Breaking News

ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆ

Spread the love

ವಿಜಯಪುರ: 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸನ್ನಡತೆ ತೋರಿದ 10 ಜೈಲು ಹಕ್ಕಿಗಳ ಬಿಡುಗಡೆಗೆ ನಿರ್ಧರಿಸಲಾಗಿದೆ.

ನಗರದ ಕೇಂದ್ರ ಕಾರಾಗೃಹದಿಂದ ನಾಳೆ 10 ಖೈದಿಗಳು ಬಿಡುಗಡೆಯಾಗಲಿದ್ದಾರೆವಿವಿಧ ತಪ್ಪುಗಳಿಂದ ಶಿಕ್ಷೆಗೆ ಒಳಗಾಗಿ ಹಲವು ವರ್ಷಗಳಿಂದ ಜೈಲಿನಲ್ಲಿ ದ್ದರೂ ತಮ್ಮ ಸನ್ನಡತೆಯಿಂದ. ಉತ್ತಮ ಜೀವ ರೂಪಿಸಿಕೊಳ್ಳುವ ಭರವಸೆ ಮೂಡಿಸಿರುವ ಖೈದಿಗಳಲ್ಲಿ ಮೂವರು ಸಹೋದರರು ಹಾಗೂ ಅವರ ತಂದೆ ಸೇರಿ ಒಂದೇ ಕುಟುಂಬದ ನಾಲ್ವರು ಇದ್ದಾರೆ.

ಬಸಪ್ಪ ಮಲಕಾರಿ ಜಟಗೊಂಡ, ಗೌಡಪ್ಪ ಜಟಗೊಂಡ, ಬೆಳೆನ್ನಿ ಜಟಗೊಂಡ ಹಾಗೂ ಇವರ ತಂದೆ ಮಲಕಾರಿ ಜಟಗೊಂಡ ಇವರು ಬಿಡುಗಡೆಯಾಗುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಕ್ಕಲಕಿ ಕ್ರಾಸ್ ನಿವಾಸಿ ಯಾಗಿರುವ ಇವರು, ಗ್ರಾಮಸ್ಥರೊಬ್ಬರ ತೋಟದಲ್ಲಿ ಹೂವು ಕೀಳಿದ್ದಾರೆ ಎಂಬ ಕಾರಣ ಎರಡು ಕುಟುಂಬಗಳ ಮಧ್ಯೆ ಜಗಳವಾಗಿದ್ದಾಗ ತಂದೆ ಹಾಗೂ ಅವರ ಮೂವರು ಮಕ್ಕಳು ಹೂವು ತೋಟದ ಮಾಲೀಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಈ ಸಂಬಂಧ ನಾಲ್ವರಿಗೂ 2ವರ್ಷದ ಶಿಕ್ಷೆಯಾಗಿತ್ತು. ಈಗ ಇವರ ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡ ಲಾಗುತ್ತಿದೆ.


Spread the love

About Laxminews 24x7

Check Also

ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ

Spread the love ವಿಜಯಪುರ ಡಿಸಿಯಾಗಿ ಡಾ. ಆನಂದ.ಕೆ ವರ್ಗಾವಣೆ ವಿಜಯಪುರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರನ್ನು ರಾಜ್ಯ ಸರ್ಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ