ಆನೇಕಲ್(ಬೆಂಗಳೂರು): ಹೊಸೂರು ರಾಷ್ಟ್ರೀಯ ಹೆದ್ದಾರಿಯ ಆರ್ಟಿಒ ಕಚೇರಿ ಮೇಲೆ ದಿಡೀರ್ ದಾಳಿ ನಡೆಸುವ ಮೂಲಕ ಲೋಕಾಯುಕ್ತ ಸಂಸ್ಥೆ ಸದ್ದು ಮಾಡಿದೆ. ಎರಡು ಜೀಪುಗಳಲ್ಲಿ ಆಗಮಿಸಿರುವ ಅಧಿಕಾರಿಗಳು 20 ಕ್ಕೂ ಹೆಚ್ಚು ಅಧಿಕಾರಿಗಳ ತಂಡದಿಂದ ತಪಾಸಣೆ ನಡೆಸಿದೆ.
ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಷಿ ನೇತೃತ್ವದಲ್ಲಿ ನಡೆಯುತ್ತಿರುವ ಪರಿಶೀಲನೆಯಲ್ಲಿ ಹಲವಾರು ದಾಖಲೆಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತರು ಖಾಸಗಿ ವ್ಯಕ್ತಿಗಳನ್ನೂ ಕೂಡ ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಲೆಕ್ಕಪತ್ರಗಳಲ್ಲಿ ನಮೂದಾದ ಹಣಕ್ಕಿಂತ ಮೂರು ಪಟ್ಟು ನಗದು ಪತ್ತೆಯಾಗಿದ್ದು, ಬೆಳಗ್ಗೆ ಕೆಲ ತಾಸಿನಲ್ಲೇ ಲಕ್ಷಾಂತರ ವ್ಯವಹಾರದ ವಾಸನೆಗೆ ಲೋಕಾಯುಕ್ತ ದಾಳಿ ಬೆಚ್ಚಿ ಬಿದ್ದಿದೆ.
ಖಾಸಗಿ ವ್ಯಕ್ತಿಗಳು ಮಧ್ಯವರ್ತಿಗಳಾಗಿ ಕೆಲಸ ಮಾಡುತ್ತಿರುವ ಮಾಹಿತಿ ಮೇಲೆ ದಾಳಿ ನಡೆದಿದೆ. ಲೋಕಾಯುಕ್ತ ಸಿಬ್ಬಂದಿ ಆರ್ಟಿಒ ಕಚೇರಿ ಒಳಗೆ ತನಿಖೆ ಮಾಡುತ್ತಿದೆ. ಬೆಳಗ್ಗೆ 4 ಗಂಟೆಯಿಂದ ಅಧಿಕಾರಿಗಳ ತಂಡ ನಿರಂತರವಾಗಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದೆ.
Laxmi News 24×7