ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕು ಸೋಲೂರು ಗದ್ದುಗೆ ಮಠದ ಶಿವ ಮಹಾಂತೇಶ ಸ್ವಾಮೀಜಿ ಪ್ರೀತಿಸಿದ ಯುವತಿ ಜೊತೆ ಪರಾರಿ…!! ಶ್ರೀಗಳ ಹುಟ್ಟೂರು ವೀರಾಪುರದಲ್ಲಿ ನಾಲ್ಕು ಜನರ ಮುಂದೆ ತಲೆ ತಗ್ಗಿಸಿಕೊಂಡು ನಡೆಯುತ್ತಿರುವ ರೈತ ಕುಟುಂಬ.
ಆ ಮನೆಯ ವಾರಸ್ದಾರನಾಗಿ ಬಸವರಾಜು ತಾಯಿ ಶಿವರುದ್ರಮ್ಮರಿಗೆ ಜನಿಸಿದ ಪುತ್ರ ಹರೀಶ್ (ಚನ್ನವೀರ ಶಿವಾ ಮಹಂತ ಸ್ವಾಮೀಜಿ)ಬೆಳೆಯುತ್ತಾ ಸಿದ್ಧಗಂಗಾ ಮಠದಲ್ಲಿ ವಿದ್ಯಾಭ್ಯಾಸ ಮಾಡುವಾಗ ಕಂಬಾಳು ವಾಸಿ ಕುಮಾರಯ್ಯನ ಮಗಳು ಕೋಮಲ ಜೊತೆ ಸ್ವಾಮೀಜಿಗೆ ಸ್ನೇಹವಾಗಿ ಸ್ನೇಹ ಮುಂದಿನ ದಿನಗಳಲ್ಲಿ ಪ್ರೀತಿಗೆ ತಿರುಗುತ್ತದೆ ಬಾಲ್ಯದಿಂದಲೂ ಸ್ವಾಮೀಜಿ ಮತ್ತು ಕೋಮಲಳ್ಳಿಗೆ ಸಂಪರ್ಕ ಕಣ್ಣಮುಚ್ಚಾಲೆಯಂತಿತ್ತು.
ಸ್ವಾಮೀಜಿ ವಿದ್ಯಾಭ್ಯಾಸ ಮುಂದುವರೆಸುತ್ತಾ ಬಂದರು.ಕೋಮಲ ಹೊಟ್ಟೆಪಾಡಿಗೆ ದಾಬಸ್ ಪೇಟೆಯಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದರು.ಸ್ವಾಮೀಜಿ ಮನೆತನ ತಂದೆ ತಾಯಿ ಮುಗ್ಧ ಮನಸ್ಸು ಅವರ ವ್ಯಕ್ತಿತ್ವಕ್ಕೆ ಗದ್ದುಗೆ ಮಠದ ಹಿರಿಯ ಶ್ರೀಗಳ ಆರೋಗ್ಯ ಏರುಪೇರಾದ ಕಾರಣ ಶಿವಮಹಾಂತ ಸ್ವಾಮೀಜಿ ಯವರಿಗೆ ಗದ್ದುಗೆಮಠದ ಕಮಿಟಿಯವರು ಗ್ರಾಮಸ್ಥರು ಕಳೆದ ಎರಡು ವರ್ಷಗಳ ಹಿಂದೆ ಉತ್ತರಾಧಿಕಾರಿಯಾಗಿ ಪಟ್ಟಾಭಿಷೇಕ ಮಾಡಿರುತ್ತಾರೆ.
ಗದ್ದುಗೆ ಮಠದ ಪೂರ್ಣ ಜವಾಬ್ದಾರಿಯನ್ನು ಒತ್ತಿಕೊಂಡು ನಡೆಸುತ್ತಾರೆ ಎನ್ನುವಷ್ಟರಲ್ಲಿ ಪ್ರೀತಿ ಜಾಲಕ್ಕೆ ಮಾರುಹೋಗಿದ್ದ ಸ್ವಾಮೀಜಿ ಕೋಮಲಾ ನೆನಪು ಕಾಡತೊಡಗಿತು ಅದೇನೋ ..!ಕಳೆದ ಎರಡು ತಿಂಗಳ ಹಿಂದೆ ಕೋಮಲ ತಂದೆ ತಾಯಿ ಮಗಳ ಮದುವೆ ನಿಶ್ಚಯ ಮಾಡಲು ಮುಂದಾಗುತ್ತಾರೆ ಸಮಯಕ್ಕೆ ಸರಿಯಾಗಿ ಮಾಗಡಿ ತಾಲ್ಲೂಕಿನ ಮೋಟಗೊಂಡನಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಮೇಕಲ್ಲಯ್ಯನ ಪಾಳ್ಯದ ಪರಮಶಿವಯ್ಯನವರ ಮಗ ರೇಣುಕಾ ಪ್ರಸಾದ್ ಲ್ಯಾಂಕೋ ಟೋಲ್.ಎಲೆಕ್ಟ್ರಿಷಿಯನ್ ಕೆಲಸ. ಯಂಟಗಾನಹಳ್ಳಿ ಬಳಿ ಉತ್ತಮ ಕೆಲಸದಲ್ಲಿದ್ದಾನೆ ಎಂದು ತಿಳಿದು ಶಾಸ್ತ್ರ ಸಂಪ್ರದಾಯದಂತೆ ಮದುವೆ ಮಾಡಿಕೊಡುತ್ತಾರೆ ಆದರೆ ದುರ್ವಿಧಿ ರೇಣುಕಾಪ್ರಸಾದ್ ಕೋಮಲ ಸಂಸಾರ ನಡೆಸಲು ಶಿವಪೂಜೆಯಲ್ಲಿ ಕರಡಿ ಬಿಟ್ಟಂತೆ ವಕ್ಕರಿಸಿದ ಸ್ವಾಮೀಜಿ ಫೋನ್ಕಾಲ್ ವ್ಯಾಟ್ಸ್ಅಪ್ನಲ್ಲಿ ಕೋಮಲಾಳಿಗೆ ಏನೂ ತಲೆ ತುಂಬಿದನು ಗೊತ್ತಿಲ್ಲ ..!
ಮಂಗಳವಾರ ರಾತ್ರಿ ಸರಿಸುಮಾರು 10-30ಕ್ಕೆ ಮನೆ ಯಲ್ಲಿ ಗಂಟುಮೂಟೆ ಕಟ್ಟಿ ಸ್ವಾಮಿ ಜತೆ ಎಸ್ಕೇಪ್..?ಮೂರು ದಿನಗಳಿಂದ ಹುಡುಕಾಟ ಎರಡು ಕುಟುಂಬ ಕಣ್ಣೀರಿನ ಮುಡಿಲಲ್ಲಿ ನಡೆದಾಡುತ್ತಿದ್ದಾರೆ ಪೋಲಿಸ್ ಠಾಣೆಗೆ ದೂರು ದಾಖಲಾಗಿದೆ ಎಂಬ ಗಾಳಿಸುದ್ದಿ ಊರಿನ ಸ್ಥಳಿಕರು ಪಿಸುಗುಡುತ್ತಿದ್ದಾರೆ ..!!