Breaking News

ಅರವಿಂದ್‌ ಕೇಜ್ರಿವಾಲ್‌ಗೆ ಅಧಿಕಾರದ ಅಮಲು ಹತ್ತಿದೆ ಎಂದ ಅಣ್ಣ ಹಜಾರೆ

Spread the love

ವದೆಹಲಿ, ಆಗಸ್ಟ್‌ 30: ಹಿರಿಯ ಗಾಂಧಿವಾದಿ ಮತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು ಮಂಗಳವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದು ದೆಹಲಿಯ ಮದ್ಯ ನೀತಿಯನ್ನು ಟೀಕಿಸಿ ನಿಮಗೆ ಅಧಿಕಾರದ ಅಮಲು ಹತ್ತಿದೆ ಎಂದು ತೀವ್ರ ತರಾಟೆ ತೆಗೆದುಕೊಂಡಿದ್ದಾರೆ.

 

ಹಜಾರೆ ತಮ್ಮ ಪತ್ರದಲ್ಲಿ ಹಳ್ಳಿಗಳಲ್ಲಿನ ಮದ್ಯದ ವ್ಯಸನದ ಸಮಸ್ಯೆ ಮತ್ತು ಅದರ ಪರಿಹಾರಗಳ ಬಗ್ಗೆ ವ್ಯವಹರಿಸುವ ಕೇಜ್ರಿವಾಲ್ ಅವರದೇ ಸ್ವರಾಜ್‌ ಪುಸ್ತಕದ ಸಾಲುಗಳನ್ನು ಉಲ್ಲೇಖಿಸಿದ್ದಾರೆ. ನಾನು ರಾಜಕೀಯಕ್ಕೆ ಕಾಲಿಡುವ ಮುನ್ನ ಸ್ವರಾಜ್ ಪುಸ್ತಕ ಬರೆದಿದ್ದೇನೆ. ನಾನು ಬರೆದ ಪುಸ್ತಕದ ಮುನ್ನುಡಿಯಲ್ಲಿ ಗ್ರಾಮಸಭೆ, ಮದ್ಯಪಾನ ನೀತಿಯ ಬಗ್ಗೆ ಜಂಬ ಕೊಚ್ಚಿಕೊಂಡಿದ್ದೇನೆ. ಏನೂ ಬರೆದಿದ್ದೇನೆ ಎನ್ನುವುದು ನೆನಪಿರಲಿ ಎಂದು ಹಜಾರೆ ಹೇಳಿದ್ದಾರೆ.

 

ಪತ್ರದಲ್ಲಿ ಹಜಾರೆ ಅವರು, ನೀವು ಪುಸ್ತಕದಲ್ಲಿ ಆದರ್ಶಪ್ರಾಯವಾಗಿ ಬರೆದಿದ್ದೀರಿ. ಹಾಗಾಗಿ ನಾನು ನಿಮ್ಮಿಂದ ಅಪಾರ ನಿರೀಕ್ಷೆಗಳನ್ನು ಹೊಂದಿದ್ದೆ. ಆದರೆ, ನೀವು ರಾಜಕೀಯಕ್ಕೆ ಕಾಲಿಟ್ಟು ಮುಖ್ಯಮಂತ್ರಿಯಾದ ನಂತರ ಆ ಮಾತುಗಳನ್ನು ಮರೆತಿದ್ದೀರಿ. ಹೊಸ ಅಬಕಾರಿ ನೀತಿ. ರೂಪಿಸಿರುವುದು ಮದ್ಯ ವ್ಯಸನದ ಚಟವನ್ನು ಉತ್ತೇಜಿಸುವಂತಿದೆ. ಈ ನೀತಿಯು ರಾಜ್ಯದ ಮೂಲೆ ಮೂಲೆಗಳಲ್ಲಿ ಮದ್ಯದಂಗಡಿಗಳಿಗೆ ಕಾರಣವಾಗಬಹುದು. ಪರಿಣಾಮವಾಗಿ ಇದು ಸಾರ್ವಜನಿಕ ವಲಯದಲ್ಲಿ ಭ್ರಷ್ಟಾಚಾರವನ್ನು ಉತ್ತೇಜಿಸಬಹುದು. ನೀವು ಅಂತಹ ನೀತಿಯನ್ನು ತರಲು ನಿರ್ಧರಿಸಿದ್ದೀರಿ ಎಂದು ಅಣ್ಣ ಹೇಳಿದ್ದಾರೆ.

 


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ