Breaking News

ಕಾಂಗ್ರೆಸ್ ಅಧ್ಯಕ್ಷ ಚುನಾವಣೆ: ಖರ್ಗೆ ಬಗ್ಗೆ ಅಚ್ಚರಿಯ ಭವಿಷ್ಯ ನುಡಿದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ!

Spread the love

ಬೆಂಗಳೂರು: ಕಾಂಗ್ರೆಸ್​ನ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆ ಸಮೀಪಿಸುತ್ತಿದ್ದು, ಸಂಸದ ಶಶಿ ತರೂರ್ ಮತ್ತು ಮಾಜಿ ಸಚಿವ ಕೆ.ಎನ್​.ತ್ರಿಪಾಠಿ, ಗಾಂಧಿ ಪರಿವಾರದ ನಿಷ್ಠ ಮತ್ತು ಪಕ್ಷದ ಶಿಸ್ತಿನ ಸಿಪಾಯಿ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸಿದ್ದಾರೆ.

ನಿನ್ನೆಯಷ್ಟೇ ಮೂವರು ನಾಯಕರು ನಾಮಪತ್ರ ಸಲ್ಲಿಸಿದ್ದು, ಮುಂದಿನ ಕಾಂಗ್ರೆಸ್​ ಅಧ್ಯಕ್ಷ ಯಾರಾಗಲಿದ್ದಾರೆ ಎಂಬ ಕುತೂಹಲ ಗರಿಗೆದರಿರುವಾಗಲೇ ಖರ್ಗೆ ಕುರಿತಾದ ಅಚ್ಚರಿಯ ಭವಿಷ್ಯವೊಂದು ಹೊರಬಿದ್ದಿದೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ಭವಿಷ್ಯದ ಕುರಿತು ಭಾರೀ ಸುದ್ದಿಯಲ್ಲಿರುವ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರು ಇದೀಗ ಕಾಂಗ್ರೆಸ್​ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ಭವಿಷ್ಯ ನುಡಿದಿದ್ದಾರೆ. ಖರ್ಗೆ ಅವರು ಕಾಂಗ್ರೆಸ್​ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸುತ್ತಾರೆ ಎಂದು ಫೇಸ್​ಬುಕ್​ ಪೇಜ್​ನಲ್ಲಿ ಭವಿಷ್ಯವಾಣಿಯನ್ನು ಸ್ವಾಮೀಜಿ ಪೋಸ್ಟ್​ ಮಾಡಿದ್ದಾರೆ.

ಸ್ವಾಮೀಜಿ ಅವರ ಭವಿಷ್ಯವಾಣಿಯ ಸಾರಾಂಶ ಈ ಕೆಳಕಂಡಂತಿದೆ
ಖರ್ಗೆ ಅವರಿಗೆ ಸದ್ಯದ ದಶಾಭುಕ್ತಿಯಲ್ಲಿ ಅತ್ಯಂತ ಅನುಕೂಲಕರ ಸ್ಥಿತಿಗತಿಗಳು ನಡೆಯುತ್ತಿರುವುದರಿಂದ ಖರ್ಗೆ ಅವರಿಗೆ ಅಧಿಕಾರಿ ಪ್ರಾಪ್ತಿಯಾಗಲಿದೆ. ಆದ್ದರಿಂದ ಅವರಿಗೆ ಆಶೀರ್ವಾದ ಮಾಡುತ್ತಾ ದೀನ-ದಲಿತರಿಗೆ, ಬಡವರಿಗೆ, ನಿರುದ್ಯೋಗಿಗಳನ್ನು ಗುರುತಿಸಿ ಅವರಿಗೆ ಸಹಾಯವನ್ನು ಮಾಡಿ. ಮೇಲಾಗಿ ನಮ್ಮ ದೇಶ ನಿಂತಿರುವುದು ಕೃಷಿಯ ಮೇಲೆ ಆದ್ದರಿಂದ ರೈತರನ್ನು ಗಮನಿಸಿ, ಆದಷ್ಟು ರೈತರಿಗೆ ಆರ್ಥಿಕತೆಯ ಸಹಾಯ ಮಾಡಿ. ರೈತರ ಕುಟುಂಬದ ಶಿಕ್ಷಿತರಿಗೆ ನೆರವಾಗಿ, ಇದರಿಂದ ನಿಮಗೆ ಶ್ರೀ ಭಗವತಿ ಚಂಡಿಕಾ ಪರಮೇಶ್ವರಿಯು ಅನುಗ್ರಹ ಮಾಡುತ್ತಾಳೆ. ಇದು ನಿಮಗೆ ನೆನಪಿರಲಿ. ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶುಭ ಆಶೀರ್ವಾದಗಳನ್ನು ನೀಡುತ್ತಾ, ಎಲ್ಲರೂ ಒಳ್ಳೆಯದನ್ನೇ ಯೋಚಿಸಿ, ಒಳ್ಳೆಯದನ್ನೇ ಮಾಡಿ, ನಿಮಗೂ ಒಳ್ಳೆಯದೇ ಆಗುತ್ತದೆ. ಎನಗಿಂತ ಕಿರಿಯರಿಲ್ಲ, ಸದ್​ ಭಕ್ತರಿಗಿಂತ ಹಿರಿಯರಿಲ್ಲ ಎಂದು ಭವಿಷ್ಯವಾಣಿಯನ್ನು ಸ್ವಾಮೀಜಿ ನುಡಿದಿದ್ದಾರೆ.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ