ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು 1892ರ ಅಕ್ಟೋಬರ್ 16ರಿಂದ 27ರವರೆಗೆ ಬೆಳಗಾವಿಯಲ್ಲಿ ತಂಗಿದ್ದರು. ಆ ಸಂದರ್ಭದಲ್ಲಿ ಅಕ್ಟೋಬರ್ 16ರ ಭಾನುವಾರ ಸ್ವಾಮೀಜಿ ವಾಸಿಸುತ್ತಿದ್ದ ರಿಸಾಲ್ದಾರ್ ಗಲ್ಲಿಯಲ್ಲಿರುವ ಸ್ವಾಮಿ ವಿವೇಕಾನಂದ ಸ್ಮಾರಕದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ರಾಮಕೃಷ್ಣ ಮಿಷನ್ ಮನವಿ ಮಾಡಿದೆ.
ಈ ಕುರಿತಂತೆ ಬೆಳಗಾವಿಯಲ್ಲಿ ವೀಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ರಾಮಕೃಷ್ಣ ಮಿಶನ್ ಕಾರ್ಯದರ್ಶಿಗಳಾದ ಸ್ವಾಮಿ ಆತ್ಮ ಪ್ರಾಣಾನಂದ ಮಹಾಸ್ವಾಮಿಜಿರವರು, ವಿವೇಕಾನಂದ ಸ್ಮಾರಕದಲ್ಲಿ ಸ್ವಾಮೀಜಿಯವರು ಬೆಳಗಾವಿಯಲ್ಲಿ ತಂಗಿದ್ದ ಸಂದರ್ಭದಲ್ಲಿ ಬಳಸಿದ್ದ ಮಂಚ, ಕನ್ನಡಿ, ಲಾಠಿಯನ್ನೂ ಸಂರಕ್ಷಿಸಲಾಗಿದೆ. ಸ್ವಾಮೀಜಿಯವರ ಜೀವನಾಧಾರಿತ ಚಿತ್ರ ಪ್ರದರ್ಶನವನ್ನು ಸಹ ಭಕ್ತರು ಭೇಟಿಯ ವೇಳೆ ವೀಕ್ಷಿಸಬಹುದಾಗಿದೆ. ಸಂಜೆ 6ರಿಂದ 7ರವರೆಗೆ ಕನ್ನಡ ಭಜನೆ, ಮರಾಠಿ ಪ್ರವಚನ ಕಾರ್ಯಕ್ರಮವಿದ್ದು, ಸಂಜೆ 7ರಿಂದ 8:30ರವರೆಗೆ ರಾಷ್ಟ್ರೀಯ ಕಲಾವಿದ ಪುಣೆಯ ದಾಮೋದರ ರಾಮದಾಸಿ ಅವರಿಂದ ಯೋದ್ಧ ಸನ್ಯಾಸಿ ಸ್ವಾಮಿ ವಿವೇಕಾನಂದ ಪ್ರಸ್ತುತ ಪಡಿಸುವರು ಎಂದು ಮಾಹಿತಿ ನೀಡಿದರು.