ಬೆಳಗಾವಿ ಸ್ಮಾರ್ಟಸಿಟಿ ಪಟ್ಟಿಗೆ ಸೇರಿದ ನಂತರ ಇದರ ಚಿತ್ರಣವೇ ಬದಲಾಗುತ್ತದೆ ಎಂದು ಜನ ಬಯಸಿದ್ದರು. ಆದರೆ ಜನರ ಬಯಕೆ ಹುಸಿಯಾಗಿದೆ. ಕುಂದಾನಗರಿಯ ಹಳೆ ಗಾಂಧಿ ನಗರ ಲಕ್ಷ್ಮೀ ಗಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಇದರಿಂದ ಆಕ್ರೋಶಗೊಂಡಿರುವ ಇಲ್ಲಿನ ನಿವಾಸಿಗಳು ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿ ನಿಂತಿರುವ ದೊಡ್ಡ ಪ್ರಮಾಣದ ನೀರು..ಕಟ್ ಆಗಿ ಜೋತಾಡುತ್ತಿರುವ ವಿದ್ಯುತ್ ತಂತಿ…ರಸ್ತೆ ಪಕ್ಕ ಪಾರ್ಕಿಂಗ್ ಮಾಡಿರುವ ಲಾರಿ..ನೀರಿನಲ್ಲಿಯೇ ನಿಂತು ಪ್ರತಿಭಟನೆ ಮಾಡುತ್ತಿರುವ ನಿವಾಸಿಗಳು..ಹೌದು ನೀವು ನೋಡುತ್ತಿರುವ ಈ ದೃಶ್ಯ ಬೆಳಗಾವಿಯ ಹಳೆ ಗಾಂಧಿ ನಗರ ಲಕ್ಷ್ಮೀ ಗಲ್ಲಿಯಲ್ಲಿನ ದೃಶ್ಯವನ್ನು
ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಲಾರಿಗಳನ್ನು ರಸ್ತೆ ಪಕ್ಕದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗುವಂತೆ ಪಾರ್ಕಿಂಗ್ ಮಾಡುತ್ತಾರಂತೆ. ಇನ್ನು ಕೆಸರಿನಿಂದ ತುಂಬಿರುವ ಚರಂಡಿಯನ್ನು ಸ್ವಚ್ಛ ಮಾಡದೇ ಅದೇಷ್ಟೋ ದಿನಗಳೇ ಕಳೆದಿವೆ. ವಿದ್ಯುತ್ ತಂತಿಯಂತೂ ಕಂಬದ ಮೇಲೆ ಜೋತಾಡುತ್ತಿವೆ. ಇಷ್ಟೇಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಇಲ್ಲಿನ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ಮಾಡಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಇಲ್ಲಿನ ನಿವಾಸಿ ಶಂಕರ್ ಎಂಬುವವರು ಮೂರು ವರ್ಷಗಳಿಂದ ನಿಂತಲ್ಲಿಯೇ ಇಷ್ಟು ನೀರು ನಿಂತಿದೆ. ಸಣ್ಣ ಮಕ್ಕಳು, ವೃದ್ಧರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ನಾವು ಜೀವನ ಮಾಡುವುದಾದ್ರೂ ಹೇಗೆ..? ಎಲ್ಲಾರು ಬರುತ್ತಾರೆ, ನೋಡುತ್ತಾರೆ, ಹೋಗುತ್ತಾರೆ. ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕಿಡಿಕಾರಿದರು.
ಈ ರಸ್ತೆಯಲ್ಲಿ ದೊಡ್ಡ ದೊಡ್ಡ ಲಾರಿಗಳನ್ನು ರಸ್ತೆ ಪಕ್ಕದಲ್ಲಿ ಜನರ ಓಡಾಟಕ್ಕೆ ತೊಂದರೆ ಆಗುವಂತೆ ಪಾರ್ಕಿಂಗ್ ಮಾಡುತ್ತಾರಂತೆ. ಇನ್ನು ಕೆಸರಿನಿಂದ ತುಂಬಿರುವ ಚರಂಡಿಯನ್ನು ಸ್ವಚ್ಛ ಮಾಡದೇ ಅದೇಷ್ಟೋ ದಿನಗಳೇ ಕಳೆದಿವೆ. ವಿದ್ಯುತ್ ತಂತಿಯಂತೂ ಕಂಬದ ಮೇಲೆ ಜೋತಾಡುತ್ತಿವೆ.
ಇಷ್ಟೇಲ್ಲಾ ಸಮಸ್ಯೆಗಳನ್ನು ಅನುಭವಿಸುತ್ತಿರುವ ಇಲ್ಲಿನ ನಿವಾಸಿಗಳು ಸೋಮವಾರ ಪ್ರತಿಭಟನೆ ನಡೆಸಿದರು. ರಸ್ತೆ ತಡೆ ಮಾಡಿ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
Laxmi News 24×7