Breaking News

ಕಬ್ಬಿನ ಬೆಲೆಯನ್ನು ಕನಿಷ್ಠ 4500ರೂ ನಿಗದಿ ಮಾಡಿ- ರೈತ ಮುಖಂಡ ರವಿ ಪೂಜಾರಿ ಆಗ್ರಹ..!!

Spread the love

ಸರಕಾರ ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲು ಆಯೋಜಿಸಿರುವ ಸಭೆಯನ್ನು ಬೆಳಗಾವಿಯ ಸುವರ್ಣಸೌಧದಲ್ಲಿಯೇ ನಡೆಸಬೇಕೆಂದು ಆಗ್ರಹಿಸಿ ಬೆಳಗಾವಿಯಲ್ಲಿ ನೇಗಿಲಯೋಗಿ ರೈತ ಸೇವಾ ಸಂಘದಿAದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಲಿಸಲಾಯಿತು.

ಉತ್ತರ ಕರ್ನಾಟಕ ಭಾಗದಲ್ಲಿ ಹೆಚ್ಚಿನ ಸಂಖ್ಯೆಯ ಕಬ್ಬಿನ ಕಾರ್ಖಾನೆಗಳಿವೆ. ಇಲ್ಲಿ ಕಬ್ಬು ಬೆಳೆಗಾರ ರೈತರ ಸಂಖ್ಯೆಯೂ ಹೆಚ್ಚಾಗಿದೆ. ಈ ಕುರಿತು ಕಬ್ಬು ಬೆಳೆಗಾರ ರೈತರ ಸಮಸ್ಯೆಗಳನ್ನು ಕುರಿತಂತೆ ಚರ್ಚೆಯನ್ನು ನಡೆಸಲು ಸಕ್ಕರೆ ಸಚಿವರು, ಆಯುಕ್ತರು, ಹಾಗೂ ಎಲ್ಲಾ ಕಾರ್ಖಾನೆಗಳ ಎಂಡಿಗಳು, ಹಾಗೂ ಎಲ್ಲಾ ಸಂಬAಧಿಸಿದ ಅಧಿಕಾರಿಳನ್ನು ಸೇರಿಸಿ ಕಬ್ಬಿನ ಬೆಲೆ ನಿರ್ಧಾರ ಕುರಿತಂತೆ ಒಂದು ಪೂರ್ವಭಾವಿ ಸಭೆಯನ್ನು ನಡೆಸಬೇಕು.

ಈ ಸಭೆಯನ್ನು ಬೆಳಗಾವಿಯ ಸುವರ್ಣ ಸೌಧದಲ್ಲಿಯೇ ನಡೆಸಬೇಕು. ಬೆಂಗಳೂರಿನಲ್ಲಿ ಸಭೆಯನ್ನು ಮಾಡುತ್ತಿರುವುದರಿಂದ ಕೆಲ ರೈತ ಮುಖಂಡರಿಗೆ ಹೋಗಿ ಬರುವುದು ಕಷ್ಟಸಾಧ್ಯವಾಗುತ್ತಿದೆ. ಹಾಗಾಗಿ ಈ ಸಭೆಯನ್ನು ಬೆಳಗಾವಿಯಲ್ಲಿಯೇ ನಡೆಸಬೇಕೆಂದು ಒತ್ತಾಯಿಸಿ ಇಂದು ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನೇಗಿಲಯೋಗಿ ರೈತ ಸೇವಾ ಸಂಘದ ರಾಜ್ಯಾಧ್ಯಕ್ಷರಾದ ರವಿ ಪಾಟಿಲ್‌ರವರು, ಸಕ್ಕರೆ ಸಚಿವರು ಹಾಗೂ ಕಮಿಶನರ್‌ರವರು ಬೆಂಗಳೂರಿನಲ್ಲಿ ರೈತರ ಸಭೆಯನ್ನು ಕರೆದಿದ್ದಾರೆ. ಬೆಳಗಾವಿಯಿಂದ ೧೧ ಜನರನ್ನು ಮಾತ್ರೆ ಹಾಕಿದ್ದಾರೆ. ಬೆಳಗಾವಿಯಲ್ಲಿ ಸಕ್ಕರೆ ಬೆಳೆಗಾರ ರೈತರೂ ಹಾಗೂ ಸಕ್ಕರೆ ಕಾರ್ಖಾನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬೆಳಗಾವಿಯ ಸುವರ್ಣ ಸೌಧ ಖಾಲಿ ಇದೆ.

ಹಾಗಾಗಿ ಬೆಳಗಾವಿಯಲ್ಲಿಯೇ ಈ ಸಭೆಯನ್ನು ಮಾಡಿ ಕಬ್ಬಿನ ಬೆಲೆಯನ್ನು ನಿಗದಿ ಮಾಡಬೇಕು. ಇಲ್ಲವಾದರೆ ಈ ಹೋರಾಟ ಮಾತ್ರ ನಿರಂತರವಾಗಿ ಮುಂದುವರೆಯುತ್ತದೆ. ಕಾರ್ಖಾನೆಗಳಿಗೆ ಕಬ್ಬಿನಿಂದ ವಿವಿಧ ಲಾಭಗಳಿವೆ. ಮತ್ತು ತೂಕದಲ್ಲಿ ಕೂಡ ಕಾರ್ಖಾನೆಗಳು ರೈತರಿಗೆ ಮೋಸ ಮಾಡುತ್ತವೆ. ಹಾಗಾಗಿ ಸರಕಾರ ಕಬ್ಬಿನ ಬೆಲೆಯನ್ನು ಕನಿಷ್ಠ ೪೫೦೦ರೂವನ್ನು ನಿಗದಿ ಮಾಡುವ ಕೆಲಸವಾಗಬೇಕೆಂದು ಆಗ್ರಹಿಸಿದರು.


Spread the love

About Laxminews 24x7

Check Also

ಶಾಸಕ ಕೆ.ಸಿ.ವೀರೇಂದ್ರ ಮತ್ತೆ 6 ದಿನ ಇ.ಡಿ ಕಸ್ಟಡಿಗೆ

Spread the love ಬೆಂಗಳೂರು: ಚಿತ್ರದುರ್ಗದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಐದು ದಿನಗಳ ಪೊಲೀಸ್ ಕಸ್ಟಡಿ ಅಂತ್ಯವಾದ ಹಿನ್ನೆಲೆಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ