Breaking News

ಚಿನ್ನ,ಎಮ್ಮೆ, ಕದ್ದವರು,ಪೋಲೀಸರ ಬಲೆಗೆ

Spread the love

ಬೆಳಗಾವಿ-ಮಹಿಳೆಯರ ಚಿನ್ನಾಭರಣ,ಮನೆ ಮುಂದೆ ಕಟ್ಟಿದ ಎಮ್ಮೆಗಳನ್ನು ದೋಚುತ್ತಿದ್ದ ಖತರ್ನಾಕ್ ಕಳ್ಳರ ಗ್ಯಾಂಗ್ ಹಾರುಗೇರಿ ಠಾಣೆಯ ಪೋಲೀಸರ ಬಲೆಗೆ ಬಿದ್ದಿದೆ.

 

ಹಾರೂಗೇರಿ ಮುಗುಳಖೋಡ,ತೇರದಾಳ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಮಹಿಳೆಯರ ಕೊರಳಲ್ಲಿದ್ದ ಚಿನ್ನಾಭರಣ ಎಮ್ಮೆ ಕಳುವು ಮಾಡಿ ಮಾರಾಟ ಮಾಡುತ್ತಿದ್ದ ಹಲವಾರು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಒಟ್ಟು ಐದು ಜನ ಆರೋಪಿಗಳನ್ನು ಹಾರೂಗೇರಿ ಪೋಲೀಸರು ಬಂಧಿಸಿದ್ದಾರೆ.

 

ಕಳವು ಮಾಡಲಾಗಿದ್ದ,49 ಗ್ರಾಂ ಚಿನ್ನಾಭರಣ,ಎರಡು ಎಮ್ಮೆ,ಒಂದು ಗೂಡ್ಸ್ ವಾಹನ ಸೇರಿದಂತೆ ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಹಾರೂಗೇರಿ ಪೋಲೀಸರು ವಶಪಡಿಸಿಕೊಂಡಿದ್ದಾರೆ.

 

ಹಾರೂಗೇರಿ ಸಿಪಿಐ ಹಟ್ಟಿ,ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ತ್ವರಿತಗತಿಯಲ್ಲಿ ಕಳ್ಳತನ ಪ್ರಕರಣಗಳನ್ನು ಭೇದಿಸಿ ಕಳ್ಳರಿಗೆ ಜೈಲು ತೋರಿಸಿದ್ದಾರೆ.


Spread the love

About Laxminews 24x7

Check Also

ಅಧಿವೇಶನ ‘ಪಿಕ್ನಿಕ್ ‘ಸ್ಪಾಟ್’ ಆಗಬಾರದು:

Spread the love ಬೆಳಗಾವಿ ವಿಧಾನಸೌಧ ಅಧಿವೇಶನ ಒಂದು ವಿಶ್ಲೇಷಣೆ! ಡಾಕ್ಟರ್ ಪ್ರಭಾಕರ ಕೋರೆ! ಸುವರ್ಣ ಸೌಧ ಉದ್ದೇಶ ಈಡೇರಿಲ್ಲ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ