ಸಂಕೇಶ್ವರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ ಬೈ ಪಾಸ್ ರಸ್ತೆಯ ಬಳಿ ಇರುವ ಬಾವಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ರವಿವಾರ ಬೆಳಿಗ್ಗೆ ವರದಿಯಾಗಿದೆ.
ಸಂಕೇಶ್ವರ ನಗರದ ಹೊರ ವಲಯದಲ್ಲಿ ಹಾಯ್ದು ಹೋಗಿರುವ ಪುನಾ ಬೆಂಗಳೂರು ರಾಷ್ಟ್ರೀಯ ಬೈಪಾಸ್ ರಸ್ತೆಯಲ್ಲಿ ಇರುವ ಡಾ. ಸಚೀನ ಪಾಟೀಲ ಅವರ ಜಮೀನಿನಲ್ಲಿರುವ ಬಾವಿಯಲ್ಲಿ ವ್ಯಕ್ತಿಯೊರ್ವರ ಮೃತದೇಹವು ಇಂದು ಬೆಳಿಗ್ಗೆ ಪತ್ತೆಯಾಗಿದೆ. ಈ ವ್ಯಕ್ತಿಯು ಮೂಲತಃ ನಿಪ್ಪಾಣಿ ಪಟ್ಟಣದವನು ಎಂದು ತಿಳಿದು ಬಂದಿದೆ.
ವ್ಯಕ್ತಿಯು ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಹತ್ಯೆ ಮಾಡಲಾಗಿದೆ ಎನ್ನುವದು ಪೊಲೀಸ ತನಿಖೆಯಿಂದ ತಿಳಿದು ಬರಬೇಕಿದೆ.
Laxmi News 24×7