ಅಂಕೋಲಾ : ತಾಲೂಕಿನ ಬಸ್ ನಿಲ್ದಾಣ ಮತ್ತು ಇತರ ಸ್ಥಳಗಳಲ್ಲಿ ಮೊಬೈಲ್ ಕಳ್ಳತನ ಮಾಡುತ್ತಿದ್ದ ಇಬ್ಬರು ಅಂತರ ರಾಜ್ಯ ವ್ಯಕ್ತಿಗಳನ್ನು ಅಂಕೋಲಾ ಪೊಲೀಸರು ಬಂಧಿಸಿ ಕಳ್ಳತನ ಮಾಡಿದ 7 ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ
ಗುಜರಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದ ಕೇರಳ ಕಾಸರಗೋಡು ನಿವಾಸಿ ಟೋನಿ ಜಾನ್ ಜೇಮ್ಸ್ (34) ಮತ್ತು ಹುಬ್ಬಳ್ಳಿಯ ಗದಗ ರಸ್ತೆ ನಿವಾಸಿ ಮಹಮ್ಮದ್ ಅಲಿ ಮೆಹಬೂಬ್ ಸಾಬ ಕುಂದಗೋಳ(38) ಬಂಧಿತ ಆರೋಪಿಗಳು.
ಅಂಕೋಲಾ ಪಿ.ಎಸ್. ಐ ಮಹಾಂತೇಶ ವಾಲ್ಮೀಕಿ ಗಸ್ತು ಕರ್ತವ್ಯದ ನಿಮಿತ್ತ ಅಂಕೋಲಾ ಬಸ್ ನಿಲ್ದಾಣದ ಒಳಗೆ ಹೋಗಿದ್ದ ಸಂದರ್ಭದಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಆರೋಪಿಗಳು ಪೊಲೀಸ್ ಜೀಪ್ ಕಂಡೊಡನೆ ಬಸ್ ನಿಲ್ದಾಣದದಿಂದ ಓಡಿ ಹೋಗಲು ಯತ್ನಿಸಿದಾಗ, ಬೆಂಬತ್ತಿದ ಪೊಲೀಸರು ಅವರನ್ನು ಹಿಡಿದು ವಿಚಾರಣೆ ನಡೆಸಿದ ವೇಳೆ, ಇವರು ಮೊಬೈಲ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7