ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿನ ಕ್ರೀಡಾ ವಿಭಾಗ ಹಾಗೂ ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ 36ನೇ ‘ಮಿಸ್ಟರ್ ಲಿಂಗರಾಜ’ ಸ್ಪರ್ಧೆ ಗಮನ ಸೆಳೆಯಿತು.
ಸ್ಪರ್ಧೆಯಲ್ಲಿ ಬಿ.ಎ ಪ್ರಥಮ ವರ್ಷದ ನಿಂಗಾನಂದ ಹಿರೇಮಠ ‘ಮಿಸ್ಟರ್ ಲಿಂಗರಾಜ’ ಪ್ರಶಸ್ತಿ ಪಡೆದುಕೊಂಡರು.
ಪ್ರವೀಣ ಕುದರಿಮುತಿ ದ್ವಿತೀಯ, ಅರ್ಪಿತ್ ತೋರಗಲ್ ತೃತೀಯ ಸ್ಥಾನ ಪಡೆದರು.
ಸ್ಪರ್ಧೆಯ ನಿರ್ಣಾಯಕರಾಗಿ ಅಂತರರಾಷ್ಟ್ರೀಯ ಖ್ಯಾತಿಯ ಅಜಿತ್ ಸಿದ್ದಣ್ಣವರ, ಜಿಲ್ಲಾ ದೇಹದಾರ್ಢ್ಯ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ.ಗುರವ್, ಕಾರ್ಯದರ್ಶಿ ಗಂಗಾಧರ ಎಂ., ತರಬೇತುದಾರ ಹೇಮಂತ್ ಹವಲ್ ಹಾಗೂ ಸುನಿಲ್ ರಾವುತ್ ಕಾರ್ಯನಿರ್ವಹಿಸಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಎಚ್.ಎಸ್.ಮೇಲಿನಮನಿ ಹಾಗೂ ಸಿಬ್ಬಂದಿ ವಿದ್ಯಾರ್ಥಿಗಳು ಇದ್ದರು.
Laxmi News 24×7