ಬೆಳಗಾವಿಯ ಮಚ್ಛೆಯ ಕೆಎಸ್‍ಆರ್‍ಪಿ ಗ್ರೌಂಡ್ ಬಳಿ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸಿ ಸಮಾಜ ಸೇವಕ ಹಾಗೂ ಮಾಜಿ ಮಹಾಪೌರರಾದ ವಿಜಯ್ ಮೋರೆ ಹಾಗೂ ಮಾರಿಯಾ ಮೋರೆ ಮಾನವೀಯತೆ ಮೆರೆದಿದ್ದಾರೆ.
ಹೌದು ಇಂದು ಬೆಳಗಿನ ಜಾವ ಬೆಳಗಾವಿಯ ಮಚ್ಛೆಯ ಕೆಎಸ್‍ಆರ್‍ಪಿ ಗ್ರೌಂಡ್ ಬಳಿ ಯುವಕನೋರ್ವ ಅಪಘಾತಕ್ಕೀಡಾಗಿ ನರಳಾಡುತ್ತಿದ್ದ. ಈ ವೇಳೆ ಆತನ ಪರೀಸ್ಥಿತಿ ಗಂಭೀರವಾಗಿತ್ತು. ಈ ವೇಳೆ ಯಾರೂ ಆತನ ಸಹಾಯಕ್ಕಾಗಿ ಬರಲಿಲ್ಲ.
ಈ ವೇಳೆ ಮಾಜಿ ಮಹಾಪೌರ ಹಾಗೂ ಸಮಾಜ ಸೇವಕರಾದ ವಿಜಯ್ ಮೋರೆ ಹಾಗೂ ಮಾರಿಯಾ ಮೋರೆ ಅಪಘಾತಕ್ಕೀಡಾದ ವ್ಯಕ್ತಿಯ ಸಹಾಯಕ್ಕೆ ಧಾವಿಸಿದ್ದಾರೆ. ಆತನನ್ನು ವೇಣುಗ್ರಾಮ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಈ ವೇಳೆ ವೈದ್ಯರು, ನರ್ಸ್ ಹಾಗೂ ಯುವಕರು ಈ ವೇಳೆ ಮೋರೆ ರವರಿಗೆ ಸಹಾಯ ಮಾಡಿದ್ದಾರೆ. ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.