ಕೃಷಿ ಚಟುವಟಿಕೆಗೆ ಸಮರ್ಪಕ ವಿದ್ಯುತ್ ಪೂರೈಸುವಂತೆ ರಾಯಬಾಗ ತಾಲೂಕಿನ ಯಲ್ಪಾರಟ್ಟಿ ಗ್ರಾಮದ 110 ಸಾಮರ್ಥ್ಯದ ವಿದ್ಯುತ ವಿತರಣಾ ಘಟಕದ ಆವರಣದಲ್ಲಿ ರೈತರು ಪ್ರತಿಭಟನೆ ನಡೆಸಿದರು.
ನೂರುಕ್ಕೂ ಹೆಚ್ಚು ರೈತರು ವಿತರಣಾ ಘಟಕದ ಮುಂದೆ ಬೆಳ್ಳಿಗೆ ಜಮಾವಣೆ ಗೊಂಡು ಅಧಿಕಾರಿಗಳು ವಿರುದ್ಧ ಘೋಷಣೆ ಕೂಗಿದರು ಕಳೆದ ಮೂರು ದಿನಗಳಿಂದ ವಿದ್ಯುತ ಪೂರೈಕೆ ಕಡಿತಗೊಳಿಸಲಾಗಿದೆ ಇದರಿಂದ ಜಮೀನುಗಳಿಗೆ ಸರಿಯಾಗಿ ನೀರು ಹಾಯಿಸುವ ಸಾಧ್ಯವಾಗುತ್ತಿಲ್ಲ ಇದರಿಂದ ಬೆಳೆಗಳು ಒಣಗುತ್ತವೆ.
ಹಾಗೂ ಮೂರು ದಿನಗಳಿಂದ ಗ್ರಾಮವು ಕಗ್ಗತ್ತಲಲ್ಲಿ ಮೂಳಗಿದೆ ಕಳ್ಳರ ಹಾವಳಿ ಹೆಚ್ಚಾಗಿದೆ ಮನೆಯಂದ ರಾತ್ರಿ ಜನರು ಹೊರಗೆ ಬರಲು ಭಯ ಪಡುವ ಪರಿಸ್ಥತಿ ಗ್ರಾಮದಲ್ಲಿ ಸ್ರಷ್ಟೀಯಾಗಿದೆ ಇನ್ನೂ ಸರಕಾರದವರು ಸೀಮೆ ಎಣ್ಣೆ ನೀಷೆದ ಮಾಡಿದ ಹಿನ್ನಲೆಯಲ್ಲಿ ಅಡುಗೆ ಎಣ್ಣೆ ಬಳಸಿ ದೀಪ ಹಚ್ಚಿತ್ತಿದ್ದು ಮಕ್ಕಳ ವಿದ್ಯಾ ಅಬ್ಯಾಸಕ್ಕೆ ತೊಂದರೆ ಯಾಗುತ್ತಿದೆ ಗ್ರಾಮದಲ್ಲಿ ಸಮಸ್ಯೆ ಇರುವ ಬಗ್ಗೆ ಈಗಾಗಲೇ ಅನೇಕ ಬಾರಿ ಅಧಿಕಾರಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟಿಸಿದರು.