Home / new delhi / ಖ್ಯಾತ ಚಿತ್ರ ನಟ ರಮೇಶ ಬುಧವಾರ ಬೆಳಗಾವಿಯ ಸುವರ್ಣಸೌಧಕ್ಕೆ ಬರ್ತಾರೆ…..!!

ಖ್ಯಾತ ಚಿತ್ರ ನಟ ರಮೇಶ ಬುಧವಾರ ಬೆಳಗಾವಿಯ ಸುವರ್ಣಸೌಧಕ್ಕೆ ಬರ್ತಾರೆ…..!!

Spread the love

ಬೆಳಗಾವಿ- ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವ ನಾಡಿದ್ದು ಬುಧವಾರ ನಡೆಯಲಿದ್ದು ಡಾಕ್ಟರೇಟ್ ಪದವಿ ಸ್ವೀಕರಿಸಲು ಖ್ಯಾತ ಕನ್ನಡ ಚಿತ್ರನಟ ರಮೇಶ್ ಅರವಿಂದ ಬುಧವಾರ ಬೆಳಗಾವಿಗೆ ಬರ್ತಾರೆ..

 

ಸೆ.14ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ 10ನೇ ಘಟಿಕೋತ್ಸವ ನಡೆಲಿದೆ.ಬೆಳಗಾವಿಯಲ್ಲಿ ಆರ್.ಸಿ.ಯು ಕುಲಪತಿ ಪ್ರೋ.ಎಂ ರಾಮಚಂದ್ರ ಗೌಡ ಮಾಧ್ಯಮದಗೋಷ್ಠಿ ನಡೆಸಿ ಮಾಹಿತಿ ನೀಡಿದ್ದು.ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ಘಟಿಕೋತ್ಸವ ನಡೆಯಲಿದೆ.ಇದೇ ತಿಂಗಳು 14ರಂದು ಮಧ್ಯಾಹ್ನ 12.30ಕ್ಕೆ ಘಟಿಕೋತ್ಸವ ಸಮಾರಂಭ ನಡೆಯಲಿದೆ.

ರಾಜಪಾಲ ಥಾವರ್ ಚಂದ್ ಗೆಹ್ಲಟ್ ಅಧ್ಯಕ್ಷತೆ ವಹಿಸಲಿದ್ದಾರೆ,ಅತಿಥಿಗಳಾಗಿ ಉನ್ನತ ಶಿಕ್ಷಣ ಸಚಿವ ಡಾ.ಅಶ್ವಸ್ಥ ನಾರಾಯಣ, ಆಂದ್ರಪ್ರದೇಶದ ವಿಜಯನಗರಂನ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಪ್ರೊ.ಟಿ.ವಿ.ಕಟ್ಟಿಮನಿ ಆಗಮಿಸುವರು.ರಾಣಿ ಚನ್ನಮ್ಮ ವಿವಿಯಿಂದ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.ಸಮಾಜಸೇವಾ ಕ್ಷೇತ್ರಕ್ಕೆ ಸಮಾಜ ಸೇವಕ ರವಿಚಂದರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಪದವಿ,ಖ್ಯಾತ ಚಿತ್ರ ನಟ ರಮೇಶ ಅರವಿಂದ ಅವರಿಗೆ ಚಲನಚಿತ್ರ ಕ್ಷೇತ್ರದ ಸೇವೆಗಾಗಿ ಡಾಕ್ಟರ್ ಆಫ್ ಲೆಟರ್ಸ್ ಪದವಿ,ಬಸವತತ್ವ ಪ್ರಚಾರಕರಾದ ಬೀದರ್ ನ ಮಾತಾ ಅಕ್ಕ ಅನ್ನಪೂರ್ಣ ತಾಯಿ ಅವರಿಗೆ ಡಾಕ್ಟರ್ ಆಫ್ ಲೆಟರ್ಸ್ ಪದವಿಯನ್ನ ಧಾರ್ಮಿಕ ಕ್ಷೇತ್ರಕ್ಕೆ ನೀಡಲಾಗುತ್ತಿದೆ.

 

10ನೇ ಘಟಿಕೋತ್ಸವದಲ್ಲಿ ಒಟ್ಟು 43607 ವಿದ್ಯಾರ್ಥಿಗಳಿಗೆ ಪದವಿ ಪಡೆಯುತ್ತಿದ್ದಾರೆ.ಇದರಲ್ಲಿ 11ಸುವರ್ಣ ಪದಕಗಳು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.48 PHD ಪದವಿ ಪ್ರಧಾನ ಮಾಡಲಾಗುತ್ತಿದೆ ಎಂದು ವಿಸಿ ರಾಮಚಂದ್ರಗೌಡ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ

Spread the love ರಬಕವಿ-ಬನಹಟ್ಟಿ: ಕುಸ್ತಿ ಗ್ರಾಮೀಣ ಭಾಗದ ಬಹುದೊಡ್ಡ ಕ್ರೀಡೆ. ಗ್ರಾಮೀಣ ಭಾಗದ ಜನರು ಕುಸ್ತಿಗೆ ಬಹಳಷ್ಟು ಮಹತ್ವ ನೀಡುತ್ತಾ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ