ಕೇಲವೇ ದಿನಗಳಲ್ಲಿ ಬೆಳಗಾವಿಯಲ್ಲಿ ಗಣೇಶೋತ್ಸವ ನಡೆಯಲಿದೆ ಈ ಹಿನ್ನೆಲೆ ಇಂದು ದಕ್ಷಿಣ ಶಾಸಕ ಅಭಯ ಪಾಟೀಲ ಅವರು ದಕ್ಷಿಣ ಕ್ಷೇತ್ರದ ಪಾರಂಪರೀಕ ಮಾರ್ಗದಲ್ಲಿ ಸಂಚರಿಸಿ, ಗಣೇಶೋತ್ಸವದ ಮೆರವಣಿಗೆಗೆ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಪರಿಶೀಲಿಸಿದರು.
ಇದೇ ತಿಂಗಳು 31 ರಂದು ಗಣೇಶೋತ್ಸವ ನಡೆಯಲಿದ್ದು, ಕೊರೋನಾ ನಂತರ 2 ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಗಣೇಶೋತ್ಸವವನ್ನು ಆಚರಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆ ಇಂದು ದಕ್ಷಿಣ ಶಾಸಕ ಅಭಯ ಪಾಟೀಲ ಅವರು ನಗರ ಪ್ರದಕ್ಷಿಣೆ ಮಾಡಿದರು.
ದಕ್ಷಿಣ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಶಹಾಪುರದ ವಿವಿಧ ಪಾರಂಪರೀಕ ಮಾರ್ಗಗಳಲ್ಲಿ ಸಂಚರಿಸಿ ನೂನ್ಯತೆ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿ, ಅಧಿಕಾರಿಗಳಿಗೆ ಯೋಗ್ಯ ಕ್ರಮಕೈಗೊಳ್ಳುವಂತೆ ಸೂಚಿಸಿದರು. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಬೇಕು. ನೇತಾಡುತ್ತಿರುವ ವಿದ್ಯುತ್ ತಂತಿಗಳನ್ನು ಸರಿಪಡಿಸಬೇಕು.ರಸ್ತೆಯ ಮಧ್ಯೆದಲ್ಲಿ ಬೆಳೆದಿರುವ ರೆಂಬೆ-ಕೊಂಬೆಗಳನ್ನು ಕತ್ತರಿಸಬೇಕೆಂದು ಸೂಚನೆ ನೀಡಿದರು.
ಎಲ್ಲ ನಗರ ಸೇವಕರು, ಆಯುಕ್ತರು, ಅಧಿಕಾರಿ, ಮಹಾಮಂಡಲದ ಸದಸ್ಯರ ಜೊತೆಯಲ್ಲಿ ಗಣೇಶ ಆಗಮನದ ಮಾರ್ಗ-ನಿರ್ಗಮನ ಮಾರ್ಗದ ಪರಿಶೀಲನೆ ಮಾಡಲಾಗಿದೆ. 2-3 ದಿನಗಳಲ್ಲಿ ಕೆಲಸ ಆರಂಭಗೊಳ್ಳಲಿದೆ. ಬೇರೆಡೆಯಿಂದ ಬೆಳಗಾವಿಗೆ ಆಗಮಿಸುವ ಜನರಿಗೆ ತೊಂದರೆಯಾಗದಂತೆ ಗಮನ ವಹಿಸಬೇಕು. ಅಲ್ಲದೇ ವಿನಾಃ ಕಾರಣ ತಡರಾತ್ರಿ ಜನಹಿತದಲ್ಲಿ ಅಂಗಡಿಗಳನ್ನು ತೆರೆದ ವ್ಯಾಪಾರಿಗಳಿಗೆ ಮುಚ್ಚುವಂತೆ ಒತ್ತಾಯ ಹೇರಬಾರದು ಎಂದು ಶಾಸಕ ಅಭಯ್ ಪಾಟೀಲ ಹೇಳಿದರು.