇ ಬಸ್ ನಲ್ಲಿ ವಿಜಯಪುರದ ಕಾಲೇಜ್ ಗೆ ಬರುತ್ತಿದ್ದರು. ಅಕ್ಕಪಕ್ಕದ ಊರಿನವರಾದ ಇವರಿಗೆ ಬಸ್ ನಲ್ಲಿ ಪರಿಚಯವಾಗಿ ಫೋನ್ ನಲ್ಲಿ ಲವ್ ಆಗಿತ್ತು. ಆ ಬಳಿಕ ಎಲ್ಲೆಂದರಲ್ಲಿ ಸ್ವಚ್ಚಂದವಾಗಿ ವಿಹರಿಸಿದ್ದರು.
ಈ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿ ಗಲಾಟೆಯಾಗಿತ್ತು. ಅದಾದ ಬಳಿಕ ಇಬ್ಬರನ್ನೂ ಎರಡೂ ಮನೆಯವರು ಬೇರೆ ಬೇರೆ ಮಾಡಿದ್ದರು. ಆದ್ರೂ ಸಹ ಸೆಪ್ಟೆಂಬರ್ 22ರಾತ್ರಿ ಕರೆ ಮಾಡಿದ್ದ ಹುಡುಗಿ ಮಲ್ಲುನನ್ನು ತನ್ನ ಮನೆಗೆ ಕರೆಸಿಕೊಂಡಿದ್ದಳು. ಈ ವೇಳೆ ಇಬ್ಬರು ಏಕಾಂತದಲ್ಲಿದ್ದಾಗ ಹುಡುಗಿ ತಂದೆ ಗುರಪ್ಪನ ಕೈಗೆ ಸಿಕ್ಕಿಕೊಂಡಿದ್ರು.ಆಗ ಇಬ್ಬರಿಗೂ ಬುದ್ದಿ ಹೇಳಿದ್ದ ತಂದೆಯ ಮಾತು ಕೇಳದೆ ಆತುರದಲ್ಲಿ ವಿಷ ಕುಡಿದು ಅಪ್ರಾಪ್ತ ಮಗಳು ವಿಚ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು ನನ್ನ ಮಗಳ ಸಾವಿಗೆ ಕಾರಣವಾದ ಪ್ರೇಮಿ ಮಲ್ಲುವನ್ನು ಬಿಡಬಾರದು ಎಂದು ಕೈಕಾಲು ಕಟ್ಟಿ ಅದೇ ವಿಷವನ್ನು ಯುವಕನಿಗೆ ಕುಡಿಸಿ ಕೊಲೆ ಮಾಡಲಾಗಿತ್ತು. ನಂತ್ರದಲ್ಲಿ ಯುವಕ ಹಾಗೂ ಯುವತಿಯ ಇಬ್ಬರ ಶವವನ್ನು ಪ್ರತ್ಯೇಕವಾಗಿ ಚೀಲದಲ್ಲಿ ಹಾಕಿ ಕೃಷ್ಣಾ ನದಿಗೆ ಎಸೆಯಲಾಗಿತ್ತು. ಇದೀಗ ಯುವಕ ಮಲ್ಲುವಿನ ಮೃತದೇಹ ಪತ್ತೆಯಾದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆ ಬೀಳಗಿ ಠಾಣೆ ವ್ಯಾಪ್ತಿಯಲ್ಲಿ ಶವ ಸಿಕ್ಕಿರುವುದರಿಂದ ಬೀಳಗಿ ಪೊಲೀಸರಿಂದ ತನಿಖೆ ನಡೆಯುತ್ತಿದೆ. ಪ್ರಕರಣಕ್ಕೆ ಸಂಬಂದಿಸಿದಂತೆ ಹುಡುಗಿಯ ತಂದೆ ಗುರಪ್ಪ ಹಾಗೂ ಆತನ ಅಳಿಯ ಅಜೀತ್ ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಯುವತಿಯ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ.